Vishwavani Editorial: ಇಂಧನ ಸ್ವಾವಲಂಬನೆ
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರಕಾರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ. ಇಂಥದೊಂದು ಯೋಜನೆ ಸಾಧ್ಯವೇ ಎಂಬ ಬಗ್ಗೆ ಮೊದಲು ಅನುಮಾನಗಳಿದ್ದವು. ಆದರೆ ಸರಕಾರ ಅದನ್ನು ಸಾಧ್ಯ ವಾಗಿಸಿ ತೋರಿಸಿದೆ. ಅನುಷ್ಠಾನದಲ್ಲಿ ಕೆಲವು ಅನರ್ಹರು ಸೇರಿಕೊಂಡಿರಬಹುದು, ಕೆಲವು ಲೋಪಗಳಿರ ಬಹುದು. ಅನರ್ಹರನ್ನು ಕೈಬಿಟ್ಟು ಅರ್ಹರ ಪಟ್ಟಿಯನ್ನು ಅಂತಿಮಗೊಳಿ ಸುವ ಪ್ರಕ್ರಿಯೆಯಲ್ಲಿ ಸರಕಾರ ಇದೆ.
-
ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರಕಾರ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ. ಇಂಥದೊಂದು ಯೋಜನೆ ಸಾಧ್ಯವೇ ಎಂಬ ಬಗ್ಗೆ ಮೊದಲು ಅನುಮಾನಗಳಿದ್ದವು. ಆದರೆ ಸರಕಾರ ಅದನ್ನು ಸಾಧ್ಯವಾಗಿಸಿ ತೋರಿಸಿದೆ. ಅನುಷ್ಠಾನದಲ್ಲಿ ಕೆಲವು ಅನರ್ಹರು ಸೇರಿಕೊಂಡಿರಬಹುದು, ಕೆಲವು ಲೋಪಗಳಿರಬಹುದು. ಅನರ್ಹರನ್ನು ಕೈಬಿಟ್ಟು ಅರ್ಹರ ಪಟ್ಟಿಯನ್ನು ಅಂತಿಮಗೊಳಿ ಸುವ ಪ್ರಕ್ರಿಯೆಯಲ್ಲಿ ಸರಕಾರ ಇದೆ.
ಆದರೆ ಬೆಸ್ಕಾಂನಲ್ಲಿ 22 ಲಕ್ಷ ಸೇರಿದಂತೆ ದೊಡ್ಡ ಸಂಖ್ಯೆಯ ಫಲಾನುಭವಿಗಳು ಪರಿಶೀಲನೆಯ ವ್ಯಾಪ್ತಿಯಡಿ ಇನ್ನೂ ಬಂದಿಲ್ಲ. ಈಗಿರುವ ಗೃಹಜ್ಯೋತಿ ಮಾನದಂಡವನ್ನು ಪರಿಶೀಲಿ ಸಬೇಕಿದೆ. 200 ಯುನಿಟ್ ಉಚಿತ ಕೊಡಬೇಕು ಎಂಬ ಆಶಯವಿದೆ. ಆದರೆ ಸರಾಸರಿ ಲೆಕ್ಕ ಹಿಡಿಯುತ್ತಿರುವು ದರಿಂದ, ಎಲ್ಲರಿಗೂ ಅದು ಸಿಗುತ್ತಿಲ್ಲ. ಹೊಸದಾಗಿ ಮನೆ ಮಾಡಿದವರಿಗೆ, ಬಾಡಿಗೆ ಇರುವವರಿಗೆ ಯುನಿಟ್ ಲೆಕ್ಕದಿಂದ ಲಾಭವಿಲ್ಲ.
ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಪರಿಷ್ಕರಣೆ ಅವಧಿ ಸೆ.30ರವರೆಗೆ ವಿಸ್ತರಣೆ
ಹಾಗೆಯೇ ವಿದ್ಯುತ್ ದರಗಳ ಸ್ಲ್ಯಾಬ್ ಕೂಡ ಅವೈಜ್ಞಾನಿಕವಾಗಿದೆ. ಮೊದಲು ಇದ್ದ ಹಂತ ಹಂತದ ಸ್ಲ್ಯಾಬ್ ಕೈಬಿಟ್ಟು ಒಂದೇ ದರದ ವ್ಯವಸ್ಥೆಯಿದೆ. 200 ಯುನಿಟ್ ಆಸುಪಾಸಿನಲ್ಲಿ ವಿದ್ಯುತ್ ಬಳಸು ವವರಿಗೆ ಇದರಿಂದ ಅನ್ಯಾಯ ಆಗುವ ಸಂಭವ ಇದೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಇಂಧನ ಸ್ವಾವಲಂಬನೆ ಯನ್ನು ರಾಜ್ಯದಲ್ಲಿ ರೂಢಿಸಲು ಸರಕಾರ ಮುಂದಾದರೆ ಈ ಯಾವ ಸಮಸೆಯೂ ಇರುವುದಿಲ್ಲ. ಕೇಂದ್ರ ಸರಕಾರ ಸೂರ್ಯ ಘರ್ ಯೋಜನೆಯನ್ನು ಜಾರಿ ಮಾಡುತ್ತಿದೆ.
ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳುವವರಿಗೆ 78000 ರೂ.ಗಳ ವರೆಗೂ ಸಬ್ಸಿಡಿಯನ್ನು ಆ ಯೋಜನೆಯಲ್ಲಿ ನೀಡಲಾಗುತ್ತಿದೆ. ಇದನ್ನು ಅನುಷ್ಠಾನ ಮಾಡುವತ್ತ ಸರಕಾರ ಗಮನ ಹರಿಸಬೇಕಿದೆ.
ನಗರಗಳ ದೊಡ್ಡ ಮನೆ ಮಾಲಿಕರು ಸೋಲಾರ್ ವ್ಯವಸ್ಥೆ ಬಳಸುವುದನ್ನು ಕಡ್ಡಾಯ ಮಾಡಬೇಕಿದೆ. ಇದೇನೂ ಭಾರಿ ವೆಚ್ಚವಾಗದು. 300 ಯುನಿಟ್ ವರೆಗೆ ಮನೆಯಲ್ಲೇ ಇದನ್ನು ಹೊಂದಲು ಸಾಧ್ಯ. ಹೆಚ್ಚಿನವರು ಇದರಲ್ಲಿ ಸ್ವಾವಲಂಬನೆ ಸಾಧಿಸಿದಾಗ, ಉಳಿಯುವ ವಿದ್ಯುತ್ ಅನ್ನು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಉಚಿತವಾಗಿ ಒದಗಿಸಲೂ ಸಾಧ್ಯವಿದೆ. ಉಚಿತ ಯೋಜನೆಗಳಿಗಿಂತ ಈ ನೆಲೆಯ ಪ್ರಯತ್ನಗಳು ಹೆಚ್ಚು ಆಗಬೇಕಿದೆ.