ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ದಂಡಂ ದಶಗುಣಂ ಭವೇತ್...

ನಾಟಕೀಯವಾಗಿ ಶಾಂತಿಮಂತ್ರ ಜಪಿಸುತ್ತಲೇ ಬಗಲಲ್ಲಿನ ದೊಣ್ಣೆಯನ್ನು ಆಗಾಗ ಸವರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪರೋಕ್ಷವಾಗಿ ನೀಡುತ್ತಿರುವ ಕುಮ್ಮಕ್ಕು ಕೂಡ ಪಾಕಿಸ್ತಾನದ ಈ ಠೇಂಕಾರಕ್ಕೆ ಮತ್ತು ಕಿತಾಪತಿಗೆ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಒಟ್ಟಿನಲ್ಲಿ, ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ, ಅಷ್ಟೇ!

Vishwavani Editorial: ದಂಡಂ ದಶಗುಣಂ ಭವೇತ್...

-

Ashok Nayak
Ashok Nayak Nov 10, 2025 12:37 PM

ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕರ ಮಾರಣಹೋಮ ನಡೆಸಿದ ಪಾಕ್-ಕೃಪಾಪೋಷಿತ ಉಗ್ರರು ಇನ್ನೂ ಬುದ್ಧಿ ಕಲಿತಂತಿಲ್ಲ. ‘ಆಪರೇಷನ್ ಸಿಂದೂರ’ ಕಾರ್ಯಾ ಚರಣೆ ನಡೆಸಿದ ಭಾರತವು ತಮ್ಮ ನೆಲೆಗಳಿಗೆ ಯಾವ ಮಟ್ಟಿಗಿನ ಬಿಸಿ ಮುಟ್ಟಿಸಿ ತರಿದು ಹಾಕಿತು ಎಂಬುದನ್ನು ಪ್ರತ್ಯಕ್ಷ ಕಂಡಿದ್ದರೂ, ಉಗ್ರರು ತಮ್ಮ ಹಳೆಯ ಚಾಳಿಯನ್ನು ಬಿಟ್ಟಿಲ್ಲ.

ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಪ್ರದೇಶದಲ್ಲಿ ಇಬ್ಬರು ಉಗ್ರರು ಭಾರತ ದೊಳಗೆ ನುಸುಳಲು ಯತ್ನಿಸಿ ಭದ್ರತಾ ಪಡೆಗಳಿಂದ ಹತರಾದ ಸುದ್ದಿಯು ಇದಕ್ಕೆ ಪುಷ್ಟಿ ನೀಡುತ್ತದೆ. ಉಗ್ರವಾದವಾಗಲೀ, ಯುದ್ಧವಾಗಲೀ ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸು ವುದಿಲ್ಲ, ಅದರಿಂದ ಒದಗುವುದು ನಷ್ಟವಷ್ಟೇ ಎಂಬುದಕ್ಕೆ ಇಸ್ರೇಲ್ -ಹಮಾಸ್ ನಡುವಿನ ಹಣಾಹಣಿ, ಉಕ್ರೇನ್-ರಷ್ಯಾ ನಡುವಿನ ಯುದ್ಧವೇ ಸಾಕ್ಷಿಯಾಗಿವೆ.

ಇದನ್ನೂ ಓದಿ: Vishwavani Editorial: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ

ಇಷ್ಟಾಗಿಯೂ ಉಗ್ರರು ಭಾರತವನ್ನು ಕೆಣಕುತ್ತಿರುವುದಕ್ಕೆ ಮತ್ತು ಅವರಿಗೆ ಪಾಕಿಸ್ತಾನವು ಕುಮ್ಮಕ್ಕು ನೀಡುತ್ತಿರುವುದಕ್ಕೆ ಏನನ್ನುವುದು? ಈ ಕಾರಣದಿಂದಾಗಿಯೇ ಜಮ್ಮು ಮತ್ತು ಪಂಜಾಬ್ ವಲಯದ ಜಮ್ಮು, ಕಥುವಾ, ಸಾಂಬಾ, ಪಠಾಣ್‌ಕೋಟ್ ಪ್ರದೇಶಗಳಲ್ಲಿ ಭಾರತವು ತನ್ನ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕಾಗಿ ಬಂದಿದೆ.

ಒಳ್ಳೆಯ ಮಾತಿಗೆ ಬುದ್ಧಿ ಕಲಿಯದವರಿಗೆ ‘ದಂಡಂ ದಶಗುಣಂ ಭವೇತ್’ ಎಂಬಂತೆ ಬಿಸಿ ಮುಟ್ಟಿಸುವುದು ಅನಿವಾರ್ಯವಾಗುತ್ತದೆ. ಇಲ್ಲವಾದಲ್ಲಿ, ಭಾರತದ ಸೌಜನ್ಯವನ್ನು ಪಾಕಿಸ್ತಾನಿ ಸೇನೆ ಮತ್ತು ಉಗ್ರಪಡೆಗಳು ‘ದೌರ್ಬಲ್ಯ’ ಎಂದು ಪರಿಗಣಿಸುವ ಸಾಧ್ಯತೆಯಿದೆ. ನಾಟಕೀಯವಾಗಿ ಶಾಂತಿಮಂತ್ರ ಜಪಿಸುತ್ತಲೇ ಬಗಲಲ್ಲಿನ ದೊಣ್ಣೆಯನ್ನು ಆಗಾಗ ಸವರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪರೋಕ್ಷವಾಗಿ ನೀಡುತ್ತಿರುವ ಕುಮ್ಮಕ್ಕು ಕೂಡ ಪಾಕಿಸ್ತಾನದ ಈ ಠೇಂಕಾರಕ್ಕೆ ಮತ್ತು ಕಿತಾಪತಿಗೆ ಕಾರಣ ಎಂಬುದನ್ನು ಬಿಡಿಸಿ ಹೇಳ ಬೇಕಿಲ್ಲ. ಒಟ್ಟಿನಲ್ಲಿ, ಕಾಲವೇ ಎಲ್ಲದಕ್ಕೂ ಉತ್ತರವನ್ನು ಹೇಳುತ್ತದೆ, ಅಷ್ಟೇ!