ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಹೇಗೆ? ಸಮಯ, ಮುಹೂರ್ತ ಯಾವಾಗ?

ದೀಪಾವಳಿಯ ಪ್ರಮುಖ ಆಚರಣೆಯಾದ ಲಕ್ಷ್ಮೀ ಪೂಜೆಯನ್ನು ಈ ವರ್ಷ ನವೆಂಬರ್ 8ರ ಭಾನುವಾರ ಆಚರಿಸಲಾಗುತ್ತಿದೆ. ಈ ದಿನದಂದು ಧನಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಪ್ರದೋಷ ಕಾಲದಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಾಗುತ್ತದೆ.

ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಹೇಗೆ?

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 8, 2026 7:00 AM

ಬೆಂಗಳೂರು: ದೀಪಾವಳಿಯ (Diwali 2026) ಪ್ರಮುಖ ಆಚರಣೆಯಾದ ಲಕ್ಷ್ಮೀ ಪೂಜೆಯನ್ನು (Lakshmi Pooje) ಈ ವರ್ಷ ನವೆಂಬರ್ 8ರ ಭಾನುವಾರ ಆಚರಿಸಲಾಗುತ್ತಿದೆ. ಈ ದಿನದಂದು ಧನಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಪ್ರದೋಷ ಕಾಲದಲ್ಲಿ ಲಕ್ಷ್ಮೀ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಾಗುತ್ತದೆ. ಈ ಬಾರಿಯ ದೀಪಾವಳಿ ಲಕ್ಷ್ಮೀ ಪೂಜೆಯ ದಿನದಂದು ಇಡೀ ದಿನ ಸ್ವಾತಿ ನಕ್ಷತ್ರ ಇರಲಿದೆ. ಇದರೊಂದಿಗೆ ಬೆಳಿಗ್ಗೆಯಿಂದಲೇ ಅತ್ಯಂತ ಶ್ರೇಷ್ಠವಾದ ಆಯುಷ್ಮಾನ್ ಯೋಗ ಇರಲಿದ್ದು, ಈ ಶುಭ ಸಮಯದಲ್ಲಿ ದೇವಿಯನ್ನು ಆರಾಧಿಸುವುದರಿಂದ ಕುಟುಂಬದಲ್ಲಿ ಸುಖ, ಸಮೃದ್ಧಿ ಹೆಚ್ಚುವುದಲ್ಲದೆ, ಆರೋಗ್ಯ ಮತ್ತು ಆಯುಸ್ಸು ವೃದ್ಧಿಯಾಗುತ್ತದೆ ಎಂಬ ಬಲವಾದ ನಂಬಿಕೆಯಿದೆ.

ನವೆಂಬರ್‌ 8, ಭಾನುವಾರ ಅಮಾವಾಸ್ಯೆ ತಿಥಿ ಆರಂಭವಾಗುತ್ತದೆ. 2026ರ ನವೆಂಬರ್‌ 8, ಭಾನುವಾರ ಬೆಳಗ್ಗೆ 11:27 ಅಮಾವಾಸ್ಯೆ ತಿಥಿ ಮುಕ್ತಾಯಗೊಳ್ಳಲಿದೆ. ಭಾನುವಾರ ಸಂಜೆ 5:54 7:50. ಲಕ್ಷ್ಮಿ ದೇವಿಯು ಮುಸ್ಸಂಜೆ ಸಮಯದಲ್ಲಿ ತನ್ನ ಸಂಚಾರವನ್ನು ಪ್ರಾರಂಭಿಸುವುದರಿಂದ ಈ ಸಮಯದಲ್ಲಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಲಕ್ಷ್ಮೀ ಪೂಜೆ ಮಾಡುವುದು ಹೇಗೆ?

ಮೊದಲು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ, ಮಾವಿನ ಎಲೆ ಮತ್ತು ಹೂವುಗಳಿಂದ ಅಲಂಕರಿಸಿ. ಒಂದು ಮರದ ಮಣೆ ಇಟ್ಟು, ಅದರ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಹೊಸ ಬಟ್ಟೆಯನ್ನು ಹಾಸಿ. ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಹರಡಿ. ಬೆಳ್ಳಿ ಅಥವಾ ತಾಮ್ರದ ಬಿಂದಿಗೆಗೆ ನೀರು ತುಂಬಿಸಿ, ಅದರಲ್ಲಿ ಅಡಿಕೆ, ನಾಣ್ಯ, ಅರಿಶಿನ, ಕುಂಕುಮ ಹಾಕಿ. ಕಳಸದ ಬಾಯಿಗೆ ಮಾವಿನ ಎಲೆಗಳನ್ನು ಇಟ್ಟು, ಮೇಲೆ ತೆಂಗಿನಕಾಯಿಯನ್ನು ಇರಿಸಿ. ಕಳಸದ ಪಕ್ಕದಲ್ಲಿ ಲಕ್ಷ್ಮೀ ದೇವಿ ಮತ್ತು ವಿಘ್ನನಿವಾರಕ ಗಣೇಶನ ಮೂರ್ತಿ ಅಥವಾ ಫೋಟೋವನ್ನು ಇರಿಸಿ. ನಂತರ ಅರಿಶಿಣ ಕುಂಕುಮ ಹಚ್ಚಿ ಪೂಜೆ ಮಾಡಿ.

ಪೂಜೆ ಮಾಡುವಾಗ ಈ ಕೆಳಗಿನ ಸ್ತೋತ್ರವನ್ನು ಪಠಿಸಿ

ಶ್ರೀ ಮಹಾಲಕ್ಷ್ಮಿ ಅಷ್ಟಕಂ

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ

ಶಂಖಚಕ್ರಗದ ಹಸ್ತೇ ಮಹಾಲಕ್ಷ್ಮಿ ನಮೋಸ್ತು ತೇ

ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ

ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತು ತೇ

ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರಿ

ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋಸ್ತು ತೇ

ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ

ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತು ತೇ

ಆದ್ಯಂತರಹಿತೇ ದೇವಿ ಆದ್ಯಶಕ್ತಿ ಮಹೇಶ್ವರಿ

ಯೋಗಜೇ ಯೋಗಸಂಭೂತೇ ಮಹಾಲಕ್ಷ್ಮಿ ನಮೋಸ್ತು ತೇ

ಸ್ಥೂಲಸೂಕ್ಷ್ಮಮಹಾರೌದ್ರೇ ಮಹಾಶಕ್ತಿ ಮಹೋದರೇ

ಮಹಾಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತು ತೇ

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮಸ್ವರೂಪಿಣಿ

ಪರಮೇಶಿ ಜಗನ್ಮಾತರ್ ಮಹಾಲಕ್ಷ್ಮಿ ನಮೋಸ್ತು ತೇ

ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ

ಜಗತ್ಸ್ಥಿತೇ ಜಗನ್ಮಾತರ್ ಮಹಾಲಕ್ಷ್ಮಿ ನಮೋಸ್ತು ತೇ