ದಿನ ಭವಿಷ್ಯ, ಆಗಸ್ಟ್ 23, 2026: ಉದ್ಯೋಗದಲ್ಲಿ ಬಡ್ತಿ, ಕೆಲಸಕ್ಕೆ ಪ್ರಶಂಸೆಯೂ ಸಿಗಬಹುದು
Horoscope Today August 23rd: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಏಕಾದಶಿ, ಪೂರ್ವಾಷಾಢ ನಕ್ಷತ್ರದ, ಆಗಸ್ಟ್ 23ನೇ ತಾರೀಖಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ, ಪೂರ್ವಾಷಾಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಹೊಸ ಅವಕಾಶಗಳು ಇಂದು ಪ್ರಾಪ್ತಿಯಾಗಬಹುದು. ಅದರಲ್ಲೂ ಹೊಸ ಕೆಲಸ ಆರಂಭಿಸಲು ಸರಿಯಾದ ದಿನವಾಗಿದೆ.
ವೃಷಭ ರಾಶಿ: ಈ ರಾಶಿಯವರು ಇಂದು ಕುಟುಂಬದ ಜತೆಗೆ ಹೆಚ್ಚಿನ ಸಮಯ ಕಳೆಯುವ ದಿನವಾಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ.
ಮಿಥುನ ರಾಶಿ: ಇಂದು ಈ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಸ್ನೇಹಿತರ ಬೆಂಬಲ ಸಿಗಲಿದ್ದು ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಕುಟುಂಬದ ಜವಾಬ್ದಾರಿ ಹೆಚ್ಚಾಗುವ ದಿನ ಆಗಿರಲಿದೆ. ಅದೇ ರೀತಿ ಮನಸ್ಸಿನ ಗೊಂದಲ ದೂರವಾಗಲಿದ್ದು, ಹಿಂದಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ವೃತ್ತಿ ಜೀವನದಲ್ಲಿ ಪ್ರಗತಿಯ ಸೂಚನೆಗಳು ಇರುತ್ತವೆ. ದೂರ ಪ್ರಯಾಣಗಳು ಇಂದು ನಿಮಗೆ ಖುಷಿ ನೀಡಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಕೆಲಸದ ಒತ್ತಡ ಹೆಚ್ಚಾಗಬಹುದು. ಹಾಗಾಗಿ ತಾಳ್ಮೆಯಿಂದ ಎಲ್ಲವನ್ನು ನೀವು ನಿಭಾಯಿಸಬೇಕಾಗುತ್ತದೆ.
ಸಾಕುಪ್ರಾಣಿಗಳಿಗೂ ವಾಸ್ತು ಇದೆ! ಯಾವ ಪ್ರಾಣಿಗೆ ಯಾವ ದಿಕ್ಕು ಶುಭ ಗೊತ್ತಾ?
ತುಲಾ ರಾಶಿ: ತುಲಾ ರಾಶಿಯವರಿಗೆ ಹೊಸ ಪರಿಚಯಗಳು ಇಂದು ಆಗಬಹುದು. ಉದ್ಯೋಗದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಯನ್ನು ನೀವು ಮಾಡಿಕೊಳ್ಳಬೇಕಾಗಿ ಬರಬಹುದು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ಹಣಕಾಸಿನ ವಿಚಾರದಲ್ಲಿ ಜವಾಬ್ದಾರಿ ಅಗತ್ಯ. ಅದೇ ರೀತಿ ಆರೋಗ್ಯದ ವಿಚಾರವಾಗಿಯೂ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು, ಜಯ ಪ್ರಾಪ್ತಿಯಾಗಬಹುದು. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಆದರೆ ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಹಿರಿಯರ ಸಲಹೆ ಪಾಲಿಸಬೇಕು.
ಕುಂಭ ರಾಶಿ: ಈ ರಾಶಿಯವರಿಗೆ ಇಂದು ಹೊಸ ಯೋಜನೆ ಕೈಗೊಳ್ಳಲು ಅನುಕೂಲವಾದ ದಿನವಾಗಲಿದೆ. ಅದೇ ರೀತಿ ವೃತ್ತಿಯಲ್ಲಿಯೂ ಯಶಸ್ಸು ಗಳಿಸುತ್ತೀರಿ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದ್ದು, ಪ್ರತಿಭೆಯಿಂದಲೇ ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಕುಟುಂಬದಲ್ಲಿ ಶುಭ ಸುದ್ದಿ ಕೇಳುವ ದಿನ ನಿಮ್ಮದಾಗುತ್ತದೆ.