ಭೂಮಿಗೆ ಏಲಿಯನ್ಸ್ ಆಗಮನ, ಭೀಕರ ಭೂಕಂಪ; ಬಾಬಾ ವಂಗಾ 2026ರ ಭವಿಷ್ಯದಲ್ಲಿ ಹೇಳಿದ್ದೇನು?
ಅನ್ಯಲೋಕದವರು ಭೂಮಿಯನ್ನು ಸಂಪರ್ಕಿಸುತ್ತಾರೆ, ಮಾರುಕಟ್ಟೆಯಲ್ಲಿ ಕುಸಿತ ಮುಂದುವರಿಯುತ್ತದೆ, ಏಷ್ಯಾ ಅದರಲ್ಲೂ ವಿಶೇಷವಾಗಿ ಚೀನಾ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತದೆ..ಇವೆಲ್ಲವೂ 2026ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು. ಇದು ನಿಜವಾಗುವ ಲಕ್ಷಣಗಳು ಗೋಚರವಾಗಿದ್ದರೂ ಸ್ಪಷ್ಟತೆಗೆ ಕಾಯಬೇಕಿದೆ. 2026ಕ್ಕೆ ಬಾಬಾ ವಂಗಾ ನುಡಿದಿರುವ ಹಲವು ಭವಿಷ್ಯವಾಣಿಗಳ ಕುರಿತು ಮಾಹಿತಿ ಇಲ್ಲಿವೆ.
ಬಾಬಾ ವಂಗಾ (ಸಂಗ್ರಹ ಚಿತ್ರ) -
ಬೆಂಗಳೂರು, ಜ. 1: ಹೊಸ ವರ್ಷದ ಆಗಮನದ ಸಂಭ್ರಮ ಒಂದು ಕಡೆಯಾದರೆ ಬಾಬಾ ವಂಗಾ (Baba Vanga) ನುಡಿದಿರುವ ಭವಿಷ್ಯವಾಣಿಗಳ (Baba Vanga Predictions 2026) ಕುರಿತು ಕುತೂಹಲ ಮತ್ತೊಂದು ಕಡೆ. 2026ರಲ್ಲಿ ನಡೆಯಬಹುದಾದ ಹಲವು ಘಟನೆಗಳ ಬಗ್ಗೆ 1996ರ ಮೊದಲೇ ಭವಿಷ್ಯ ನುಡಿದಿದ್ದ ಬಲ್ಗೇರಿಯಾದ ಮಹಿಳೆ ಬಾಬಾ ವಂಗಾ ಅವರ ನಿಜವಾದ ಹೆಸರು ವಾಂಗೆಲಿಯಾ ಪಂದೇವ ಗುಷ್ಟೆರೋವಾ. ಕುರುಡಿಯಾಗಿದ್ದ ಅವರು ನುಡಿದಿರುವ ಅನೇಕ ಭವಿಷ್ಯವಾಣಿಗಳು (Prediction) ನಿಜವಾಗಿವೆ. ಹೀಗಾಗಿ 2026ರ ಬಗ್ಗೆ ಅವರು ಏನು ಹೇಳಿರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.
2026ರಲ್ಲಿ ಜಾಗತಿಕ ಸಂಘರ್ಷ ಹೆಚ್ಚಾಗುವ ಮುನ್ಸೂಚನೆಯನ್ನು ನೀಡಿರುವ ಬಾಬಾ ವಂಗಾ ನೈಸರ್ಗಿಕ ವಿಕೋಪಗಳು, ಅನ್ಯಲೋಕದ ಜೀವಿಗಳು ಭೂಮಿಯನ್ನು ಸಂಪರ್ಕಿಸುವುದಾಗಿ ಕೂಡ ಹೇಳಿದ್ದಾರೆ. ಇದರೊಂದಿಗೆ ಏಷ್ಯಾ ವಿಶೇಷವಾಗಿ ಚೀನಾ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಹಿರಹೊಮ್ಮುವ ಸೂಚನೆ ಕೂಡ ನೀಡಿದ್ದಾರೆ.
ಮುಂದಿನ ವರ್ಷ ಚಿನ್ನ ಖರೀದಿ ಮಾಡಬಹುದೇ? ಬಾಬಾ ವಂಗಾ ಭವಿಷ್ಯವೇನು?
2025ರಲ್ಲೇ ಆರ್ಥಿಕ ಕುಸಿತದಿಂದ ಹಲವು ರಾಷ್ಟ್ರಗಳು ಕಂಗೆಟ್ಟಿದ್ದು, ಇದು 2026ರಲ್ಲಿ ಮುಂದುವರಿಯುವ ಸೂಚನೆಯನ್ನು ಕೂಡ ಬಾಬಾ ವಂಗಾ ನೀಡಿದ್ದಾರೆ. ಇವೆಲ್ಲವೂ ಈಗ ವಿಶ್ವಾದ್ಯಂತ ಚರ್ಚೆ ಮತ್ತು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜಕುಮಾರಿ ಡಯಾನಾ ಅವರ ದುರಂತ ಸಾವು, ಕೋವಿಡ್-19 ಸಾಂಕ್ರಾಮಿಕದ ಬಗ್ಗೆ ಮೊದಲೇ ಸೂಚಿಸಿದ್ದ ವಂಗಾ 2026ರ ಬಗ್ಗೆ ನೀಡಿರುವ ಭವಿಷ್ಯವಾಣಿಗಳು ಇಂತಿವೆ.
ಬಾಬಾ ವಂಗಾ ಅವರ ಭವಿಷ್ಯವಾಣಿ:
🇧🇬 BABA VANGA’S 2026 PROPHECIES: ALIENS IN NOVEMBER, CHAOS ALL YEAR
— Mario Nawfal (@MarioNawfal) December 19, 2025
A famous Bulgarian mystic known as Baba Vanga allegedly left behind big predictions for 2026, and they have resurfaced just in time to hijack everyone’s attention span.
She supposedly predicted humans will make… pic.twitter.com/61SvJ2y1Cu
ಜಾಗತಿಕ ಸಂಘರ್ಷ
2026ರಲ್ಲಿ ಅತೀ ದೊಡ್ಡ ಪ್ರಮಾಣದ ಜಾಗತಿಕ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚಾಗಲಿದೆ. ಅಮೆರಿಕ, ರಷ್ಯಾ ಮತ್ತು ಚೀನಾದಂತಹ ಪ್ರಮುಖ ಶಕ್ತಿಗಳನ್ನು ಒಳಗೊಂಡಂತೆ ಸಂಘರ್ಷ ಉಂಟಾಗುವ ಮುನ್ಸೂಚನೆಯನ್ನು ವಂಗಾ ನೀಡಿದ್ದಾರೆ. ಈಗಾಗಲೇ ತೈವಾನ್ ಸಮಸ್ಯೆ, ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಉಂಟಾಗಿರುವ ವಿವಾದಗಳು ಇದರ ಮುನ್ಸೂಚನೆಯಂತೆ ಕಂಡು ಬರುತ್ತಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು.
ನೈಸರ್ಗಿಕ ವಿಕೋಪ
2026ರಲ್ಲಿ ನೈಸರ್ಗಿಕ ವಿಕೋಪಗಳ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ಬಾಬಾ ವಂಗಾ ತಿಳಿಸಿದ್ದಾರೆ. ಪ್ರಬಲ ಭೂಕಂಪಗಳು, ಜ್ವಾಲಾಮುಖಿ ಸ್ಫೋಟ ಮತ್ತು ಹವಾಮಾನ ವೈಪರೀತ್ಯದಂತಹ ಘಟನೆಗಳ ಬಗ್ಗೆ ಉಲ್ಲೇಖಿಸಿರುವ ಅವರು ಇದು ನಿಜವಾಗುತ್ತಿರುವುದನ್ನು ವಿಜ್ಞಾನಿಗಳು ಈ ಮೊದಲೇ ದೃಢಪಡಿಸಿದ್ದಾರೆ.
ಅನ್ಯಗ್ರಹಗಳ ಜೀವಿಗಳ ಸಂಪರ್ಕ
2026ರಲ್ಲಿ ಅನ್ಯಗ್ರಹದ ಜೀವಿಗಳು ಭೂಮಿಯನ್ನು ಸಂಪರ್ಕಿಸಲಿದೆ ಎಂದು ವಂಗಾ ತಿಳಿಸಿದ್ದಾರೆ. ಇದರ ಸೂಚನೆ ಎಂಬಂತೆ 2025ರ ಜುಲೈಯಲ್ಲಿ ಖಗೋಳಶಾಸ್ತ್ರಜ್ಞರು ಚಿಲಿಯಲ್ಲಿ ಅಟ್ಲಾಸ್ ದೂರದರ್ಶಕದಿಂದ ಅಂತರತಾರಾ ವಸ್ತುವಾದ 3I/ಅಟ್ಲಾಸ್ ಅನ್ನು ಗುರುತಿಸಿದ್ದರು. ಇದು ಹೈಪರ್ಬೋಲಿಕ್ ಪಥವನ್ನು ಅನುಸರಿಸಿದ್ದು, ಸೌರವ್ಯೂಹದ ಹೊರಗೆ ಹುಟ್ಟಿಕೊಂಡಿರುವುದನ್ನು ದೃಢಪಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ವಿಜ್ಞಾನಿಗಳು ಇದನ್ನು ಕೃತಕವಲ್ಲ ನೈಸರ್ಗಿಕ ಅಂತರತಾರಾ ವಸ್ತು ಎಂದು ತಿಳಿಸಿದ್ದಾರೆ.
ಜಾಗತಿಕ ಶಕ್ತಿ ಕೇಂದ್ರವಾಗಿ ಏಷ್ಯಾ
ಬಾಬಾ ವಂಗಾ ಅವರ ಭವಿಷ್ಯವಾಣಿಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ 2026ರಲ್ಲಿ ಏಷ್ಯಾ ಅದರಲ್ಲೂ ಮುಖ್ಯವಾಗಿ ಚೀನಾ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇದು ಜಾಗತಿಕ ಶಕ್ತಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತವೆ ಎಂಬುದಾಗಿ ಅವರು ತಿಳಿಸಿದ್ದಾರೆ.
ಏಲಿಯನ್‌ಗಳು ಯಾವ ದೇಶಕ್ಕೆ ಮೊಟ್ಟ ಮೊದಲ ಸಂದೇಶ ಕಳುಹಿಸಲಿದ್ದಾರೆ ಗೊತ್ತಾ?
ತೀವ್ರ ಆರ್ಥಿಕ ಹಿಂಜರಿತ
2026 ತೀವ್ರ ಆರ್ಥಿಕ ಹಿಂಜರಿತಕ್ಕೆ ಸಾಕ್ಷಿಯಾಗುತ್ತದೆ ಎಂದಿದ್ದಾರೆ ಬಾಬಾ ವಂಗಾ. ಇದರಿಂದ ಬ್ಯಾಂಕಿಂಗ್ ಅಸ್ಥಿರತೆ, ಕರೆನ್ಸಿ ಅಡಚಣೆಗಳು, ಮಾರುಕಟ್ಟೆ ಚಂಚಲತೆ ಮತ್ತು ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.