ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishwavani Editorial: ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ!

ಒಂದೊಮ್ಮೆ ಕೇಜ್ರಿವಾಲರು ಹೀಗೊಮ್ಮೆ ಯೋಜಿಸಿರುವುದು ನಿಜವೇ ಆಗಿದ್ದಲ್ಲಿ, ಅದಕ್ಕಿಂತ ನಗೆಪಾಟಲಿನ ಸಂಗತಿ ಮತ್ತೊಂದಿಲ್ಲ ಎನ್ನಲಡ್ಡಿಯಿಲ್ಲ. ಒಂದು ರಾಜ್ಯದ ವಿಧಾನಸಭಾ ಚುನಾ ವಣೆಯಲ್ಲಿ ಸೋತವರು ಮತ್ತೊಂದು ರಾಜ್ಯದ ವತಿಯಿಂದ ಇನ್ನೊಂದು ಪ್ರಜಾಪ್ರತಿನಿಧಿ ಸಭೆಗೆ ಸ್ಪರ್ಧಿಸಬಾರದು ಎಂದೇನಿಲ್ಲ

ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ!

ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್

Profile Ashok Nayak Feb 28, 2025 4:47 AM

ಇದೇನು ಹುಚ್ಚೋ, ಬೆಪ್ಪೋ, ಶಿವಲೀಲೆಯೋ ಗೊತ್ತಾಗುತ್ತಿಲ್ಲ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಾವು ಮತ್ತು ತಮ್ಮ ಪಕ್ಷದ ಘಟಾನುಘಟಿಗಳು ಸೋತದ್ದಕ್ಕೆ ಕಾರಣ ವನ್ನು ಕಂಡುಕೊಂಡು ಆತ್ಮಾವಲೋಕನಕ್ಕೆ ಮುಂದಾಗಬೇಕಿದ್ದ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರು ಹೊರಳುದಾರಿ ತುಳಿಯುವ ಲಕ್ಷಣಗಳಿವೆ. ಅವರು ಪಂಜಾಬ್‌ನಿಂದ ರಾಜ್ಯಸಭೆಗೆ ಪ್ರವೇಶಿಸಲು ಚಿಂತನೆ ನಡೆಸಿದ್ದಾರೆ ಮತ್ತು ಈ ಕಾರಣ ದಿಂದಾಗಿಯೇ ತಮ್ಮ ಪಕ್ಷದ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಅವರನ್ನು ಲುಧಿ ಯಾನಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿ ಯನ್ನಾಗಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: Vishwavani Editorial: ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ

ಒಂದೊಮ್ಮೆ ಕೇಜ್ರಿವಾಲರು ಹೀಗೊಮ್ಮೆ ಯೋಜಿಸಿರುವುದು ನಿಜವೇ ಆಗಿದ್ದಲ್ಲಿ, ಅದಕ್ಕಿಂತ ನಗೆಪಾಟಲಿನ ಸಂಗತಿ ಮತ್ತೊಂದಿಲ್ಲ ಎನ್ನಲಡ್ಡಿಯಿಲ್ಲ. ಒಂದು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಸೋತವರು ಮತ್ತೊಂದು ರಾಜ್ಯದ ವತಿಯಿಂದ ಇನ್ನೊಂದು ಪ್ರಜಾಪ್ರತಿ ನಿಧಿ ಸಭೆಗೆ ಸ್ಪರ್ಧಿಸಬಾರದು ಎಂದೇನಿಲ್ಲ.

ಆದರೆ, ಇದು ಕೇಜ್ರಿವಾಲರ ಪಾಲಿಗೆ ಆತ್ಮಾವಲೋಕನದ ಕಾಲವಾಗಿದೆಯೇ ವಿನಾ, ಮತ್ತೊಂದು ಮಾರ್ಗೋಪಾಯ ಹಿಡಿದು ತಮ್ಮ ಬಯಕೆಯನ್ನು ತಣಿಸಿಕೊಳ್ಳುವ ಸಂದರ್ಭ ವಾಗಿಲ್ಲ. ದೆಹಲಿಯಲ್ಲಿ ಅವರ ಸರಕಾರದ ಅವಽಯಲ್ಲಿ ನಡೆದಿದೆಯೆನ್ನಲಾದ ಅಬಕಾರಿ ಹಗರಣ, ಅದರ ಪರಿಣಾಮವಾಗಿ ಕೇಜ್ರಿವಾಲರು ಜೈಲುವಾಸಿಯಾಗಿದ್ದು, ಅಲ್ಲಿಗೆ ತೆರಳುವಾಗಲೂ ಮುಖ್ಯಮಂತ್ರಿ ಗದ್ದುಗೆಯಿಂದ ಇಳಿಯಲು ಮೀನ-ಮೇಷ ಎಣಿಸಿದ್ದು ಇತ್ಯಾದಿ ಕಾರಣಗಳಿಂದಾಗಿ ದೆಹಲಿಯ ನಾಗರಿಕರು ಅವರನ್ನೂ ಅವರ ಆಮ್ ಆದ್ಮಿ ಪಕ್ಷವನ್ನೂ ಮನೆಗೆ ಕಳಿಸಿದ್ದಾರೆ ಎಂಬುದು ಬಹಿರಂಗ ಗುಟ್ಟು.

ಹೀಗಾಗಿ ಮತ್ತೊಮ್ಮೆ ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಅರವಿಂದ ಕೇಜ್ರಿವಾಲರು ಕಸರತ್ತು ಮಾಡಬೇಕಿತ್ತು, ಆದರೆ ಈಗ ಅವರು ಇಡಲು ಹೊರಟಿದ್ದಾರೆ ಎನ್ನಲಾಗುವ ಹೆಜ್ಜೆಯು ‘ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಜಾಣನುಡಿಯನ್ನು ನೆನಪಿಸುವಂತಿದೆ...