Vishwavani Editorial: ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ
ಆಡಳಿತ ಪಕ್ಷ ಮತ್ತು ವಿಪಕ್ಷಗಳ ಪಾಳಯಗಳಲ್ಲಿ ಒಂದೊಂದು ತೆರನಾಗಿ ‘ಹೊಯ್-ಕೈ’ ನಡೆ ಯುತ್ತಿದ್ದರೆ, ಇತ್ತೀಚೆಗೆ ಲಭ್ಯವಾಗಿರುವ ಮಾಹಿತಿಯಂತೆ ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟ ಶುರುವಾಗಿದೆ. ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕ ಸೇರಿದಂತೆ ಸರಕಾರವು ಕಳಿಸಿದ್ದ ಮೂರು ವಿಧೇಯಕಗಳಿಗೆ ರಾಜ್ಯ ಪಾಲರು ಸಹಿ ಹಾಕದೆ ವಾಪಸ್ ಕಳಿಸಿರುವುದೇ ಈ ಬೆಳವಣಿಗೆಗೆ ಕಾರಣ.


ಕರ್ನಾಟಕ ರಾಜ್ಯದ ರಾಜಕೀಯ ವ್ಯವಸ್ಥೆಗೆ ಅದ್ಯಾವ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ, ಕಳೆದ ಒಂದು ವರ್ಷದಿಂದ ಏನಾದರೊಂದು ಹಗ್ಗಜಗ್ಗಾಟವನ್ನು ನೋಡುತ್ತಲೇ ಕೂರು ವಂತಾಗಿ ರಾಜ್ಯದ ಜನರು ಬೇಸತ್ತಿದ್ದಾರೆ. ಯಾವ ದಿಕ್ಕಿನಿಂದ ನೋಡಿದರೂ ವಾತಾವರಣ ವು ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿ ಬಿಜೆಪಿಗರಲ್ಲಿ ಬಣ ಬಡಿದಾಟವು ತಾರಕಕ್ಕೇರಿದ್ದರೆ, ಮತ್ತೊಂದೆಡೆ ಅಧಿಕಾರ ಹಂಚಿಕೆ/ಹಸ್ತಾಂತರಕ್ಕೆ ಸಂಬಂಧಿಸಿದ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರಲ್ಲೂ ಒಳಗೊಳಗೇ ಬಣಗಳು ರೂಪುಗೊಂಡಿವೆ, ಈ ಬಣಗಳಿಗೆ ಸೇರಿದವರು ಮುಸುಕಿನೊಳಗಿನ ಗುದ್ದಿನ ರೀತಿಯಲ್ಲಿ ತಮ್ಮದೇ ನೆಲೆಯಲ್ಲಿ ಚಟುವಟಿಕೆಗಳನ್ನು ನಡೆಸು ತ್ತಿದ್ದಾರೆ.
ಇದನ್ನೂ ಓದಿ: Vishwavani Editorial: ಮೆಟ್ರೋ ‘ನಮ್ಮ’ದಾಗಲಿ
ಹೀಗೆ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಪಾಳಯಗಳಲ್ಲಿ ಒಂದೊಂದು ತೆರನಾಗಿ ‘ಹೊಯ್-ಕೈ’ ನಡೆಯುತ್ತಿದ್ದರೆ, ಇತ್ತೀಚೆಗೆ ಲಭ್ಯವಾಗಿರುವ ಮಾಹಿತಿಯಂತೆ ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವೆ ಮತ್ತೊಂದು ಸುತ್ತಿನ ಹಗ್ಗಜಗ್ಗಾಟ ಶುರುವಾಗಿದೆ. ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕ ಸೇರಿದಂತೆ ಸರಕಾರವು ಕಳಿಸಿದ್ದ ಮೂರು ವಿಧೇಯಕ ಗಳಿಗೆ ರಾಜ್ಯಪಾಲರು ಸಹಿ ಹಾಕದೆ ವಾಪಸ್ ಕಳಿಸಿರುವುದೇ ಈ ಬೆಳವಣಿಗೆಗೆ ಕಾರಣ.
ರಾಜ್ಯ ಸರಕಾರ ಮತ್ತು ರಾಜಭವನದ ನಡುವೆ ಹೀಗೊಂದು ಹಿತಾಸಕ್ತಿಯ ತಿಕ್ಕಾಟ ನಡೆಯುವುದು ಹೊಸದೇನಲ್ಲ; ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮುಂತಾದ ರಾಜ್ಯಗಳಲ್ಲಿ ನಿರಂತರವಾಗಿ ಇಂಥದೊಂದು ಸಂಘರ್ಷ ನಡೆಯುತ್ತಿದ್ದುದನ್ನು ಶ್ರೀಸಾಮಾ ನ್ಯರು ಕಂಡು-ಕೇಳಿದ್ದಾರೆ. ಇಂಥ ಸಂಘರ್ಷಗಳಾಗಲೀ ಅಥವಾ ಬಿಜೆಪಿ ಮತ್ತು ಕಾಂಗ್ರೆಸ್ ಪಾಳಯಗಳಲ್ಲಿ ಒಳಗೊಳಗೇ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆ ಗಳಾಗಲೀ ತಹಬಂದಿಗೆ ಬಂದರೆ ಸಾಕು ಎಂದು ಜನರು ನಿರೀಕ್ಷಿಸುವುದು ಸಹಜವಾಗಿಯೇ ಇದೆ.
ಏಕೆಂದರೆ, ಜನಕಲ್ಯಾಣ ಮತ್ತು ಅಭಿವೃದ್ಧಿಯ ಆಶಯದೊಂದಿಗೆ ತಾವು ಚುನಾಯಿಸಿ ಕಳಿಸಿದವರು, ಆ ಉದ್ದೇಶದ ಈಡೇರಿಕೆಗೆ ಟೊಂಕ ಕಟ್ಟಲಿ ಎಂಬುದು ಜನರ ನಿರೀಕ್ಷೆ ಯಾಗಿರುತ್ತದೆ. ಆದರೆ, ದಿನಬೆಳಗಾದರೆ ‘ನೀ ಕೊಡೆ, ನಾ ಬಿಡೆ’ ಶೈಲಿಯಲ್ಲಿ ಚೌಕಾಸಿ ನಡೆ ಯುತ್ತಲೇ ಇದ್ದರೆ, ಇಂಥ ಆಶಯಗಳು ಮತ್ತು ನಿರೀಕ್ಷೆಗಳು ನೆರವೇರುವುದು ಯಾವಾಗ? ಈ ಪ್ರಶ್ನೆಯನ್ನು ಸಂಬಂಧಪಟ್ಟವರು ಕೇಳಿಕೊಳ್ಳಲಿ.