ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಜುಲೈ 16, 2026: ಇಂದು ಈ ರಾಶಿಗೆ ಕೆಲಸ ಕಾರ್ಯದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆ

Horoscope Today July 16th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷ ಪಕ್ಷದ, ದ್ವೀತಿಯ ತಿಥಿ, ಜುಲೈ 16ನೇ ತಾರೀಖಿನ ಗುರುವಾರದ ಈ ದಿನ ಶ್ರೀಮಹಾವಿಷ್ಣು ಹಾಗೂ ಗುರು ಬೃಹಸ್ಪತಿ ಆರಾಧನೆಗೆ ವಿಶೇಷ ಮಹತ್ವವಿದೆ.

ಈ ರಾಶಿಗೆ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ!

ಇಂಟರ್ ನೆಟ್ ಚಿತ್ರ -

Profile
Pushpa Kumari Jul 16, 2026 6:00 AM

ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷದ  ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ವಿವರ ಇಲ್ಲಿದೆ.

ಮೇಷ ರಾಶಿ: ಈ ರಾಶಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಗಬಹುದು. ಹಾಗೆಯೇ ಕುಟುಂಬದ ಜೊತೆ ಇಂದು ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ.

ವೃಷಭ ರಾಶಿ: ಈ ರಾಶಿಯವರಿಗೆ ಅತ್ಯುತ್ತಮವಾದ ದಿನವಾಗಿದೆ. ಅಂದುಕೊಂಡ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ. ಆದರೆ ಹಣಕಾಸಿನ ವ್ಯವಹಾರದಲ್ಲಿ ನಿಗಾ ಇರಿಸಬೇಕಾಗುತ್ತದೆ.

ಮಿಥುನ ರಾಶಿ: ಇಂದು ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಅವಕಾಶಗಳು ಒದಗಿ ಬರಬಹುದು. ನಿಮ್ಮ ಸ್ನೇಹಿತರ ಸಹಕಾರ ಕೂಡ ಇಂದು ಸಿಗಲಿದೆ.

ಕಟಕ ರಾಶಿ: ಕಟಕ ರಾಶಿಯವರು ಇಂದು ಕುಟುಂಬದ ಜವಾಬ್ದಾರಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.ಅದೇ ರೀತಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಆರ್ಥಿಕವಾಗಿಯೂ ಅಭಿವೃದ್ಧಿ ಕಾಣುತ್ತೀರಿ

ಸಿಂಹ ರಾಶಿ: ಸಿಂಹ ರಾಶಿಗೆ ಇಂದು ಬಿಸೆನೆಸ್ ವ್ಯವಹಾರದಲ್ಲಿ ಲಾಭ ಸಿಗುತ್ತದೆ‌.ಹಾಗೆಯೇ ನಿಮ್ಮ ನಾಯಕತ್ವ ಗುಣದ ಬಗ್ಗೆಯೂ ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ‌.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಕೆಲಸದ ಜವಾಬ್ದಾರಿ ಜಾಸ್ತಿಯಾಗುತ್ತವೆ. ಆದರೆ ಇಂದು ಒತ್ತಡ ಹೆಚ್ಚಿದ್ದರೂ ಎಲ್ಲವನ್ನು ನಿಭಾಯಿಸಿ ಯಶಸ್ಸು ಕಾಣುತ್ತೀರಿ

Vastu Tips: Vastu Tips: ಈ ವಾಸ್ತು ನಿಯಮಗಳನ್ನು ಪಾಲಿಸಿದ್ರೆ ಮನೆಯಲ್ಲಿ ಅತ್ತೆ-ಸೊಸೆ ಜಗಳವೇ ಇರೊಲ್ಲ!

ತುಲಾ ರಾಶಿ: ಈ ರಾಶಿಗೆ ಇಂದು ಹಣಕಾಸಿನ ವ್ಯವಹಾರದಲ್ಲಿ ಜಾಗೃತಿಯ ಜೊತೆಗೆ ಸಂಬಂಧದಲ್ಲಿ ಹೊಂದಾಣಿಕೆಯನ್ನು ಕಾಪಾಡಬೇಕಾಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉದ್ಯೋಗದಲ್ಲಿ ಯಶಸ್ಸು ಸಿಗಲಿದ್ದು ಹೂಡಿಕೆ ಮಾಡುವ ಮುನ್ನ ಯೋಚಿಸಬೇಕಾಗುತ್ತದೆ.‌ ಆರ್ಥಿಕ ವ್ಯವಹಾರದಲ್ಲಿ ಜಾಗೃತರಾಗಿರಿ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಉತ್ತಮವಾಗಿದೆ. ನಿಮಗೆ ಹೊಸ ಸ್ನೇಹಿತರ ಪರಿಚಯವಾಗಬಹುದು. ವಿದ್ಯಾರ್ಥಿಗಳಿಗೂ ಶುಭದಾಯಕ ದಿನವಾಗಿದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸ ಕಾರ್ಯ ದಲ್ಲಿಯೂ ಯಶಸ್ಸು ಸಿಗುತ್ತದೆ.

ಕುಂಭರಾಶಿ: ಇಂದು ಉತ್ತಮವಾದ ದಿನವಾಗಿದೆ. ಸೃಜನಶೀಲ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ.ಆರ್ಥಿಕವಾಗಿಯೂ ಅಭಿವೃದ್ಧಿ ಕಾಣುತ್ತೀರಿ.

ಮೀನ ರಾಶಿ: ಮೀನ ರಾಶಿಯವರಿಗೆ ಇಂದು ನೆಮ್ಮದಿ ಸಿಗಲಿದ್ದು ಕ್ರಿಯಾತ್ಮಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯದಲ್ಲಿ ಜಾಗೃತಿ ಅಗತ್ಯವಾಗಿ ಇರಬೇಕು.