ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಅಪರಾಧ ಕೃತ್ಯಗಳಿಗೆ ಲಗಾಮು ಹಾಕಿ

ಇದು ಗಂಭೀರ ಚಿಂತನೆಗೆ ಒಡ್ಡುವಂಥ ಸಂಗತಿಯೆನ್ನಬೇಕು. ಇನ್ನು ‘ಬಾಲ್ಯವಿವಾಹ’ ಮತ್ತು ‘ಬಾಲಕಾರ್ಮಿಕತನ’ಕ್ಕೆ ಸಂಬಂಧಿಸಿಯೂ ಪ್ರಕರಣಗಳು ದಾಖಲಾಗುವುದು ನಿಂತಿಲ್ಲ. ಆಗಷ್ಟೇ ಪ್ರಪಂಚವನ್ನು ನೋಡುತ್ತಿರುವ ಮಕ್ಕಳು ಶಿಕ್ಷಣ ಮುಖಿಗಳಾಗಿ ಕೈಯಲ್ಲಿ ಪುಸ್ತಕ ವನ್ನು ಹಿಡಿಯುವಂತಾಗಬೇಕೇ ವಿನಾ, ದುಡಿಮೆಯಲ್ಲಿ ತೊಡಗಿ ಕೈಮಸಿ ಮಾಡಿಕೊಳ್ಳ ಬಾರದು ಎಂಬ ಆಶಯದೊಂದಿಗೆ ಬಾಲಕಾರ್ಮಿಕ ಪದ್ಧತಿಗೆ ಲಗಾಮು ಹಾಕಲಾಗಿದೆ

ಅಪರಾಧ ಕೃತ್ಯಗಳಿಗೆ ಲಗಾಮು ಹಾಕಿ

Profile Ashok Nayak Mar 26, 2025 5:34 AM

ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ರಾಜ್ಯದಲ್ಲಿ ಮಕ್ಕಳನ್ನು ಗುರಿಯಾಗಿಸಿಕೊಂಡು ಎಸಗುವ ಅಪರಾಧ ಕೃತ್ಯಗಳಲ್ಲಿ ಹೆಚ್ಚಳವಾಗಿದೆ. ಪ್ರಸಕ್ತ ವರ್ಷದ ಮೊದಲ ಎರಡು ತಿಂಗ ಳಲ್ಲೇ ದಿನವೊಂದರಲ್ಲಿ ಸರಾಸರಿ 10 ‘ಪೋಕ್ಸೋ’ ಪ್ರಕರಣಗಳು ದಾಖಲಾಗಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಒದಗಿಸುವ ಸದುದ್ದೇಶದಿಂದ ರೂಪುಗೊಂಡಿ ರುವ ಕಾಯ್ದೆಯೇ ‘ಪೋಕ್ಸೋ’. ಆದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದಾಖಲಾದ ಒಟ್ಟು 13990 ಪ್ರಕರಣಗಳಲ್ಲಿ 353ರಲ್ಲಿ ಮಾತ್ರವೇ ಶಿಕ್ಷೆ ಪ್ರಕಟವಾಗಿದೆ ಹಾಗೂ ಒಟ್ಟು ಪ್ರಕರಣಗಳಲ್ಲಿ ಶೇ.26ಕ್ಕಿಂತ ಹೆಚ್ಚು ಪ್ರಮಾಣದ ಆರೋಪಿಗಳು (3662ಮಂದಿ) ಖುಲಾಸೆ ಯಾಗಿದ್ದಾರೆ.

ಇದನ್ನೂ ಓದಿ: Vishwavani Editorial: ದೇಶದ್ರೋಹಿಗಳನ್ನು ಜಾಲಾಡಬೇಕಿದೆ

ಇದು ಗಂಭೀರ ಚಿಂತನೆಗೆ ಒಡ್ಡುವಂಥ ಸಂಗತಿಯೆನ್ನಬೇಕು. ಇನ್ನು ‘ಬಾಲ್ಯವಿವಾಹ’ ಮತ್ತು ‘ಬಾಲಕಾರ್ಮಿಕತನ’ಕ್ಕೆ ಸಂಬಂಧಿಸಿಯೂ ಪ್ರಕರಣಗಳು ದಾಖಲಾಗುವುದು ನಿಂತಿಲ್ಲ. ಆಗಷ್ಟೇ ಪ್ರಪಂಚವನ್ನು ನೋಡುತ್ತಿರುವ ಮಕ್ಕಳು ಶಿಕ್ಷಣ ಮುಖಿಗಳಾಗಿ ಕೈಯಲ್ಲಿ ಪುಸ್ತಕ ವನ್ನು ಹಿಡಿಯುವಂತಾಗಬೇಕೇ ವಿನಾ, ದುಡಿಮೆಯಲ್ಲಿ ತೊಡಗಿ ಕೈಮಸಿ ಮಾಡಿಕೊಳ್ಳ ಬಾರದು ಎಂಬ ಆಶಯದೊಂದಿಗೆ ಬಾಲಕಾರ್ಮಿಕ ಪದ್ಧತಿಗೆ ಲಗಾಮು ಹಾಕಲಾಗಿದೆ.

ಬಾಲ್ಯವಿವಾಹದಂಥ ಪಿಡುಗಿಗೆ ಕಡಿವಾಣ ಹಾಕಿರುವುದರ ಹಿಂದೆ ಇರುವುದೂ ಇಂಥ ಮತ್ತೊಂದು ಸದಾಶಯವೇ. ಇಷ್ಟಾಗಿಯೂ ಪ್ರಸಕ್ತ ವರ್ಷದ ಮೊದಲ ಎರಡು ತಿಂಗಳಲ್ಲಿ ಈ ಎರಡು ವಿಷಯಗಳಿಗೆ ಸಂಬಂಧಿಸಿ ಕ್ರಮವಾಗಿ 23 ಮತ್ತು 16 ಪ್ರಕರಣಗಳು ವರದಿ ಯಾಗಿವೆಯೆಂದರೆ, ಇಂಥ ತಪ್ಪನ್ನು ಎಸಗಿದವರಿಗೆ ಒಂದೋ ಕಾನೂನಿನ ಅರಿವಿಲ್ಲ ಅಥವಾ ಅರಿವಿದ್ದೂ ಅದನ್ನು ಮುರಿಯುವ ಧಾರ್ಷ್ಟ್ಯವನ್ನು ತೋರಿದ್ದಾರೆ ಎಂದು ಭಾವಿಸಬೇಕಾಗುತ್ತದೆ.

‘ಪೋಕ್ಸೋ’ ಪ್ರಕರಣಗಳೇ ಇರಲಿ ಅಥವಾ ‘ಬಾಲ್ಯವಿವಾಹ’ ಮತ್ತು ‘ಬಾಲಕಾರ್ಮಿಕತನ’ ಸಂಬಂಧಿತ ಪ್ರಕರಣಗಳೇ ಇರಲಿ, ಅದರಲ್ಲಿ ಭಾಗಿಯಾದ ‘ದೊಡ್ಡವರು’ ಹೆಸರಿಗಷ್ಟೇ ದೊಡ್ಡವರಾಗಿರುತ್ತಾರೆಯೇ ವಿನಾ, ‘ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಎಂಬ ಸದಾಶ ಯವನ್ನು ಅರಿತವರಾಗಿರುವುದಿಲ್ಲ. ಅದನ್ನು ಅವರಿಗೆ ಸಮರ್ಥವಾಗಿ ಮನದಟ್ಟು ಮಾಡಿ ಸಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಹೆಚ್ಚಾಗಿದೆ.