ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಆಗಸ್ಟ್‌ 9, 2026: ಏಕಾದಶಿಯ ಈ ದಿನ ಯಶಸ್ಸು, ಮಾನಸಿಕ ನೆಮ್ಮದಿ

Horoscope Today August 9th: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಏಕಾದಶಿ ತಿಥಿ, ಮೃಗಶಿರ ನಕ್ಷತ್ರದ ಆಗಸ್ಟ್ 9ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಈ ರಾಶಿಯವರಿಗೆ ಇಂದು ಕೆಲಸದಲ್ಲಿ ಹೊಸ ಹುರುಪು ಬರಲಿದೆ

ಇಂಟರ್‌ನೆಟ್ ಚಿತ್ರ -

Profile
Pushpa Kumari Aug 9, 2026 6:01 AM

ಬೆಂಗಳೂರು: ಪರಾಭವ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ, ಮೃಗಶಿರ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಲಾಭದಾಯಕವಾಗಿದೆ. ಬಂಧು ಮಿತ್ರರಿಂದ ಸಹಕಾರ ಪ್ರಾಪ್ತಿ.

ವೃಷಭ ರಾಶಿ: ಈ ರಾಶಿಯವರು ಸಂಸಾರದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನೀವು ಯಾರ ಜತೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ, ಅವರು ಬಹಳಷ್ಟು ಮುಖ್ಯರಾಗುತ್ತಾರೆ. ಹಾಗಾಗಿ ಯಾವುದೇ ಮನಸ್ತಾಪ ಬರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ.

ಮಿಥುನ ರಾಶಿ: ಇಂದು ಈ ರಾಶಿಯಲ್ಲೇ ಚಂದ್ರ ಇದ್ದಾನೆ. ಹೀಗಾಗಿ ಇಂದು ಹೆಚ್ಚಿನ ಹುರುಪು ಇರಬಹುದು. ಕೆಲಸ ಕಾರ್ಯದಲ್ಲಿ ಹೆಚ್ಚಿನ ಯಶಸ್ಸು ಕಾಣಬಹುದು.

ಕಟಕ ರಾಶಿ: ಕಟಕ ರಾಶಿ ಅವರಿಗೆ ಕಷ್ಟದ ದಿನವಾಗಲಿದೆ. ದೊಡ್ಡದಾದ ಕ್ಷೇಶ ಉಂಟಾಗಬಹುದು. ಅದೇ ರೀತಿ ಮಿತ್ರರ ಜತೆ ಕಲಹಗಳು ಉಂಟಾಗುವ ಸಾಧ್ಯತೆ ಇದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತೀರಿ. ಗುಂಪು ಕೆಲಸದಿಂದ ಧನ ಲಾಭ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ದೊಡ್ಡದಾದ ಯಶಸ್ಸು ಸಿಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಹೆಚ್ಚಿನ ಉತ್ಸಾಹ ಹುರುಪು ಕಂಡು ಬರಲಿದೆ.

ಶೌಚಾಲಯ ಮನೆಯ ಯಾವ ದಿಕ್ಕಿನಲ್ಲಿ ಇರಬೇಕು?

ತುಲಾ ರಾಶಿ: ತುಲಾ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಆದರೆ ಹಿರಿಯರ ಹಾಗೂ ಭಗವಂತನ ಆಶೀರ್ವಾದ ಇಲ್ಲದೆ ಏನೂ ಮಾಡಲು ಆಗುವುದಿಲ್ಲ. ವಿನಯತೆ ಇಂದು ಅತ್ಯಗತ್ಯ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಯಾರ ಸಹಕಾರವನ್ನೂ ಇಂದು ತೆಗೆದುಕೊಳ್ಳಬೇಡಿ. ಎಲ್ಲರ ಜತೆಗೆ ವಿನಯತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಮುಖ್ಯ ನಿರ್ಧಾರ ಕೈಗೊಳ್ಳುವಾಗ ಜಾಗೃತರಾಗಿರಿ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ದಾಂಪತ್ಯ ಹಾಗೂ ಪಾರ್ಟನರ್‌ಶಿಪ್‌ ವ್ಯವಹಾರದಲ್ಲಿ ಮನಸ್ಸಿಗೆ ಬಹಳ ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಶತ್ರುಗಳು ಹಿಮ್ಮೆಟ್ಟಬಹುದು. ಅತ್ಯಂತ ದೊಡ್ಡದಾದ ಹುರುಪು ನಿಮ್ಮದಾಗಬಹುದು.

ಕುಂಭ ರಾಶಿ: ಈ ರಾಶಿಗೆ ಉತ್ತಮ ದಿನವಾಗಲಿದೆ. ಹಣಕಾಸಿನ ವಿಚಾರ ಹಾಗೂ ಮಕ್ಕಳ ವಿಚಾರದಲ್ಲಿ ಬುದ್ದಿವಂತಿಕೆ ಬೇಕಾಗುತ್ತದೆ. ಕೆಲವೊಂದು ವಿಚಾರದಲ್ಲಿ ಜಾಗೃತರಾಗಿರಿ.

ಮೀನ ರಾಶಿ: ಮೀನ ರಾಶಿಯವರಿಗೆ ಮನೆಯವರ ಜವಾಬ್ದಾರಿ ಅಗತ್ಯ. ಮನೆ, ವಾಹನ ಖರೀದಿ ಬಗ್ಗೆ ಇಂದು ಯೋಚನೆ ಮಾಡುತ್ತೀರಿ. ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ.