ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಗೆ ಪುನಃ ಬಂದು ಸಿಡಿದೆದ್ದ ರಕ್ಷಿತಾ ಶೆಟ್ಟಿ

Rakshita Shetty Bigg Boss Kannada 12: ಸುದೀಪ್ ಅವರು ರಕ್ಷಿತಾರನ್ನು ಪುನಃ ಸ್ಟೇಜ್ ಮೇಲೆ ಕರೆಸಿ ಮನೆಯೊಳಗೆ ಕಳುಹಿಸಿದರು. ಸ್ಟೇಜ್ನಲ್ಲೇ ರಕ್ಷಿತಾ ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದರು. ಮನೆಯೊಳಗೆ ಹೋದ ಮೇಲೂ ರಕ್ಷಿತಾ ಅವರ ಈ ಕೋಪ ಮುಂದೆವರೆಯಿತು.

ಬಿಗ್ ಬಾಸ್ ಮನೆಗೆ ಪುನಃ ಬಂದು ಸಿಡಿದೆದ್ದ ರಕ್ಷಿತಾ

Ashwini Gowda and Rakshita Shetty -

Profile Vinay Bhat Oct 6, 2025 10:32 AM

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಭಾನುವಾರ ನಡೆದ ಮೊದಲ ವಾರದ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್ ಸಾಕಷ್ಟು ರೋಚಕತೆ ಸೃಷ್ಟಿಸಿತು. ಮೊದಲ ದಿನ ಎಲಿಮಿನೇಟ್ ಆಗಿದ್ದ ರಕ್ಷಿತಾ ಶೆಟ್ಟಿ ಪುನಃ ಮನೆ ಸೇರಿದರು. ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟ ರಕ್ಷಿತಾ ಶೆಟ್ಟಿ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆದರು. ಮೊದಲ ದಿನವೇ ಬಿಗ್ ಬಾಸ್​ನಲ್ಲಿ ಎಲಿಮಿನೇಷನ್ ಇರುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಇದ್ದರೂ ಇದೊಂದು ಗಿಮಿಕ್ ಆಗಿರಬಹುದೆಂದು ಅಂದುಕೊಂಡಿದ್ದರು. ಆದರೆ, ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ತಾಣಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎಂದು ಪ್ರಕಟಿಸುವ ಮೂಲಕ ಶಾಕ್ ನೀಡಿತ್ತು. ಆದರೆ, ವಾರಾಂತ್ಯದಲ್ಲಿ ಮನೆಯೊಳಗೆ ಕಮ್​ಬ್ಯಾಕ್ ಮಾಡಿದರು.

ಸುದೀಪ್ ಅವರು ರಕ್ಷಿತಾರನ್ನು ಪುನಃ ಸ್ಟೇಜ್ ಮೇಲೆ ಕರೆಸಿ ಮನೆಯೊಳಗೆ ಕಳುಹಿಸಿದರು. ಸ್ಟೇಜ್​ನಲ್ಲೇ ರಕ್ಷಿತಾ ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದರು. ನಾನು ಹೋಗುವಾಗ ಎಲ್ಲರೂ ನನಗೆ ಸಮಾಧಾನ ಮಾಡಲು ಬಂದರು ಆದರೆ, ಒಬ್ಬರು ಕೂಡ ನನ್ನ ಕಡೆ ಸ್ಟ್ಯಾಂಡ್ ತೆಗೆದುಕೊಳ್ಳಲಿಲ್ಲ. ಅವರಿಗೆ ಹೇಗೆ ಗೊತ್ತು ನಾನು ಹೇಗೆ ಆಡುತ್ತೇನೆ, ಯಾವರೀತಿ ಆಡುತ್ತೇನೆ ಅಂತ ಹೇಳಿ ಗದರಿದ್ದರು. ಮನೆಯೊಳಗೆ ಹೋದ ಮೇಲೂ ರಕ್ಷಿತಾ ಅವರ ಈ ಕೋಪ ಮುಂದೆವರೆಯಿತು.

ರಕ್ಷಿತಾ ಮನೆಯೊಳಗೆ ಹೋದಾಕ್ಷಣ ಮಾತನಾಡಿದ ಮಾತುಗಳಿಗೆ 18 ಜನ ಕಂಟೆಸ್ಟೆಂಟ್‌ಗಳು ಥರಗುಟ್ಟಿ ಹೋದರು. ನನಗೆ ಬಿಗ್‌ ಬಾಸ್‌ ಮನೆಯಲ್ಲಿ ಇರೋಕೆ ಯೋಗ್ಯತೆ ಇದೆ. ಆದರೆ ನನ್ನನ್ನು ಹೊರಗೆ ಹಾಕಿದ್ದಾರೆ. ನೀವೆಲ್ಲ ಕೊಟ್ಟ ಕಾರಣ ಸೂಕ್ತವಾಗಿರಲಿಲ್ಲ. ಇಲ್ಲಿ ಯಾರು ಸೆಲೆಬ್ರಿಟಿ-ನಾನ್‌ ಸೆಲೆಬ್ರಿಟಿಗಳಲ್ಲ. ಚಿಕ್ಕವರು- ದೊಡ್ಡವರಿಲ್ಲ. ದೊಡ್ಡದಾಗಿ ಮಾತನಾಡೋಕೆ ಎಲ್ಲರಿಗೂ ಬರುತ್ತದೆ. ನ್ಯಾಯದ ಹಾಗೆ ಮೊದಲು ಯೋಚನೆ ಮಾಡಬೇಕೆಂದು ರಕ್ಷಿತಾ ಏರುಧ್ವನಿಯಲ್ಲೇ ಸಹ ಸ್ಪರ್ಧಿಗಳ ಮೇಲೆ ರೇಗಾಡಿದರು.

BBK 12: ಬಿಗ್ ಬಾಸ್ ಮನೆಯ ಅಸುರಾಧಿಪತಿಯಾದ ಸುಧಿ: ಕಾಕ್ರೋಚ್ ಆರ್ಭಟಕ್ಕೆ ಸ್ಪರ್ಧಿಗಳು ಕಂಗಾಲು

ಇಷ್ಟೇ ಅಲ್ಲದೆ ಸುದೀಪ್ ಅವರು, ನಿಮಗೆ ಓಟು ಹಾಕಿ ಹೊರಗೆ ಹಾಕಿದ ಯಾರಾದರೂ ಒಬ್ಬರನ್ನು ಈಗ ನೀವು ಹೊರಗೆ ಹಾಕಬೇಕು ಎಂದು ಹೇಳಿದರೆ ಯಾರನ್ನ ಹೊರಗೆ ಹಾಕ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಆಗ ಇದಕ್ಕೆ ಉತ್ತರ ಕೊಟ್ಟ ರಕ್ಷಿತಾ ಶೆಟ್ಟಿ, ಯಾರಾದರೂ ಒಬ್ಬರು ಅಲ್ಲ, ಎಲ್ಲರನ್ನೂ ಹೊರಗೆ ಹಾಕ್ತೇನೆ ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟರು.

ಸದ್ಯ ರಕ್ಷಿತಾ ದೊಡ್ಮನೆಯೊಳಗೆ ಪುನಃ ಕಾಲಿಟ್ಟು ಭರವಸೆ ಮೂಡಿಸಿದ್ದಾರೆ. ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರದಿದ್ದರೂ ಇವರ ಪ್ರಯತ್ನಕ್ಕೆ ಕನ್ನಡಿಗರೂ ಕೂಡ ಸಪೋರ್ಟ್ ಆಗಿ ನಿಂತಿದ್ದಾರೆ. ಈ ವಾರ ರಕ್ಷಿತಾ ಹೇಗೆ ಆಡುತ್ತಾರೆ?, ಫಿನಾಲೆ ಕಂಟೆಂಡರ್ ಆಗುತ್ತಾರಾ? ಎಂಬುದು ನೋಡಬೇಕಿದೆ.