ಭಾರತದ ಕಾಮನ್‌ವೆಲ್ತ್ ಸಾಧನೆ
ವೆಯ್ಟ್ ಲಿಫ್ಟಿಂಗ್‌ನಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಹ್ಯಾಟ್ರಿಕ್ ಚಿನ್ನ ಗಳಿಸಿರುವುದು ನೆನಪಿಡಬೇಕಾದ ದಾಖಲೆ. ಮಹಿಳೆಯರ ಜುಡೊದಲ್ಲಿ ಕಾಮನ್‌ವೆಲ್ತ್ ಇತಿಹಾಸ ದಲ್ಲೇ ಮೊದಲ ಬಾರಿಗೆ ಅಸ್ಮಿತಾ ದೇವಿ ಚಿನ್ನ ತಂದುಕೊಟ್ಟಿದ್ದಾರೆ. ಮಹಿಳೆಯರ ಶಾಟ್‌ಪುಟ್‌ನ ಎ-57 ವಿಭಾಗ ದಲ್ಲಿ ಪ್ಯಾರಾ ಕ್ರೀಡಾಳು ಶರ್ಮಿಳಾ ಧನ್ಕರ್ ಚಿನ್ನ ಪಡೆದು, ಬಂಗಾರ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎಂಬ ದಾಖಲೆ ಮಾಡಿ ಪುಳಕ ಮೂಡಿಸಿದರು.
-
ಈ ಸಲದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಹೊಸ ಸಾಧನೆಯನ್ನೇ ಬರೆದಿದೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಪಂದ್ಯಾವಳಿಯಲ್ಲಿ ಭಾರತೀಯ ಕ್ರೀಡಾಳುಗಳು 13 ಚಿನ್ನ, 17 ಬೆಳ್ಳಿ, ಮತ್ತು 9 ಕಂಚಿನ ಪದಕ ಸೇರಿ ಒಟ್ಟು 39 ಪದಕಗಳನ್ನು ಗಳಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.
ವೆಯ್ಟ್ ಲಿಫ್ಟಿಂಗ್‌ನಲ್ಲಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಹ್ಯಾಟ್ರಿಕ್ ಚಿನ್ನ ಗಳಿಸಿರುವುದು ನೆನಪಿಡಬೇಕಾದ ದಾಖಲೆ. ಮಹಿಳೆಯರ ಜುಡೊದಲ್ಲಿ ಕಾಮನ್‌ವೆಲ್ತ್ ಇತಿಹಾಸ ದಲ್ಲೇ ಮೊದಲ ಬಾರಿಗೆ ಅಸ್ಮಿತಾ ದೇವಿ ಚಿನ್ನ ತಂದುಕೊಟ್ಟಿದ್ದಾರೆ. ಮಹಿಳೆಯರ ಶಾಟ್‌ಪುಟ್‌ನ ಎ-57 ವಿಭಾಗದಲ್ಲಿ ಪ್ಯಾರಾ ಕ್ರೀಡಾಳು ಶರ್ಮಿಳಾ ಧನ್ಕರ್ ಚಿನ್ನ ಪಡೆದು, ಬಂಗಾರ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎಂಬ ದಾಖಲೆ ಮಾಡಿ ಪುಳಕ ಮೂಡಿಸಿದರು.
ಇದನ್ನೂ ಓದಿ: Commonwealth Games 2026: 13 ಚಿನ್ನ, 17 ಬೆಳ್ಳಿ, 9 ಕಂಚಿನ ಪದಕಗಳೊಂದಿಗೆ ಭಾರತಕ್ಕೆ 4ನೇ ಸ್ಥಾನ!
ಪುರುಷರ 100 ಮೀಟರ್ ಓಟದಲ್ಲಿ ಚಿನ್ನ ಬೆಳ್ಳಿಗಳೆರಡೂ ಭಾರತಕ್ಕೆ ಬಂದಿವೆ. ಪುರುಷರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಡಬಲ್ ಪೋಡಿಯಂ ಪದಕಗಳನ್ನು ನೀರಜ್ ಚೋಪ್ರಾ ಹಾಗೂ ಯಶ್ ವೀರ್ ಸಿಂಗ್ ಗಳಿಸಿದ್ದು ವಿಶೇಷ. ವೆಯ್ಟ್ ಲಿಫ್ಟಿಂಗ್‌ನಲ್ಲಿ ಎಂಟು ಪದಕಗಳು, ಬಾಕ್ಸಿಂಗ್ ನಲ್ಲಿ 8 ಚಿನ್ನ ಸೇರಿ 10 ಪದಕಗಳನ್ನು ಭಾರತಕ್ಕೆ ನಮ್ಮವರು ತಂದುಕೊಟ್ಟಿದ್ದಾರೆ. ಇವೆಲ್ಲ ಸಾಧನೆಗಳು, ನಾವು ಯಾವ ಕಡೆಗೆ ಇನ್ನಷ್ಟು ಗಮನ ಹರಿಸಬೇಕು ಎಂಬುದನ್ನು ಸೂಚಿಸುತ್ತಿವೆ.
ಈ ಸಲ ಫಿಫಾ ಅರ್ಹತಾ ಸುತ್ತಿಗೇ ಭಾರತಕ್ಕೆ ಏರಲಾಗಲಿಲ್ಲ. ಒಂದು ಕಾಲದಲ್ಲಿ ಪಾರಮ್ಯ ಮೆರೆದಿದ್ದ ಕ್ರೀಡೆಯಲ್ಲಿ ಇಂದು ನಾವು ಇಲ್ಲವೇ ಇಲ್ಲ. ಆದರೆ ನಮ್ಮ ಅಥ್ಲೀಟ್‌ಗಳು, ಬಾಕ್ಸರ್‌ಗಳು, ವೆಯ್ಟ್ ಲಿ-ರ್‌ಗಳು ತಮ್ಮ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಭಾರತದ ಹೆಸರನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮೆರೆಸುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಭಾರತಕ್ಕೆ ಸಾಕಷ್ಟು ಹಣ, ಪ್ರತಿಭೆ, ಮಾನ ಸಮ್ಮಾನಗಳು ಹರಿದುಬರುತ್ತವೆ. ಆದರೆ ನಾವು ನಿಜಕ್ಕೂ ಹೆಚ್ಚು ಗಮನ ಕೊಟ್ಟು, ಗ್ರಾಮೀಣ ಪ್ರತಿಭೆ ಗಳನ್ನು ಪತ್ತೆ ಹಚ್ಚಿ, ಪೋಷಿಸಬೇಕಾದ್ದು ಈ ಕ್ರೀಡೆಗಳಲ್ಲಿ. ಖಂಡಿತವಾಗಿಯೂ ಭಾರತದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ.
ಪ್ರೋತ್ಸಾಹ ಅಗತ್ಯವಿದೆ. ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಮಿನಿ ಒಲಿಂಪಿಕ್ಸ್ ಎಂದೇ ಕರೆಯ ಲಾಗುತ್ತಿದ್ದು, ಮುಂದಿನ ಒಲಿಂಪಿಕ್ಸ್‌ನಲ್ಲೂ ಭಾರತದ ಸಾಧನೆಗೆ ಇದು ಮೆಟ್ಟಿಲಾಗಲಿ ಎಂದು ಹಾರೈಸಬಹು ದಾಗಿದೆ. ಮುಂದಿನ ಕಾಮನ್ ವೆಲ್ತ್ ಕ್ರೀಡಾಕೂಟ ಭಾರತದ ಗುಜರಾತ್‌ನಲ್ಲಿ ನಡೆಯ ಲಿದ್ದು, ತವರು ನೆಲದಲ್ಲಿ ಇನ್ನಷ್ಟು ಸಾಧನೆಯನ್ನು ನಿರೀಕ್ಷಿಸಬಹುದಾಗಿದೆ.