ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಿನ ಭವಿಷ್ಯ, ಮೇ 2, 2026: ರಾಜಯೋಗದಿಂದ ಇಂದು ಧನ ಲಾಭ, ಉದ್ಯೋಗದಲ್ಲಿ ಬಡ್ತಿ; ಅದೃಷ್ಟದ ದಿನ

Horoscope Today May 2nd: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ಉತ್ತರ ಫಾಲ್ಗುಣಿ ನಕ್ಷತ್ರದ ಮೇ 2ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ವಿವರ ಇಲ್ಲಿದೆ.

ಇಂದು ಪರಿಶ್ರಮಕ್ಕೆ ತಕ್ಕ ಫಲ ಸಿಗುವ ದಿನ

ಇಂಟರ್‌ನೆಟ್ ಚಿತ್ರ -

Profile
Pushpa Kumari May 2, 2026 6:00 AM

ಬೆಂಗಳೂರು, ಮೇ 2: ಈ ತಿಂಗಳಲ್ಲಿ ಕುಜನು ಮೇಷ ರಾಶಿಯಲ್ಲಿ, ರವಿ ವೃಷಭದಲ್ಲಿ, ಬುಧ-ಶುಕ್ರ ಮಿಥುನದಲ್ಲಿ ಚಲಿಸುತ್ತಾರೆ. ಹೀಗಾಗಿ ಹೆಚ್ಚಿನ ರಾಶಿಯವರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ತಿಂಗಳಿನಲ್ಲಿ ಐದು ಪ್ರಮುಖ ರಾಜಯೋಗಗಳು ಸಿದ್ದಿಯಾಗಲಿದ್ದು, ಹಲವು ರಾಶಿಯವರ ಮೇಲೆ ಪರಿಣಾಮ ಬೀರಲಿದೆ.

ಮೇಷ ರಾಶಿ: ಈ ರಾಶಿಯವರಿಗೆ ಇಂದು ಉತ್ತಮ ದಿನವಾಗಿದ್ದು, ಆತ್ಮವಿಶ್ವಾಸ ಮೂಲಕವೇ ಯಶಸ್ಸು ಗಳಿಸುತ್ತೀರಿ. ಇಂದು ಕುಟುಂಬ, ಸ್ನೇಹಿತರ ಜತೆ ಪ್ರಯಾಣ ಕೈಗೊಳ್ಳುವ ಸೌಭಾಗ್ಯ ನಿಮಗೆ ಸಿಗಲಿದೆ. ಆದರೆ ವಾಹನ ಚಲಾಯಿಸುವಾಗ ಜಾಗೃತಿ ವಹಿಸುವುದು ಮುಖ್ಯ.

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಮನೆಯಲ್ಲಿ ಹಾಗೂ ಕಾರ್ಯಕ್ಷೇತ್ರ ಎರಡರಲ್ಲೂ ಯಶಸ್ಸು ಸಿಗಲಿದೆ. ಎರಡು ಕಡೆಯಲ್ಲಿ ನೀವೇ ಮಾರ್ಗದರ್ಶಕರಾಗಿ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. ಶ್ರಮಕ್ಕೆ ಸರಿಯಾದ ಫಲ ನಿಮಗೆ ಸಿಗುವ ದಿನ ನಿಮ್ಮದಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಜೀವನಕ್ಕೆ ಅಗತ್ಯವಾದ ಮುಖ್ಯ ಬದಲಾವಣೆ ಸಂಭವಿಸಲಿದೆ. ಆತ್ಮವಿಶ್ವಾಸದಿಂದ ಹೊಸ ಬದಲಾವಣೆ ಸ್ವಾಗತಿಸಿ. ದೂರದ ಪ್ರಯಾಣ ಮೂಲಕ ಲಾಭ ಗಳಿಸುವ ಸೂಚನೆ ಇದೆ.

ಕಟಕ ರಾಶಿ: ಕಟಕ ರಾಶಿಯವರಿಗೆ ಈ ಹಿಂದೆ ಇದ್ದ ಕ್ಷೇಶ ಎಲ್ಲವೂ ಮಾಯವಾಗಿ ನೆಮ್ಮದಿ ದೊರೆಯಲಿದೆ. ಮನೆಯವರ ಬೆಂಬಲದಿಂದ ಯಶಸ್ಸು ದೊರೆಯಲಿದೆ. ಧನಾಗಮನದ ಸೂಚನೆ ಕೂಡ ಇದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸಾಮಾಜಿಕ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೂಡಿಕೆಗೆ ಇಂದು ಸಕಾಲವಾಗಿದ್ದು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುತ್ತೀರಿ.

ಕರ್ಪೂರದಿಂದ ಮನೆಯ ವಾಸ್ತು ದೋಷ ನಿವಾರಣೆ: ಆರ್ಥಿಕ ಸಮಸ್ಯೆ, ಕಲಹಗಳಿಗೆ ಇಲ್ಲಿದೆ ಪರಿಹಾರ

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಒಂಭತ್ತನೆ ಮನೆಯಲ್ಲಿ ಗುರು ಇರುವುದರಿಂದ ಆರ್ಥಿಕವಾಗಿ ಲಾಭ ದೊರೆಯಲಿದೆ. ಉದ್ಯೋಗದಲ್ಲಿ ಪ್ರತಿಷ್ಠೆ ಜಾಸ್ತಿಯಾಗಲಿದ್ದು ಪ್ರಮೋಷನ್, ಬಡ್ತಿ ಸಿಗುವ ಸಾಧ್ಯತೆ ಇದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಕೋರ್ಟ್, ವ್ಯವಹಾರದಲ್ಲಿ ಇಂದು ಯಶಸ್ಸು ಸಿಗುವ ಸಾಧ್ಯತೆ ಇದೆ. ಕೆಲಸ ಕಾರ್ಯದಲ್ಲೂ ಅಭಿವೃದ್ಧಿ ಹಾಗೂ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಧನಾಗಮನದ ಸೂಚನೆ ಇದ್ದು, ಹೊಸ ಮನೆ ನಿರ್ಮಾಣಕ್ಕೆ ಸುವರ್ಣ ಅವಕಾಶ. ಇಂದು ಕೈ ಹಾಕಿದ ಕೆಲಸಗಳೆಲ್ಲವೂ ನಿಮ್ಮ ಇಚ್ಛೆಯಂತೆ ಸಾಗುತ್ತವೆ.

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆ ಕಂಡುಬರುವ ಮೂಲಕ ಯಶಸ್ಸು ಸಿಗುತ್ತದೆ. ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದ್ದು ಲಾಭ ತರುವ ದಿನವಾಗಿದೆ.

ಮಕರ ರಾಶಿ: ಮಕರ ರಾಶಿಯವರ ಪರಿಶ್ರಮಕ್ಕೆ ತಕ್ಕ ಲಾಭ ಸಿಗುವ ದಿನವಾಗಲಿದೆ. ಹೊಸ ಅವಕಾಶ ಒದಗಿ ಬಂದು ಯಶಸ್ಸು ಗಳಿಸುತ್ತೀರಿ.‌ ಆದರೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ವಹಿಸಿ.

ಕುಂಭರಾಶಿ: ಈ ರಾಶಿಯವರಿಗೆ ಒಳಿತು- ಕೆಡುಕು ಎರಡು ಉಂಟಾಗುವ ದಿನವಾಗಿದ್ದು ಸಾಮಾನ್ಯವಾಗಿ ಇರುತ್ತದೆ. ಮುಂದಿನ ದಿನಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಮೀನ ರಾಶಿ: ಮೀನ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಆಕಸ್ಮಿಕವಾಗಿ ಬದಲಾವಣೆ ಇದ್ದು, ಪ್ರತಿ ಹಂತದಲ್ಲೂ ಯೋಚಿಸಿ ಹೆಜ್ಜೆಯನ್ನು ಇಟ್ಟರೆ ಒಳಿತು.