Vastu Tips: ಮನೆಗೆ ಸಂಪತ್ತನ್ನು ಆಹ್ವಾನಿಸುವ ಡೋರ್‌ಮ್ಯಾಟ್ ಹೇಗಿರಬೇಕು ?
ಮನೆಯ ಪ್ರವೇಶ ದ್ವಾರದಲ್ಲಿ ಯಾವುದೇ ವಾಸ್ತು ದೋಷಗಳಿಲ್ಲದಿದ್ದರೆ ಮಾತ್ರ ಅದು ಸಕಾರಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರುತ್ತದೆ. ಮನೆಗೆ ಸಂತೋಷ ಮತ್ತು ಆರ್ಥಿಕ ಸಮೃದ್ಧಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ಮನೆಯಲ್ಲಿ ಡೋರ್‌ಮ್ಯಾಟ್‌ಗಳನ್ನು ಎಲ್ಲಿ, ಹೇಗೆ ಹಾಕಬೇಕು ಮತ್ತು ಇದು ಯಾವ ಬಣ್ಣದಲ್ಲಿ ಇರಬೇಕು ಎಂಬುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.


ಬೆಂಗಳೂರು: ಮನೆಯಲ್ಲಿ ಹೆಚ್ಚು ಪವಿತ್ರವಾದ ಸ್ಥಳಗಳಲ್ಲಿ ಅಡುಗೆ ಮನೆ (Vastu Tips), ದೇವರ ಕೋಣೆ ಮತ್ತು ಮನೆಯ ಪ್ರವೇಶ ದ್ವಾರವು ಸೇರಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರವೇಶ ದ್ವಾರವು ಸಕಾರಾತ್ಮಕ ಶಕ್ತಿಯ ಪ್ರವೇಶಕ್ಕೆ ಇರುವ ಒಂದು ದಾರಿಯಾಗಿದೆ. ಈ ಮೂಲಕ ಮನೆಯ ಪ್ರವೇಶ ದ್ವಾರವು ಅದೃಷ್ಟ ಮತ್ತು ಸಂಪತ್ತನ್ನು ಮನೆಯೊಳಗೆ ಸ್ವಾಗತಿಸುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಪ್ರವೇಶ ದ್ವಾರವನ್ನು ಹೆಚ್ಚು ಪೂಜನೀಯವಾಗಿ ಕಾಣಲಾಗುತ್ತದೆ. ಪ್ರತಿ ನಿತ್ಯ ಇಲ್ಲಿ ರಂಗೋಲಿ ಹಾಕಲಾಗುತ್ತದೆ. ಸಂಜೆ ದೀಪವನ್ನು ಇರಿಸಲಾಗುತ್ತದೆ. ಆದರೆ ಇವು ಮಾತ್ರ ಸಾಕಾಗುವುದಿಲ್ಲ. ಇಲ್ಲಿ ನಾವು ಹಾಕುವ ಡೋರ್ ಮ್ಯಾಟ್ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.
ಮನೆಯ ಪ್ರವೇಶ ದ್ವಾರದಲ್ಲಿ ಯಾವುದೇ ವಾಸ್ತು ದೋಷಗಳಿಲ್ಲದಿದ್ದರೆ ಮಾತ್ರ ಅದು ಸಕಾರಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರುತ್ತದೆ. ಮನೆಗೆ ಸಂತೋಷ ಮತ್ತು ಆರ್ಥಿಕ ಸಮೃದ್ಧಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ಮನೆಯಲ್ಲಿ ಡೋರ್‌ಮ್ಯಾಟ್‌ಗಳನ್ನು ಎಲ್ಲಿ, ಹೇಗೆ ಹಾಕಬೇಕು ಮತ್ತು ಇದು ಯಾವ ಬಣ್ಣದಲ್ಲಿ ಇರಬೇಕು ಎಂಬುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.
ವಾಸ್ತು ಶಾಸ್ತ್ರದ ಪ್ರಕಾರ ಡೋರ್‌ಮ್ಯಾಟ್ ಹಾಕುವುದರಿಂದ ಮನೆಯ ಸಂತೋಷ ಮತ್ತು ಸಂಪತ್ತಿನ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಅದನ್ನು ಮನೆಯೊಳಗೆ ತರುವ ಮೊದಲು ಕೆಲವೊಂದು ವಾಸ್ತು ತತ್ತ್ವಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ. ಮನೆಯಲ್ಲಿ ಯಾವ ರೀತಿಯ ಡೋರ್‌ಮ್ಯಾಟ್ ಅನ್ನು ಬಳಸಬೇಕು ಎನ್ನುವ ಕುರಿತು ವಾಸ್ತು ತಜ್ಞ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಅವರು ಹೇಳುವುದು ಹೀಗೆ..
ಇದನ್ನೂ ಓದಿ: Vastu Tips: ಈ ವಸ್ತುಗಳನ್ನು ಪರ್ಸ್‌ನಲ್ಲಿ ಎಂದಿಗೂ ಇಡಬೇಡಿ

ಬಣ್ಣ ಮುಖ್ಯ
ಮನೆಯ ಪ್ರವೇಶ ದ್ವಾರದಲ್ಲಿ ಹಾಕುವ ಡೋರ್‌ಮ್ಯಾಟ್‌ನ ಬಣ್ಣ ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ. ಇದು ದಿಕ್ಕನ್ನು ಅವಲಂಬಿಸಿರುತ್ತದೆ. ಮನೆಯ ಪ್ರವೇಶ ದ್ವಾರವಿರುವ ಪ್ರತಿಯೊಂದು ದಿಕ್ಕು ಒಂದೊಂದು ದೇವರನ್ನು ಪರಿಗಣಿಸುತ್ತದೆ. ಪೂರ್ವ ಸೂರ್ಯನ ದಿಕ್ಕಾದರೆ, ಪಶ್ಚಿಮ ಶನಿಯ ದಿಕ್ಕಾಗಿದೆ. ಅದೇ ರೀತಿ ಉತ್ತರ ಬುಧ ಮತ್ತು ದಕ್ಷಿಣ ಮಂಗಳನ ದಿಕ್ಕಾಗಿದೆ.
ಮನೆಯ ಪ್ರವೇಶವು ಪೂರ್ವದಲ್ಲಿದ್ದರೆ ಬಿಳಿ, ಹಳದಿ ಅಥವಾ ಕೆನೆ ಬಣ್ಣದ ಡೋರ್ ಮ್ಯಾಟ್ ಬಳಸುವುದು ಸೂಕ್ತ. ಮನೆ ಪ್ರವೇಶವು ಪಶ್ಚಿಮದಲ್ಲಿದ್ದರೆ ನೀಲಿ, ಬಿಳಿ ಮತ್ತು ಹಸಿರು ಬಣ್ಣದ ಡೋರ್ ಮ್ಯಾಟ್ ಬಳಸಬೇಕು. ಒಂದು ವೇಳೆ ಮನೆಯ ಪ್ರವೇಶದ್ವಾರವು ಉತ್ತರ ದಿಕ್ಕಿನಲ್ಲಿದ್ದರೆ ಡೋರ್‌ಮ್ಯಾಟ್‌ನ ಬಣ್ಣವು ಹಸಿರು, ಬಿಳಿ, ಹಳದಿ ಅಥವಾ ಕೆನೆ ಬಣ್ಣದ್ದಾಗಿರಬೇಕು. ದಕ್ಷಿಣ ದಿಕ್ಕಿನಲ್ಲಿ ಮನೆಯ ಪ್ರವೇಶ ದ್ವಾರವಿದ್ದರೆ ಡೋರ್‌ಮ್ಯಾಟ್ ಗುಲಾಬಿ, ಬೆಳ್ಳಿ, ಕೆಂಪು, ಬಿಳಿ ಅಥವಾ ಹಸಿರು ಬಣ್ಣದ್ದಾಗಿರಬೇಕಾಗುತ್ತದೆ.
ಆಕಾರ ಹೇಗಿರಬೇಕು?
ಪ್ರತಿಯೊಬ್ಬರ ಜೀವನದಲ್ಲೂ ಒಂದು ನಿರ್ಧಿಷ್ಟ ಗುರಿಗಳಿರುತ್ತವೆ. ಹೀಗಾಗಿ ಇದಕ್ಕೆ ಸೂಕ್ತವಾಗುವ ಡೋರ್‌ಮ್ಯಾಟ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಡೋರ್‌ಮ್ಯಾಟ್ ಆಯತಾಕಾರವಾಗಿದ್ದರೆ ಅದು ಜೀವನಕ್ಕೆ ಸ್ಥಿರತೆಯನ್ನು, ವೃತ್ತಾಕಾರದಲ್ಲಿದ್ದರೆ ಅದು ಪ್ರೀತಿ ಮತ್ತು ವೈವಾಹಿಕ ಸಂತೋಷವನ್ನು, ಅಂಡಾಕಾರ ಮತ್ತು ಆಯತಾಕಾರದಲ್ಲಿದ್ದರೆ ಅದು ಸಂಪತ್ತನ್ನು ವೃದ್ಧಿಸುತ್ತದೆ ಎನ್ನುತ್ತಾರೆ ತಜ್ಞರು.
ಯಾವುದರಲ್ಲಿ ಮಾಡಿರಬೇಕು?
ಆಕಾರ ಮತ್ತು ಬಣ್ಣ ಮಾತ್ರ ಪರಿಗಣಿಸುವುದಲ್ಲ ಡೋರ್‌ಮ್ಯಾಟ್‌ನ ವಸ್ತುವನ್ನು ಸಹ ಎಚ್ಚರಿಕೆಯಿಂದ ಪರಿಶೀಲನೆ ಮಾಡಬೇಕು. ರೇಷ್ಮೆ, ಹತ್ತಿ ಅಥವಾ ನೈಸರ್ಗಿಕ ನಾರಿನಿಂದ ಮಾಡಿರುವ ಡೋರ್‌ಮ್ಯಾಟ್ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇವುಗಳು ಮಾತ್ರವಲ್ಲ ಮನೆಯಲ್ಲಿ ಸದಾ ಸಕಾರತ್ಮಕ ಶಕ್ತಿಯ ಪ್ರವೇಶಕ್ಕೆ ನಿಯಮಿತವಾಗಿ ಡೋರ್ ಮ್ಯಾಟ್ ಬದಲಾಯಿಸಬೇಕು. ಇದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡ ಬಹು ಮುಖ್ಯವಾಗಿದೆ.