ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Horoscope Today November 13th: ದಿನ ಭವಿಷ್ಯ; ಕೇತುವಿನಿಂದ ಈ ರಾಶಿಗೆ ಅದೃಷ್ಟದ ಯೋಗ: ಅಂದುಕೊಂಡದ್ದೆಲ್ಲ ಸಿದ್ದಿ..

ನಿತ್ಯ ಭವಿಷ್ಯ ನವೆಂಬರ್‌ 13, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷ, ನವಮಿ ತಿಥಿ, ಮಘಾ ನಕ್ಷತ್ರದ ನವೆಂಬರ್ 13 ನೇ ತಾರೀಖಿನ ಗುರುವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ.

ಕೇತುವಿನಿಂದ ಈ ರಾಶಿಗೆ ಭಾರೀ ಯಶಸ್ಸು!

ದಿನ ಭವಿಷ್ಯ -

Profile
Pushpa Kumari Nov 13, 2025 7:00 AM

ಬೆಂಗಳೂರು: ಇಂದು ವಿಶ್ವವಸುನಾಮ ಸಂವತ್ಸರದ ದಕ್ಷಿಣಾಯನ ಶರದೃತು ಕಾರ್ತಿಕ ಮಾಸೆ, ಕೃಷ್ಣ ಪಕ್ಷದ ನವಮಿ ತಿಥಿ, ಮಘಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮಘಾ ನಕ್ಷತ್ರದ ಅಧಿಪತಿ ಕೇತು ಆಗಿದ್ದಾನೆ.‌ ಇದರಿಂದ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಕ್ಲಿಷ್ಟಕರವಾದ ದಿನವಾಗಿದೆ‌. ಬೇರೆಯವರ ಜೊತೆ ಮಾತಿನ ಚಕಮಕಿಗಳು ಇಂದು ನಡೆಯಬಹುದು. ಅಥವಾ ಮನಸ್ಸಿನಲ್ಲಿ ಅತೀ ಹೆಚ್ಚಿನ ಬೇಸರ ಮಾಡಿಕೊಂಡು ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಅಥವಾ ಅತೀ ನಿಷ್ಠುರ ವಾದ ಮಾತುಗಳನ್ನು ಹೇಳಿ ಬೀಡುವ ಸಾಧ್ಯತೆ ಹೆಚ್ಚು ಇರುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಆಸ್ತಿ ಪಾಸ್ತಿ ವಿಚಾರ ತಾಯಿಯ ಆರೋಗ್ಯ ಬಗ್ಗೆ ಮನಸ್ಸಿಗೆ ಬಹಳಷ್ಟು ಬೇಸರವಾಗುತ್ತದೆ. ಮನಸ್ಸಿಗೆ ನಿರ್ಲಿಪ್ತ ಭಾವನೆ ಬಂದು ಬಿಡಬಹುದು. ಆದರೆ ಯಾರ ಜೊತೆಗೂ ಇಂದು ಕಠೋರವಾಗಿ ನಡೆಸಿಕೊಳ್ಳಬೇಡಿ.

‌ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತೀ ಉತ್ತಮವಾದ ದಿನವಾಗಿದೆ. ಸಾಮಾಜಿಕ ವ್ಯವಹಾರ,ಮಾಸ್ ಮೀಡಿಯಾ ರೇಡಿಯೊ, ಟಿವಿ,ಜಾಹೀರಾತಿನಲ್ಲಿ ಕೆಲಸ ಮಾಡೋರಿಗೆ ಅತೀ ಹೆಚ್ಚಿನ ಪ್ರಗತಿ ಇರುವ ದಿನವಾಗಿದೆ

ಕಟಕ ರಾಶಿ: ಕಟಕ ರಾಶಿ ಅವರಿಗೆ ಸಂಸಾರದ ತಾಪತ್ರಯಗಳು ಹೆಚ್ಚು ಇರುವಂತಹ ದಿನವಾಗಿದೆ. ಇತರರ ಜೊತೆ ಜಗಳ, ಚರ್ಚೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ‌ನಿಮ್ಮ ಮನೆಯವರ ಜೊತೆಯೇ ಜಗಳ ಆಗುವ ಸಾಧ್ಯತೆ ಇದೆ.

ಇದನ್ನು ಓದಿ: Vastu Tips: ಮನೆಯ ಈ ದಿಕ್ಕುಗಳಲ್ಲಿ ತಪ್ಪಿಯೂ ಕಸದ ಬುಟ್ಟಿಯನ್ನು ಇಡಬೇಡಿ..!

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮುಂದಿನ ಜೀವನದ ಬಗ್ಗೆ ಉತ್ತಮ ಮಾರ್ಗದರ್ಶನ ನಿಮಗೆ ಸಿಗುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಕಷ್ಟಕರವಾದ ವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರು ವುದಿಲ್ಲ ಕ್ಷೇಷ ಉಂಟಾಗುವ ಸಾಧ್ಯತೆ ಇದೆ. ಮುಖ್ಯವಾದ ಕೆಲಸದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಹೋಗಬೇಡಿ.‌‌

ತುಲಾ ರಾಶಿ: ತುಲಾ ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದ್ದು ಮಿತ್ರರಿಂದ,ಗುಂಪು ಗಳಿಂದ ಧನ ಆಗಮನ ಆಗಲಿದೆ.‌ ಇಷ್ಟಾರ್ಥ ಸಿದ್ದಿ ಯಾಗಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಗಲಿದೆ. ಆದರೆ ಇಂದು ನಿಮ್ಮ ಪಾಡಿಗೆ ನೀವು ಕೆಲಸ ಕಾರ್ಯಗಳನ್ನು ಮಾಡಿದರೆ ಒಳಿತು ಆಗಲಿದೆ‌. ಕೆಲಸದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಭಾಗ್ಯೋದಯವಾದ ದಿನ ವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನಗಳ ಮನಸ್ಸಿನ ನೋವು ಮಯವಾಗಲಿದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರದಲ್ಲಿ ಯಾವುದೇ ನಿರ್ಧಾರಗಳು ಬೇಡ. ಹೆಚ್ಚಿನ ಯೋಚನೆಗಳು ಕಾಡುತ್ತವೆ. ಆದರೆ ನಾಳೆಗೆ ಎಲ್ಲವೂ ಸರಿಯಾಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಎಲ್ಲ ರೀತಿಯಿಂದಲೂ ಸಹಕಾರ ಸಿಗುತ್ತದೆ.‌ ಮನಸ್ಸಿಗೆ ಬಹಳಷ್ಟು ನೆಮ್ಮದಿ ಕೂಡ ಪ್ರಾಪ್ತಿಯಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಕಾರ್ಯಕ್ಕೆ ಇದ್ದ ಅಡಚಣೆ ಎಲ್ಲವೂ ದೂರವಾಗಲಿದೆ. ಹಿಂದೆ ಇದ್ದಂತಹ ಎಲ್ಲ ಸಮಸ್ಯೆ ಬಗೆಹರಿಯಲಿದೆ.