ದಿನ ಭವಿಷ್ಯ, ಆಗಸ್ಟ್ 25, 2026: ಇಂದು ಹೊಸ ಉದ್ಯಮ ಆರಂಭಿಸಲು ಸಕಾಲ
Horoscope Today August 25th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ದ್ವಾದಶಿ ತಿಥಿ, ಉತ್ತರಾಷಾಢ ನಕ್ಷತ್ರದ ಆಗಸ್ಟ್ 25ನೇ ತಾರೀಖಿನ ಈ ದಿನದ ಭವಿಷ್ಯದ ಹೇಗಿರಲಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಎನ್ನುವ ವಿವರ ಇಲ್ಲಿದೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಉತ್ತರಾಷಾಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯದ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಹೊಸ ಅವಕಾಶಗಳು ನಿಮಗೆ ಸಿಗಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೆ ಹಣಕಾಸು ವ್ಯವಹಾರದಲ್ಲಿ ಅನಗತ್ಯ ಖರ್ಚು ತಪ್ಪಿಸಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರು ಇಂದು ಸೋಮಾರಿತನ ಬಿಟ್ಟು ಕೆಲಸ ಮಾಡಿದರೆ ಒಳ್ಳೆದಾಯದಾಗುತ್ತದೆ. ಅಂದುಕೊಂಡ ಕೆಲಸದಲ್ಲೂ ಯಶಸ್ಸು ಸಿಗಬಹುದು. ಆದರೆ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮಾತಿನ ಮೂಲಕ ನೀವು ಯಶಸ್ಸು ಕಾಣುತ್ತೀರಿ. ವ್ಯಾಪಾರಿಗಳಿಗೆ ಇಂದು ಲಾಭದ ದಿನವಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಹಣದ ವಿಚಾರದಲ್ಲಿ ಆತುರ ಮಾಡಬೇಡಿ. ಅದೇ ರೀತಿ ಯಾವುದೇ ಕೆಲಸವನ್ನು ಯೋಚನೆ ಮಾಡಿ ಮಾಡಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ಬಹುದಿನದ ಕನಸು ಇಂದು ನನಸಾಗಲಿದೆ.
ಈ 3 ಬಣ್ಣಗಳ ಅತಿಯಾದ ಬಳಕೆ ನಕಾರಾತ್ಮಕ ಶಕ್ತಿ ಹೆಚ್ಚಿಸಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಕೆಲಸದ ಒತ್ತಡ ಇಂದು ಹೆಚ್ಚಾಗಬಹುದು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ.
ತುಲಾ ರಾಶಿ: ತುಲಾ ರಾಶಿಯವರಿಗೆ ಹೊಸ ಸಂಪರ್ಕಗಳಿಂದ ಭವಿಷ್ಯಕ್ಕೆ ಒಳಿತಾಗಬಹುದು. ದಾಂಪತ್ಯ ಜೀವನದಲ್ಲಿ ಇಂದು ಖುಷಿ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ: ಈ ರಾಶಿಯವರು ಇಂದು ಕೋಪ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದು ಒಳ್ಳೆಯದು. ಯಾರೊಂದಿಗೂ ಇಂದು ವಾದ ಮಾಡಲು ಹೋಗಬೇಡಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಅಂದುಕೊಂಂತೆ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಹಣಕಾಸಿನ ವಿಚಾರವಾಗಿ ಅಭಿವೃದ್ಧಿ ಕಾಣುತ್ತೀರಿ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕೆಲಸದಲ್ಲಿ ಯಶಸ್ಸು ಹಾಗೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಆದರೆ ಹಿರಿಯರ ಸಲಹೆ ಇಂದು ಅಗತ್ಯ.
ಕುಂಭ ರಾಶಿ: ಈ ರಾಶಿಯವರು ಇಂದು ಹೊಸ ಉದ್ಯಮ ಮೂಲಕ ಲಾಭ ಗಳಿಸಬಹುದು. ಹೊಸ ಕೆಲಸಕ್ಕೆ ಇಂದು ಸೂಕ್ತ ದಿನವಾಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಇಂದು ಗೊಂದಲಗಳು ಹೆಚ್ಚಾಗಬಹುದು. ಆದರೆ ಕುಟುಂಬದಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ.