Astro Tips: ಮಾವಿನ ಎಲೆಗಳಿಂದ ಈ ಸರಳ ಪರಿಹಾರ ಮಾಡಿದರೆ ಸಾಕು: ಸಾಲ, ದೋಷಗಳು ದೂರಾಗಿ ಸಮೃದ್ಧಿ ಬರುತ್ತದೆ!
ಮಾವಿನ ಎಲೆಗಳು ಸನಾತನ ಸಂಪ್ರದಾಯದಲ್ಲಿ ಪವಿತ್ರವಾಗಿದ್ದು, ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮಾವಿನ ಎಲೆಗಳಿಂದ ಮಾಡುವ ಸರಳ ಪರಿಹಾರಗಳು ಸಾಲದ ಸಮಸ್ಯೆ ನಿವಾರಣೆ, ಕೆಟ್ಟ ದೃಷ್ಟಿಯಿಂದ ರಕ್ಷಣೆ, ಆರ್ಥಿಕ ಸ್ಥಿರತೆ ಹಾಗೂ ಜೀವನದಲ್ಲಿನ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಮಾವಿನ ಎಲೆ -
ಬೆಂಗಳೂರು: ಮಾವಿನ ಎಲೆಗಳನ್ನು ಸನಾತನ ಸಂಪ್ರದಾಯದಲ್ಲಿ ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಈ ಮರದ ಎಲೆಗಳಿಂದ ಹಿಡಿದು ಅದರ ಕಟ್ಟಿಗೆವರೆಗೂ ವಿವಿಧ ಧಾರ್ಮಿಕ ಹಾಗೂ ಶುಭ ಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ. ವಿಶೇಷವಾಗಿ ಪೂಜೆಗಳಲ್ಲಿ ಮಾವಿನ ಎಲೆಗಳಿಗೆ ಮಹತ್ವ ಹೆಚ್ಚಿದ್ದು, ಅವುಗಳಿಲ್ಲದೆ ಪೂಜೆ ಪೂರ್ಣವಾಗುವುದಿಲ್ಲ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ
ಪ್ರಕಾರ, ಮಾವಿನ ಎಲೆಗಳು ಮನೆಯಲ್ಲಿರುವ ದೋಷಗಳನ್ನು ನಿವಾರಿಸಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇವುಗಳನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ.
ಮಾವಿನ ಎಲೆಗಳಿಗೆ ಸಂಬಂಧಿಸಿದ ಅನೇಕ ಪರಿಹಾರಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಈ ಸರಳ ವಿಧಾನಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಎದುರಾಗುವ ಹಲವಾರು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗಾದರೆ, ಮಾವಿನ ಎಲೆಗಳ ಮೂಲ ಯಾವ ಯಾವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಸಾಲದ ಸಮಸ್ಯೆ ನಿವಾರಣೆ:
ನೀವು ಸಾಲದ ಒತ್ತಡದಲ್ಲಿ ಇದ್ದರೆ, 11 ಮಾವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಒದ್ದೆ ಹತ್ತಿಯಲ್ಲಿ ಕಟ್ಟಿ ಜೇನುತುಪ್ಪದಲ್ಲಿ ತೊಯ್ದು ಶಿವಲಿಂಗದ ಮೇಲೆ ಅರ್ಪಿಸಿ. ಈ ವಿಧಾನವು ಆರ್ಥಿಕ ಭಾರವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.
ಕೆಟ್ಟ ದೃಷ್ಟಿಯಿಂದ ರಕ್ಷಣೆ:
ಮನೆಯ ಮುಖ್ಯ ಬಾಗಿಲಿಗೆ ಮಾವಿನ ಎಲೆಗಳನ್ನು ಕಟ್ಟುವುದರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ. ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಮತ್ತು ಸದಾ ಶಾಂತಿ ನೆಲೆಸುತ್ತದೆ.
Astro Tips: ಶನಿವಾರ ಈ ಕೆಲಸ ಮಾಡಿದರೆ, ಅಪ್ಪಿತಪ್ಪಿಯೂ ಹಣಕಾಸಿನ ಸಮಸ್ಯೆ ಬರೋದಿಲ್ಲ!
ಆರ್ಥಿಕ ಲಾಭಕ್ಕಾಗಿ:
ಪೂಜೆ ಸಮಯದಲ್ಲಿ ಮಾವಿನ ಎಲೆಗಳಿಂದ ಮನೆಯಲ್ಲಿನ ಎಲ್ಲಾ ಕಡೆಗಳಿಗೆ ನೀರನ್ನು ಸಿಂಪಡಿಸುವುದು ಉತ್ತಮ. ಇದರಿಂದ ಧನಲಾಭ ಹಾಗೂ ಆರ್ಥಿಕ ಸ್ಥಿರತೆ ಬರುತ್ತದೆ ಎಂಬ ನಂಬಿಕೆ ಇದೆ.
ಜೀವನದ ಸಮಸ್ಯೆಗಳ ಪರಿಹಾರ:
ಮಾವಿನ ಮರದ ಬೇರುಗಳಿಗೆ ನೀರು ಅರ್ಪಿಸಿ, ಮರಕ್ಕೆ ನಮಸ್ಕರಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ಕಡಿಮೆಯಾಗುತ್ತವೆ ಮತ್ತು ಯಶಸ್ಸಿನ ದಾರಿ ನಿಮ್ಮದಾಗುತ್ತದೆ.
ಭಕ್ತಿ ಮತ್ತು ಕೃಪೆಗಾಗಿ:
ಹನುಮಂತನಿಗೆ ಮಾವು ಪ್ರಿಯವಾದುದರಿಂದ, ಮಾವಿನ ಎಲೆಯ ಮೇಲೆ ಶ್ರೀಗಂಧದಿಂದ “ಜೈ ಶ್ರೀ ರಾಮ” ಎಂದು ಬರೆದು ಅರ್ಪಿಸುವುದು ವಿಶೇಷ ಫಲ ನೀಡುತ್ತದೆ. ಇದರಿಂದ ದೇವರ ಕೃಪೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ನಂಬಲಾಗಿದೆ.
ಇವುಗಳನ್ನು ನಂಬಿಕೆಯೊಂದಿಗೆ ಮತ್ತು ಶ್ರದ್ಧೆಯಿಂದ ಅನುಸರಿಸಿದರೆ, ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುಖ ದೊರೆಯುತ್ತದೆ ಎಂದು ಹೇಳಲಾಗುತ್ತದೆ.