ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Horoscope Today February 7th: ಈ ರಾಶಿಯವರಿಗೆ ಇಂದು ಶತ್ರುವಿನ ಕಾಟ ಜಾಸ್ತಿಯಾಗಲಿದೆ!

ನಿತ್ಯ ಭವಿಷ್ಯ ಫೆಬ್ರವರಿ 7, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಕೃಷ್ಣೆ ಪಕ್ಷದ, ಷಷ್ಠಿ ತಿಥಿ, ಚಿತ್ತಾ ನಕ್ಷತ್ರದ ಫೆಬ್ರವರಿ 7ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಈ ರಾಶಿಯವರು ಇಂದು ಮುಖ್ಯ ಕೆಲಸ ಕಾರ್ಯದಲ್ಲಿ ಜಾಗೃತರಾಗಿರಿ!

ದಿನ ಭವಿಷ್ಯ -

Profile
Pushpa Kumari Feb 7, 2026 7:00 AM

ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಕೃಷ್ಣೆ ಪಕ್ಷದ, ಚಿತ್ತಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಚಿತ್ತ ನಕ್ಷತ್ರ ಇದ್ದು ಅಧಿಪತಿ ಕುಜ ಆಗಿದ್ದಾನೆ ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯಶಸ್ಸು ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಬಹುದು.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ಕಷ್ಟಕರವಾದ ದಿನ ವಾಗಿದೆ. ಪೋಷಕರಿಗೆ,ಮಕ್ಕಳಿಗೆ ಇಂದು ಕಿರಿಕಿರಿ ಉಂಟಾಗಬಹುದು.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದೆ. ಬಿಸಿನೆಸ್ ವ್ಯವಹಾರ, ಕೊರ್ಟ್ ಕೆಲಸದಲ್ಲಿ ಕಷ್ಟ ಆಗಬಹುದು. ಹಾಗಾಗಿ ನಿಧಾನವಾಗಿ ಯೋಚಿಸಿ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಮಾಧ್ಯಮ, ಮಾರ್ಕೆಟಿಂಗ್ ವ್ಯವಹಾರ ದಲ್ಲಿ ಲಾಭದಾಯಕ ವಾಗಲಿದೆ. ಆತ್ಮವಿಶ್ವಾಸ ತುಂಬಾ ಚೆನ್ನಾಗಿ ಇರುತ್ತದೆ.

Vastu tips: ಮಲಗುವ ಕೋಣೆಯಲ್ಲಿ ಈ ಒಂದು ಮೂರ್ತಿ ಇಟ್ಟರೆ ದಾಂಪತ್ಯ ಜೀವನ ಸುಖಕರವಾಗುತ್ತದೆ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ಕುಟುಂಬದ ವಿಚಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಕುಟುಂಬದಿಂದಲೇ ನಿಮಗೆ ನೆಮ್ಮದಿ ಸಿಗುತ್ತದೆ

ತುಲಾ ರಾಶಿ: ತುಲಾ ರಾಶಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರಗಳು ಯಾವುದೇ ಬೇಡ. ಮಧ್ಯಾಹ್ನ ಬಳಿಕ ನಿಮಗೆ ಭಾಗ್ಯೋದಯವಾಗಬಹುದು.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯ ನಿರ್ಧಾರಗಳು ಯಾವುದೇ ಬೇಡ. ಮುಖ್ಯವಾದ ವಿಚಾರದಲ್ಲಿ ಯಾರ ಸಹಕಾರ ಕೂಡ ನಿಮಗೆ ಸಿಗುವುದಿಲ್ಲ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಬಂಧು- ಬಾಂಧವರಿಂದ ಧನ ಆಗಮನ ವಾಗುತ್ತದೆ

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ಬಹಳಷ್ಟು ನೆಮ್ಮದಿ ಇದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ. ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡು ವುದರಿಂದ ಯಶಸ್ಸು ಕಾಣುತ್ತೀರಿ.

ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎರಡು ಮೂರು ದಿನಗಳ ಕ್ಷೇಷ ಎಲ್ಲವೂ ಮಯವಾಗುತ್ತದೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ನಿರ್ಧಾರ ಯಾವುದೇ ಮಾಡಬೇಡಿ. ಮಾತಿನಲ್ಲಿ ನಿಗಾ ವಹಿಸಿದರೆ ಉತ್ತಮ.