Daily Horoscope: ಇಂದು ಈ ರಾಶಿಯವರಿಗೆ ಶನೇಶ್ವರನ ಕೃಪೆಯಿಂದ ಯಶಸ್ಸು
Daily Horoscope 06/10/25: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಚತುರ್ಥಿ ತಿಥಿ ಮತ್ತು ಉತ್ತರ ಭಾದ್ರಾ ನಕ್ಷತ್ರ ಇದ್ದು, ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

Daily Horoscope -

ಬೆಂಗಳೂರು: ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಚತುರ್ಥಿ ತಿಥಿ, ಅಕ್ಟೋಬರ್ 6ನೇ ತಾರೀಕಿನ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ:
ಮೇಷ ರಾಶಿ: ಇಂದು ಉತ್ತರ ಭಾದ್ರ ನಕ್ಷತ್ರ ಇದ್ದು, ಇದರ ಅಧಿಪತಿ ಗುರು ಆಗಿದ್ದು ಶನೇಶ್ವರನ ಕೃಪೆ ಕೂಡ ಇರಲಿದೆ. ಹೀಗಾಗಿ ಇದರಿಂದ ಎಲ್ಲ ರಾಶಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಧ್ಯಾಹ್ನ ಬಳಿಕ ಸ್ವಲ್ಪ ಸೋಲು ಉಂಟಾಗಬಹುದು. ಮುಖ್ಯವಾದ ನಿರ್ಧಾರ ಇಂದು ಮಾಡಲು ಹೋಗಬೇಡಿ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇದ್ದು, ಕಾರ್ಯಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗಲಿದೆ. ಮಧ್ಯಾಹ್ನ ಬಳಿಕ ನಿಮ್ಮ ಮಿತ್ರರ ಜತೆ ಸಂತೋಷದ ದಿನವನ್ನು ನೀವು ಕಳೆಯಲಿದ್ದೀರಿ. ಧನಾಗಮನ ಆಗುವ ನಿರೀಕ್ಷೆ ಕೂಡ ಇದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಕಾರ್ಯ ಕ್ಷೇತ್ರದಲ್ಲಿ ಅಡೆತಡೆ ಉಂಟಾಗುತ್ತದೆ. ಮಧ್ಯಾಹ್ನ ಬಳಿಕ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಆದರೂ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ನಿಮಗೆ ಸಿಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಕ್ಷೇಷ ಬರಬಹುದು. ಮಧ್ಯಾಹ್ನ ಬಳಿಕ ಅದೃಷ್ಟ ಕೈಗೂಡಲಿದ್ದು, ಕೆಲಸ ಕಾರ್ಯದಲ್ಲಿ ಮುಂದೆ ಹೋಗುತ್ತೀರಿ. ಆದರೂ ಭಗವಂತನ ಆಶೀರ್ವಾದ ಪಡೆಯಲು ಮರೆಯಬೇಡಿ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೆ ಅತ್ಯುತ್ತಮವಾಗಿದ್ದು ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೆ ಮಧ್ಯಾಹ್ನ ಬಳಿಕ ಮನಸ್ಸಿಗೆ ಕ್ಷೇಷ ಉಂಟಾಗಬಹುದು. ಯಾರು ಕೂಡ ನಿಮಗೆ ಸಹಕಾರ ನೀಡದೆ ಇರಬಹುದು. ನಿಮಗೆ ಮುಖ್ಯವಾದವರೆ ಸಹಕಾರ ನೀಡದೆ ಇರಬಹುದು. ಎರಡು ದಿನಗಳ ವರೆಗೆ ಮುಖ್ಯ ನಿರ್ಧಾರ ಬೇಡ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಮಧ್ಯಾಹ್ನವರೆಗೂ ಸಾಮಾಜಿಕ ವ್ಯವಹಾರದಲ್ಲಿ ಅತೀ ಹೆಚ್ಚಿನ ಗಮನ ನೀಡುತ್ತೀರಿ. ಮಧ್ಯಾಹ್ನ ಬಳಿಕ ವೈಯಕ್ತಿಕ ಜೀವನಕ್ಕೂ ಸಮಯ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಖುಷಿ ಸಿಗಲಿದೆ.
ಇದನ್ನು ಓದಿ:Vastu Tips: ಮನೆ ಸಮೀಪ ತಾಳೆ ಮರವಿದ್ದರೆ ಎದುರಾಗುವುದೇ ಸಮಸ್ಯೆ?
ತುಲಾ ರಾಶಿ: ತುಲಾ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಕ್ಷೇಷ ಇರುತ್ತದೆ. ಹಾಗೆಯೇ ಮುಖ್ಯವಾದ ವಿಚಾರದಲ್ಲಿ ತೊಂದರೆ ಇರಬಹುದು. ಮಧ್ಯಾಹ್ನ ಬಳಿಕ ಜಯ ಪ್ರಾಪ್ತಿಯಾಗಲಿದ್ದು ಶತ್ರುಗಳಿಂದ ಗೆಲುವು ಪಡೆದುಕೊಳ್ಳುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಮನೆಯ ಬಗ್ಗೆ ನಾನಾ ಯೋಚನೆ ಬರಬಹುದು. ಸಂಸಾರ, ಆಸ್ತಿ, ಪಾಸ್ತಿ ವಿಚಾರದಲ್ಲಿ ಕ್ಷೇಷ ಇರಬಹುದು. ಮಧ್ಯಾಹ್ನ ಬಳಿಕ ನಿಮ್ಮ ಗಮನ ಬೇರೆ ಕಡೆ ಹೊಗಿ ಕೆಲಸ ಕಾರ್ಯದಲ್ಲಿ ಮುಳುಗಿ ಹೋಗುತ್ತಿರಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಆತ್ಮವಿಶ್ವಾಸ ಬಹಳ ಚೆನ್ನಾಗಿ ಇರುತ್ತದೆ. ಮಧ್ಯಾಹ್ನ ಬಳಿಕ ಆತ್ಮವಿಶ್ವಾಸ ಕಡಿಮೆಯಾಗಬಹುದು. ನಿಮ್ಮ ಮನೆಯ ಕಡೆ ಹೆಚ್ಚಿನ ಗಮನ ನೀಡಬೇಕು.
ಮಕರ ರಾಶಿ: ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ಸಂಸಾರದ ಬಗ್ಗೆ ಗಮನ ಕೊಡುವಂತಹ ದಿನ ಇದಾಗಿರುತ್ತದೆ. ಮಧ್ಯಾಹ್ನ ಬಳಿಕ ಬಂಧು ಮಿತ್ರರ ಜತೆ ಸುಖದ ದಿನ ಕಳೆಯುತ್ತಿರಿ.
ಕುಂಭರಾಶಿ: ಕುಂಭ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ಬಲ್ಪ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆದರೆ ಮಧ್ಯಾಹ್ನ ಬಳಿಕ ಕುಟುಂಬದ ಜವಾಬ್ದಾರಿ ಹೆಚ್ಚುತ್ತದೆ. ಆರ್ಥಿಕ ಜೀವನ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಸ್ವಲ್ಪ ಕಷ್ಟದ ದಿನ ಆಗುತ್ತದೆ. ಮಧ್ಯಾಹ್ನ ಬಳಿಕ ಸಮಸ್ಯೆ ಪರಿಹಾರವಾಗಿ ಮುಂದಿನ ದಿನದ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ.