ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Editorial: ಇನ್ನಾದರೂ ಒಗ್ಗಟ್ಟು ಮೂಡಲಿ

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸುಪುತ್ರನೂ ಅಲ್ಲಿನ ಉಪಮುಖ್ಯ ಮಂತ್ರಿಯೂ ಆಗಿರುವ ಉದಯನಿಧಿ ಸ್ಟಾಲಿನ್ ಅವರು ಕಳೆದ ವರ್ಷ ‘ಸನಾತನ ತೆಯ ನಿರ್ಮೂಲನ’ದ ಬಗ್ಗೆ ಮಾತ ನಾಡಿದ್ದನ್ನು ಯಾರೂ ಮರೆಯ ಲಾಗದು. ಇಂಥ ಅಪ್ರಚೋದಿತ ಹೇಳಿಕೆಗಳನ್ನು ನೀಡುವಂಥ ಧಾರ್ಷ್ಟ್ಯ ಅಥವಾ ಭಂಡ ಧೈರ್ಯವು ನಮ್ಮ ವ್ಯವಸ್ಥೆಯಲ್ಲಿ ಕೆಲವರಿಗೆ ಬರುವುದಾದರೂ ಹೇಗೆ? ಎಂದು ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ

Editorial: ಇನ್ನಾದರೂ ಒಗ್ಗಟ್ಟು ಮೂಡಲಿ

ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಶ್ರೀಗಳು

Profile Ashok Nayak Jan 20, 2025 7:51 AM

Source : Vishwavani Daily News Paper

ಸನಾತನ ಧರ್ಮ ಎಂದೇ ಕರೆಯಲ್ಪಡುವ ಹಿಂದೂ ಧರ್ಮದಲ್ಲಿ ಏಕತೆಯ ಅಗತ್ಯ ವಿದೆ ಎಂಬುದಾಗಿ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಶ್ರೀಗಳು ಅಭಿಪ್ರಾಯ ಪಟ್ಟಿರುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿಯೇ.

ಈ ಅಭಿಪ್ರಾಯವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ಪ್ರತಿಯೊಬ್ಬ ಹಿಂದೂವಿನ ಅಸ್ಮಿತೆಯ ಪ್ರಶ್ನೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸುಪುತ್ರನೂ ಅಲ್ಲಿನ ಉಪಮುಖ್ಯ ಮಂತ್ರಿಯೂ ಆಗಿರುವ ಉದಯನಿಧಿ ಸ್ಟಾಲಿನ್ ಅವರು ಕಳೆದ ವರ್ಷ ‘ಸನಾತನ ತೆಯ ನಿರ್ಮೂಲನ’ದ ಬಗ್ಗೆ ಮಾತನಾಡಿದ್ದನ್ನು ಯಾರೂ ಮರೆಯ ಲಾಗದು. ಇಂಥ ಅಪ್ರಚೋದಿತ ಹೇಳಿಕೆಗಳನ್ನು ನೀಡುವಂಥ ಧಾರ್ಷ್ಟ್ಯ ಅಥವಾ ಭಂಡ ಧೈರ್ಯವು ನಮ್ಮ ವ್ಯವಸ್ಥೆಯಲ್ಲಿ ಕೆಲವರಿಗೆ ಬರುವುದಾದರೂ ಹೇಗೆ? ಎಂದು ಒಮ್ಮೊಮ್ಮೆ ಆಶ್ಚರ್ಯ ವಾಗುತ್ತದೆ.

ಸಮಾಜದ ಯಾವುದೋ ಒಂದು ವರ್ಗವನ್ನು ಮೆಚ್ಚಿಸುವ ‘ತುಷ್ಟೀಕರಣ ಭಾವ’ವೂ ಇದಕ್ಕೆ ಕಾರಣವಾಗಿರಬಹುದು. ಇದಕ್ಕಿರುವ ಹತ್ತು ಹಲವು ಕಾರಣಗಳನ್ನು ಹುಡುಕುತ್ತಾ ಹೋದಾಗ, ಹಿಂದೂಗಳಲ್ಲಿ ಏಕತೆಯ ಭಾವವು ಅಷ್ಟೊಂದು ಟ್ಟಿಯಾಗಿಲ್ಲದಿರುವುದೂ ಒಂದು ಕಾರಣವಾಗಿದೆ ಎಂಬುದು ಅರಿವಾಗುತ್ತದೆ.

ಮಿಕ್ಕ ಕೆಲವು ಧರ್ಮಗಳ ವಿರುದ್ಧವಾಗಿ ಭಾರತದಲ್ಲಿ ಹೀಗೆ ಬಹಿರಂಗವಾಗಿ ಹೇಳಿಕೆ ಕೊಟ್ಟು ಜಯಿಸಿಕೊಂಡವರ ಸಂಖ್ಯೆ ಕಮ್ಮಿಯೇ; ಏಕೆಂದರೆ, ಆ ಧರ್ಮಗಳಲ್ಲಿ ಕಾಣಬರುವ ಒಗ್ಗಟ್ಟು ಹಾಗಿರುತ್ತದೆ. ಹಿಂದೂಗಳ ಬಗ್ಗೆ ಅಥವಾ ಸನಾತನ ಧರ್ಮದ ಬಗ್ಗೆ ಹೀನಾಯವಾಗಿ ಮಾತನಾಡಿ ಯೂ ಜೀರ್ಣಿಸಿಕೊಳ್ಳಬಹುದು ಎಂಬ ಗ್ರಹಿಕೆ ಕೆಲವರಲ್ಲಿ ದಟ್ಟವಾಗಿರುವುದನ್ನು ತಳ್ಳಿಹಾಕಲಾಗ ದು.

ಇತ್ತೀಚೆಗೆ ತಥಾಕಥಿತ ಚಿಂತಕರೊಬ್ಬರು, “ಹಿಂದೂ ಅನ್ನೋದು ಅವಮಾನಕರ ಶಬ್ದ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದೂ" ಎಂಬ ಆಣಿಮುತ್ತ ನ್ನು ಉದುರಿಸಿದ್ದುಂಟು. ಹಾಗಂತ ಕಾಶ್ಮೀರದ ಶೈವಗ್ರಂಥಗಳಲ್ಲಿ ದಾಖಲಾಗಿದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು ಎನ್ನಿ. ಆದರೆ ಈ ಬಗ್ಗೆ ಸಮಾಜದ ಯಾವುದೇ ವಲಯದಿಂದಲೂ ಹೇಳಿ ಕೊಳ್ಳುವಷ್ಟು ವಿರೋಧವೇನೂ ವ್ಯಕ್ತವಾಗಲಿಲ್ಲ. ಇದು ಹಿಂದೂಗಳಲ್ಲಿನ ಒಗಟ್ಟಿನ ಕೊರತೆಯ ದ್ಯೋತಕವಲ್ಲವೇ?

ಇದನ್ನೂ ಓದಿ: Vishwavani Editorial: ಪ್ರಯಾಣವೇ ಕೆಟ್ಟ ಕನಸಾದರೆ..