ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಮಾರ್ಚ್ 26, 2026: ರಾಹುವಿನಿಂದ ಯಾವ ರಾಶಿಯ ಅದೃಷ್ಟ ಇಂದು ಬದಲಾಗಬಹುದು?

Horoscope Today March 26 : ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ಅಷ್ಟಮಿ ತಿಥಿ, ಆರ್ದ್ರಾ ನಕ್ಷತ್ರದ ಮಾರ್ಚ್ 26ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..

ಈ ರಾಶಿಯವರಿಗೆ ಇಂದು ಅತೀ ಲಾಭದಾಯಕ ದಿನ!

ಇಂಟರ್ ನೆಟ್ ಚಿತ್ರ -

Profile
Pushpa Kumari Mar 26, 2026 6:00 AM

ಬೆಂಗಳೂರು: ಇಂದು ಪರಾಭವ ನಾಮ ಸಂವತ್ಸರದ ಉತ್ತರಾಯಣ, ವಸಂತ ಋತು ಚೈತ್ರ ಮಾಸೆ, ಆರ್ದ್ರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಆರ್ದ್ರಾ ನಕ್ಷತ್ರದ ಅಧಿಪತಿ ರಾಹು ಆಗಿದ್ದಾನೆ. ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ನಿಮ್ಮ ಕುಟುಂಬ ಜವಾಬ್ದಾರಿ ನಿಮಗೆ ಇಂದು ಬಹಳ ಮುಖ್ಯವಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಅತೀ ಉತ್ತಮ ವಾದ ದಿನವಾಗಿದೆ. ಸೇಲ್ಸ್, ಸೋಷಿಯಲ್ ಮೀಡಿಯಾ, ಮಾರ್ಕೆಟಿಂಗ್ ವ್ಯವಹಾರ ಮಾಡೋರಿಗೆ ಉತ್ತಮವಾಗಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಷ್ಟಕರವಾದ ದಿನವಾಗಿದೆ. ನಿಮ್ಮ ಮನೆಯ ಬಗ್ಗೆ ಹೆಚ್ಚಿನ ಜವಾಬ್ದಾರಿ ನೀಡಬೇಕಾಗುತ್ತದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಹಿಂದೆ ಇದ್ದ ತೊಂದರೆಗಳು ಬಗೆಹರಿಯಬಹುದು. ಹೆಚ್ಚಿನ ನೆಮ್ಮದಿ ಇಂದು ನಿಮಗೆ ಪ್ರಾಪ್ತಿಯಾಗುತ್ತದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಯಾವುದೇ ಕೆಲಸ ಕಾರ್ಯಗಳು ನಿಮ್ಮ ಪರವಾಗಿ ಇಂದು ನಡೆಯುವುದಿಲ್ಲ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ‌ಸಿಗಲಿದ್ದು ಭಾಗ್ಯೋದಯ ವಾಗುತ್ತದೆ. ಅದೇ ರೀತಿ ಧನ ಆಗಮನದ ಸೂಚನೆಗಳು ಕೂಡ ನಿಮಗೆ ಇರುತ್ತದೆ.

Vastu Tips: ಸುಗಂಧರಾಜ ಗಿಡ ಮನೆಯಲ್ಲಿ ನೆಟ್ಟರೆ ಸೌಭಾಗ್ಯ: ವಾಸ್ತು ಪ್ರಕಾರ ಯಾವ ದಿಕ್ಕು ಸೂಕ್ತ?

ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯಕ್ಷೇತ್ರದ ಜವಾಬ್ದಾರಿ ತುಂಬಾನೇ ಜಾಸ್ತಿಯಾಗಿರುತ್ತದೆ. ಹಾಗಾಗಿ ಬಹಳ ತಾಳ್ಮೆಯಿಂದ ಎಲ್ಲವನ್ನು ನೀವು ನಿಭಾಯಿಸಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಘನತೆ ಗೌರವ ಇಂದು ಜಾಸ್ತಿಯಾಗುತ್ತದೆ.

ಧನಸ್ಸು ರಾಶಿ: ಧನಸ್ಸು ರಾಶಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಅನೇಕ ರೀತಿಯ ಬದಲಾವಣೆಗಳು ಇಂದು ಸಾಧ್ಯವಾಗುತ್ತದೆ.

ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ಲಾಭದಾಯಕವಾಗಿದ್ದು ಎಲ್ಲ ಕಡೆಯಿಂದಲೂ ಸಹಕಾರ ಸಿಗುತ್ತದೆ.

ಕುಂಭರಾಶಿ: ಈ ರಾಶಿಯವರಿಗೆ ಅತ್ಯುತ್ತಮ ವಾದ ದಿನವಾಗಿದೆ. ಶತ್ರಯಗಳನ್ನು ಹಿಮ್ಮೆಟ್ಟಲಿದ್ದು ಮುನ್ನಡೆಯನ್ನು ಸಾಧಿಸುತ್ತೀರಿ. ಆತ್ಮವಿಶ್ವಾಸ ಕೂಡ ಚೆನ್ನಾಗಿ ಇರುತ್ತದೆ.

ಮೀನ ರಾಶಿ: ಮೀನ ರಾಶಿಗೆ ಕಷ್ಟಕರವಾದ ದಿನವಾಗಿದೆ. ನಿಮ್ಮ ಬುದ್ದಿವಂತಿಕೆಯಿಂದ ಒಳಿತು ಆಗುತ್ತದೆ.‌ ಆದರೆ ತಾಳ್ಮೆಯಿಂದ ನೀವು ವರ್ತಿಸಬೇಕಾಗುತ್ತದೆ.