ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಮೊಗೆದಷ್ಟೂ ಭ್ರಷ್ಟತನ

ಕ್ರಿಪ್ಟೋಕರೆನ್ಸಿ ಮೂಲಕ ಅಕ್ರಮವಾಗಿ ವಿದೇಶಿ ವಹಿವಾಟು ನಡೆಸಿದ ಆರೋಪದ ತನಿಖೆ ಯನ್ನು ಇಡಿ ನಡೆಸುತ್ತಿದೆ. ಈ ಅಧಿಕಾರಿಯ ಮೇಲೆ ಇದೇ ಮೊದಲ ಬಾರಿಗೆ ಕಾನೂನು ಪಾಲನೆ ಸಂಸ್ಥೆಗಳ ದಾಳಿ ನಡೆಯುತ್ತಿರುವುದೇನೂ ಅಲ್ಲ. ಈ ಹಿಂದೆ ಅಬಕಾರಿ ಡಿಸಿ ಆಗಿದ್ದ ಸಂದರ್ಭ ದಲ್ಲಿ ಲೋಕಾಯುಕ್ತ ಇಲಾಖೆ ಇವರ ಮೇಲೆ ದಾಳಿ ನಡೆಸಿ, ಅಕ್ರಮಗಳ ಪತ್ತೆ ಹಚ್ಚಿ, ತನಿಖೆ ಯನ್ನು ಕೈಗೊಂಡಿತ್ತು

Vishwavani Editorial: ಮೊಗೆದಷ್ಟೂ ಭ್ರಷ್ಟತನ

-

Profile
Ashok Nayak Jun 26, 2026 6:00 AM

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅಬಕಾರಿ ಇಲಾಖೆಯ ಬೆಳಗಾವಿ, ಕಲಬುರಗಿ, ದಾವಣಗೆರೆ ಮತ್ತು ಹೊಸಪೇಟೆ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್ ಮತ್ತು ಆಪ್ತರಿಗೆ ಸೇರಿದ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ, ಅಕ್ರಮ ಸಂಪತ್ತಿನ ತನಿಖೆ, ಕಡತಗಳ ಪರಿಶೀಲನೆ ಆಗಿದೆ.

ಕ್ರಿಪ್ಟೋಕರೆನ್ಸಿ ಮೂಲಕ ಅಕ್ರಮವಾಗಿ ವಿದೇಶಿ ವಹಿವಾಟು ನಡೆಸಿದ ಆರೋಪದ ತನಿಖೆ ಯನ್ನು ಇಡಿ ನಡೆಸುತ್ತಿದೆ. ಈ ಅಧಿಕಾರಿಯ ಮೇಲೆ ಇದೇ ಮೊದಲ ಬಾರಿಗೆ ಕಾನೂನು ಪಾಲನೆ ಸಂಸ್ಥೆಗಳ ದಾಳಿ ನಡೆಯುತ್ತಿರುವುದೇನೂ ಅಲ್ಲ. ಈ ಹಿಂದೆ ಅಬಕಾರಿ ಡಿಸಿ ಆಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಇಲಾಖೆ ಇವರ ಮೇಲೆ ದಾಳಿ ನಡೆಸಿ, ಅಕ್ರಮಗಳ ಪತ್ತೆ ಹಚ್ಚಿ, ತನಿಖೆಯನ್ನು ಕೈಗೊಂಡಿತ್ತು. ಆದರೆ ಇವರ ಮೇಲೆ ನಂತರ ಯಾವುದೇ ಕ್ರಮ ಆಗಿರಲಿಲ್ಲ. ಈಗಲೂ ಐದಾರು ಕಡೆಗಳಲ್ಲಿರುವ ಇವರ ಆಸ್ತಿಗಳ ಮೇಲೆ ದಾಳಿ ನಡೆದಿದ್ದು, ನೂರಕ್ಕೂ ಹೆಚ್ಚು ಮದ್ಯದಂಗಡಿಗಳ ಸನ್ನದು, ಲೆಕ್ಕಪತ್ರಗಳು, ಷೇರು ಹೂಡಿಕೆ ಪತ್ರಗಳು, ಆಸ್ತಿ ಪತ್ರಗಳು ಪತ್ತೆಯಾಗಿವೆ. ಅಪಾರ ಪ್ರಮಾಣದ ಚಿನ್ನಾಭರಣ, ಚಿನ್ನದ ಬಿಸ್ಕತ್‌ಗಳು ಪತ್ತೆೆಯಾಗಿವೆ ಎಂದು ಮೂಲಗಳು ತಳಿಸಿದೆ.

ಇದನ್ನೂ ಓದಿ: Lokayukta Raid: ಲಂಚ ಸ್ವೀಕರಿಸುತ್ತಿದ್ದ ಸಿಎಂ ಪದಕ ವಿಜೇತ ಅಧಿಕಾರಿ ಲೋಕಾಯುಕ್ತ ಬಲೆಗೆ

ಇವರು ಪ್ರಭಾವಿ ಎಂಬುದು ಯಾರಿಗೂ ಅರ್ಥವಾಗುವ ಸಂಗತಿ. ಇವರು ಕರ್ನಾಟಕದ ಸರಕಾರದ ಪ್ರಭಾವಿ ಸಚಿವರೊಬ್ಬರ ಸೋದರಿಯ ಪತಿ. ಪ್ರಭಾವಿ ಸ್ಥಾನದಲ್ಲಿ ಇರುವವರ ಸಂಬಂಧಿಕರು ಯಾವುದೇ ಅಕ್ರಮ ಮಾಡಿದರೂ ದಕ್ಕಿಸಿಕೊಳ್ಳಬಹುದೇ? ಈ ಹಿಂದೆ ಇವರು ಅಕ್ರಮ ಎಸಗಿಯೂ, ಸಿಕ್ಕಿಬಿದ್ದೂ ಯಾವುದೇ ಕ್ರಮ ಆಗದಿದ್ದುದು ಯಾಕೆಂದು ಈಗ ಅರ್ಥ ಮಾಡಿಕೊಳ್ಳಬಹುದು. ಹಾಗೆಯೇ ಅಕ್ರಮ ಎಸಗಿದವರಿಗೆ, ಲೋಕಾಯುಕ್ತ ದಾಳಿಗೂ ಒಳಗಾದವರ ಮೇಲೆ ಯಾಕೆ ಯಾವ ಕ್ರಮವೂ ನಡೆಯುತ್ತಿಲ್ಲ ಎಂಬುದನ್ನು ಪ್ರಶ್ನಿಸ ಬೇಕಾದ ಸನ್ನಿವೇಶ ಇದಾಗಿದೆ.

ಲೋಕಾಯುಕ್ತ ಹಲ್ಲು ಕಿತ್ತು ಹಾವಿನಂತಾಗಿದೆ. ಅದರ ಅಸ್ತಿತ್ವವೇ ಅದಕ್ಕೆ ಭಾರವಾಗಿದೆ. ಅಲ್ಲಿ ದಾಳಿಗಳು ನಡೆಯುತ್ತವೆ, ಆದರೆ ಕ್ರಮ ಕೈಗೊಳ್ಳುವ ಯಾವುದೇ ಅಧಿಕಾರ ಅದರ ಕೈಯಲ್ಲಿಲ್ಲ ಎಂಬುದು ರುಜುವಾತಾದ ಸಂಗತಿ. ಲೋಕಾಯುಕ್ತ ಸಂಸ್ಥೆಯ ದಾಳಿಗಳು ನಗೆಪಾಟಲಿಗೀಡಾಗಿವೆ. ಅದರ ದಾಳಿಗೆ ತುತ್ತಾಗಿಯೂ ಒಬ್ಬ ಅಧಿಕಾರಿ ಮತ್ತಷ್ಟು ಮೇಲಿನ ಸ್ಥಾನಕ್ಕೆೆ ಹೋಗುತ್ತಾನೆ, ಇನ್ನಷ್ಟು ಪ್ರಭಾವಿ ಆಗುತ್ತಾನೆ ಎದರೆ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ಯಾವುದಿದೆ? ಈ ಬಗ್ಗೆ ಲೋಕಾಯುಕ್ತ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭ್ರಷ್ಟರಿಗೆ ಶಿಕ್ಷೆಯಾಗಬೇಕು.