ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishwavani Editorial: ಇನ್ನೂ ತೀರಿಲ್ಲವೇ ರಕ್ತದಾಹ?

ರಷ್ಯಾ ಅಧ್ಯಕ್ಷ ಪುಟಿನ್ ಅವರು ಈ ಕುಂಟುನೆಪವಿಟ್ಟುಕೊಂಡು ಉಕ್ರೇನ್‌ ನ ಮೇಲೆ ಶುರುಹಚ್ಚಿ ಕೊಂಡ ಯುದ್ಧಕ್ಕೆ ಮೊನ್ನೆಗೆ 3 ವರ್ಷಗಳು ತುಂಬಿವೆ. ಇಷ್ಟಾಗಿಯೂ ಯುದ್ಧವನ್ನು ನಿಲ್ಲಿಸಲು ಉಭಯ ದೇಶಗಳೂ ಮನಸ್ಸು ಮಾಡದಿರುವುದು ವಿಷಾದನೀಯ. ಈ ಸುದೀರ್ಘ ಸಂಘರ್ಷ ದಲ್ಲಿ ಉಕ್ರೇನ್ ದೇಶದ ಐದನೇ ಒಂದರಷ್ಟು ಭಾಗವನ್ನು ರಷ್ಯಾ ತನ್ನ ತೆಕ್ಕೆಗೆ ತೆಗೆದುಕೊಂಡಿರು ವುದು ಒಂದೆಡೆಯಾದರೆ, ಮತ್ತೊಂದೆಡೆ ಎರಡೂ ಬಣ ಗಳಲ್ಲಿ ಆಗಿರುವ ಗಣನೀಯ ಪ್ರಮಾ ಣದ ಸಾವು-ನೋವುಗಳು ಯುದ್ಧದ ಭೀಕರತೆಯನ್ನು ಸಾರಿ ಹೇಳುವಂತಿವೆ

ಇನ್ನೂ ತೀರಿಲ್ಲವೇ ರಕ್ತದಾಹ?

Profile Ashok Nayak Feb 26, 2025 4:43 AM

ಐರೋಪ್ಯ ದೇಶಗಳ ‘ನ್ಯಾಟೊ’ ಒಕ್ಕೂಟವನ್ನು ಸೇರಿಕೊಳ್ಳಲು ಉಕ್ರೇನ್ ದೇಶವು ತವಕಿಸಿ ದ್ದನ್ನೇ ಮುಂದುಮಾಡಿಕೊಂಡು ಅದರ ವಿರುದ್ಧ ರಷ್ಯಾ ತೊಡೆ ತಟ್ಟಿದ್ದು ಈಗಾಗಲೇ ಜಗಜ್ಜಾಹೀರು. ರಷ್ಯಾ ಅಧ್ಯಕ್ಷ ಪುಟಿನ್ ಅವರು ಈ ಕುಂಟುನೆಪವಿಟ್ಟುಕೊಂಡು ಉಕ್ರೇನ್‌ ನ ಮೇಲೆ ಶುರುಹಚ್ಚಿಕೊಂಡ ಯುದ್ಧಕ್ಕೆ ಮೊನ್ನೆಗೆ 3 ವರ್ಷಗಳು ತುಂಬಿವೆ. ಇಷ್ಟಾಗಿಯೂ ಯುದ್ಧವನ್ನು ನಿಲ್ಲಿಸಲು ಉಭಯ ದೇಶಗಳೂ ಮನಸ್ಸು ಮಾಡದಿರುವುದು ವಿಷಾದನೀಯ. ಈ ಸುದೀರ್ಘ ಸಂಘರ್ಷದಲ್ಲಿ ಉಕ್ರೇನ್ ದೇಶದ ಐದನೇ ಒಂದರಷ್ಟು ಭಾಗವನ್ನು ರಷ್ಯಾ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎರಡೂ ಬಣ ಗಳಲ್ಲಿ ಆಗಿರುವ ಗಣನೀಯ ಪ್ರಮಾಣದ ಸಾವು-ನೋವುಗಳು ಯುದ್ಧದ ಭೀಕರತೆಯನ್ನು ಸಾರಿ ಹೇಳುವಂತಿವೆ.

ಇದನ್ನೂ ಓದಿ: Vishwavani Editorial: ಹಗ್ಗಜಗ್ಗಾಟ ಇನ್ನಾದರೂ ನಿಲ್ಲಲಿ

ಇಷ್ಟಾಗಿಯೂ ಯುದ್ಧವನ್ನು ಇನ್ನೂ ಮುಂದುವರಿಸಿಕೊಂಡು ಹೋಗುವ ರಣೋತ್ಸಾಹ ವನ್ನು ಈ ದೇಶಗಳು ತೋರುತ್ತಿರುವುದೇಕೆ? ರಕ್ತದ ದಾಹ ಇನ್ನೂ ತೀರಿಲ್ಲವೇ? ಎಂಬುದು ಉತ್ತರ ಸಿಗದ ಪ್ರಶ್ನೆಗಳು. ಭೀಕರ ಯುದ್ಧವೊಂದರ ದುಷ್ಪರಿಣಾಮವು ಕೆಲವೇ ದಿನಗಳಲ್ಲಿ ತಗ್ಗಿ ಬಿಡುವುದಿಲ್ಲ, ವರ್ಷಗಳವರೆಗೆ ಅದು ಕಾಡುತ್ತಲೇ ಇರುತ್ತದೆ ಎಂಬುದಕ್ಕೆ ಜಪಾನ್ ದೇಶವೇ ಸಾಕ್ಷಿ.

ಇದಕ್ಕೆ ಕಾರಣವಾಗಿದ್ದು 2ನೇ ಮಹಾ ಯುದ್ಧ. 1945ರ ಆಗಸ್ಟ್ 6 ಮತ್ತು 9ರಂದು ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕವು ಅಣುಬಾಂಬ್ ದಾಳಿ ಯನ್ನು ಮಾಡಿದಾಗ ಒಟ್ಟಾರೆಯಾಗಿ ಸತ್ತವರ ಸಂಖ್ಯೆ ಹತ್ತತ್ತಿರ ಎರಡೂವರೆ ಲಕ್ಷದಷ್ಟು. ಮಾತ್ರವಲ್ಲದೆ, ತರುವಾಯದಲ್ಲಿ ಹುಟ್ಟಿದ ಗಣನೀಯ ಸಂಖ್ಯೆಯ ಮಕ್ಕಳಲ್ಲಿ ಅಂಗವೈಕಲ್ಯ ಕಾಣುವಂಥ ಪರಿಸ್ಥಿತಿಗೂ ಇಲ್ಲಿನವರು ಸಾಕ್ಷಿಯಾಗಬೇಕಾಯಿತು.

ಯುದ್ಧದ ಪರಿಣಾಮ ಅದೆಷ್ಟು ಘೋರ ವಾಗಿರುತ್ತದೆ ಎಂಬುದಕ್ಕೆ ಇದೊಂದು ಉದಾ ಹರಣೆಯಷ್ಟೇ. ಇಂಥದೊಂದು ಭೀಕರ ಇತಿಹಾಸದಿಂದ ಕೆಲವರು ಪಾಠವನ್ನೇ ಕಲಿಯು ವುದಿಲ್ಲ ಎಂಬುದಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವೆ ಈಗಲೂ ಮುಂದುವರಿದಿರುವ ಯುದ್ಧವೇ ಸಾಕ್ಷಿ.