Vishwavani Editorial: ಭಾರತ-ರಷ್ಯಾ ಮೈತ್ರಿಗೆ ಇನ್ನಷ್ಟು ಬಲ
ನಾಲ್ಕು ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇಂದು ಭಾರತಕ್ಕೆ ಆಗಮಿಸು ತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆ ನಾಳೆ (ಡಿಸೆಂಬರ್ ೫) ನಡೆಯಲಿದೆ. ಹಿಂದಿನ ಶೃಂಗಸಭೆಗಳಿಗಿಂತ ಈ ಬಾರಿಯ ಈ ಭೇಟಿಯು ಭಿನ್ನತೆ ಹಾಗೂ ವಿಶೇಷತೆಯಿಂದ ಕೂಡಿದೆ.
-
ನಾಲ್ಕು ವರ್ಷಗಳ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆ ನಾಳೆ (ಡಿಸೆಂಬರ್ ೫) ನಡೆಯಲಿದೆ. ಹಿಂದಿನ ಶೃಂಗಸಭೆಗಳಿಗಿಂತ ಈ ಬಾರಿಯ ಈ ಭೇಟಿಯು ಭಿನ್ನತೆ ಹಾಗೂ ವಿಶೇಷತೆಯಿಂದ ಕೂಡಿದೆ.
ಸುಧಾರಿತ ರಕ್ಷಣಾ ಸಾಮಗ್ರಿಗಳ ಖರೀದಿಯ ಕುರಿತ ಮಾತುಕತೆ, ರಕ್ಷಣೆ, ಭದ್ರತೆ, ಇಂಧನ ಕುರಿತ ಒಪ್ಪಂದಗಳು ನಿರೀಕ್ಷಿತವೇ. ಅದೆಲ್ಲಕ್ಕಿಂತ ಮುಖ್ಯವಾಗಿ ಭಾರತೀಯ ಸರಕುಗಳ ಮೇಲೆ ಅಮೆರಿಕವು ಶೇ.50ರಷ್ಟು ಸುಂಕವನ್ನು ಮತ್ತು ರಷ್ಯಾದ ಕಚ್ಚಾ ತೈಲದ ಖರೀದಿ ಮೇಲೆ ಶೇ.25ರಷ್ಟು ಸುಂಕ ಗಳನ್ನು ವಿಧಿಸುತ್ತಿರುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಭಾರತ-ರಷ್ಯಾ ವ್ಯಾಪಾರವನ್ನು ಪ್ರತ್ಯೇಕಿಸುವ ಕ್ರಮಗಳು ಈ ಶೃಂಗಸಭೆಯಲ್ಲಿ ಚರ್ಚೆಗೆ ಬರಬಹುದು. ಭಾರತ ಮತ್ತು ರಷ್ಯಾ ಸೇರಿದಂತೆ ಐದು ಸದಸ್ಯ ರಾಷ್ಟ್ರಗಳ ಯುರೇಷಿಯನ್ ಆರ್ಥಿಕ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಕಳೆದ ವಾರ ಮಾತುಕತೆಗಳು ಪ್ರಾರಂಭವಾಗಿವೆ. ಈ ಸಂಬಂಧ ವ್ಯಾಪಾರಕ್ಕೆ ಸುಂಕ ಮತ್ತು ಸುಂಕ ರಹಿತ ಅಡೆತಡೆಗಳ ಬಗ್ಗೆ ಭಾರತದ ಕಳವಳಗಳನ್ನು ಪರಿಹರಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: Vishwavani Editorial: ಪೊರೆವ ಪ್ರಕೃತಿಯೇ ಮುನಿದರೆ...
ರಷ್ಯಾದ ಇಂಧನ ಮತ್ತು ಮಿಲಿಟರಿ ಉಪಕರಣಗಳ ಖರೀದಿಯನ್ನು ಕಡಿಮೆ ಮಾಡಲು ಅಮೆರಿಕದ ಒತ್ತಡದ ನಡುವೆಯೇ, ದೀರ್ಘ ಕಾಲದ ಮಿತ್ರ ರಾಷ್ಟ್ರದೊಂದಿಗೆ ರಕ್ಷಣೆ ಮತ್ತು ಆರ್ಥಿಕ ಸಂಬಂಧ ಗಳನ್ನು ಮತ್ತಷ್ಟು ಬಲಪಡಿಸಲು ಭಾರತಕ್ಕಿದು ಸದವಕಾಶ. ಅಮೆರಿಕದ ಬೆದರಿಕೆಗಳ ಹೊರತಾಗಿಯೂ ರಷ್ಯಾ ಜತೆ ಭಾರತ ತನ್ನ ಮೈತ್ರಿಯನ್ನು ಉಳಿಸಿಕೊಂಡಿದೆ.
ಒಟ್ಟಾರೆ ರಾಷ್ಟ್ರೀಯ ಹಿತಾಸಕ್ತಿಯಡಿ ರಷ್ಯಾದೊಂದಿಗೆ ನಾವು ಉತ್ತಮ ಸಂಬಂಧಗಳನ್ನು ಕಾಪಾಡಿ ಕೊಳ್ಳುವುದು ಮುಖ್ಯವಾಗಿದೆ. ಭಾರತಕ್ಕೆ ಯಾವುದೇ ರಕ್ಷಣಾ ಸಾಮಗ್ರಿ ನೀಡಲು ಸಿದ್ಧ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿರುವುದು ಉಭಯ ದೇಶಗಳ ನಡುವಿನ ಗಾಢ ಮೈತ್ರಿ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ. ರಷ್ಯಾ ಅಧ್ಯಕ್ಷರ ಈ ಭೇಟಿಯನ್ನು ಅಮೆರಿಕವೂ ನಿಕಟವಾಗಿ ಗಮನಿಸ ಲಿದೆ. ಈ ಭೇಟಿಯ ಬಳಿಕ ಅಮೆರಿಕದ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದೂ ಕುತೂಹಲದ ವಿಚಾರ. ಭಾರತದ ಮಟ್ಟಿಗಿದು ಮೈತ್ರಿಯನ್ನು ಮತ್ತಷ್ಟು ಬಲಗೊಳಿಸಲು ದೊರೆತ ಸದವಕಾಶ.