ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಆನಂದದ ಸೆಲೆಯೊಂದು ಜಿನುಗಲಿ

ಹೊಸ ವರ್ಷಾಚರಣೆ ಯಾವತ್ತೂ ಅತಿರೇಕಕ್ಕೆ ಹೋಗಿ ನಮ್ಮ ಜೀವನದ ನಾಶದವರೆಗೆ ಹೋಗಬಾರದು. ಹೊಸವರ್ಷದಲ್ಲಿ ಹಳೆಯ ತಪ್ಪುಗಳನ್ನು ಮುಂದುವರಿಸಬಾರದು, ನಮ್ಮದೇ ಗುಣಮಟ್ಟವನ್ನು ವೃದ್ಧಿಸಿ ಕೊಳ್ಳಬೇಕು. ಹೊಸ ಸಂಬಂಧಗಳನ್ನು ಶುರು ಮಾಡುವುದು ಎಷ್ಟು ಮುಖ್ಯವೋ ಸಂಬಂಧಗಳನ್ನು ಅಷ್ಟೇ ಹದವಾಗಿ ಕಾಪಾಡಿಕೊಳ್ಳುವುದು ಅಗತ್ಯ.

Vishwavani Editorial: ಆನಂದದ ಸೆಲೆಯೊಂದು ಜಿನುಗಲಿ

-

Ashok Nayak
Ashok Nayak Jan 1, 2026 8:04 AM

ನೋಡನೋಡುತ್ತಿದ್ದಂತೆ 2025ನೇ ವರ್ಷ ಮುಗಿದೇ ಹೋಗಿದೆ. ಈ ವರ್ಷದ ಕಡೆಯ ದಿನಕ್ಕೆ ವಿದಾಯ ಹೇಳಿ 2026ರ ಮೊದಲ ದಿನದಲ್ಲಿ ನಾವಿಂದು ನಿಂತಿದ್ದೇವೆ. ಭಾರತೀಯರಿಗೆ ಇದು ಹೊಸ ವರ್ಷವಲ್ಲ, ಪಾಶ್ಚಾತ್ಯರಿಗೆ ಮಾತ್ರ ಹೊಸವರ್ಷ, ಇದನ್ನು ನಾವೇಕೆ ಆಚರಿಸಬೇಕು? ಆಚರಿಸಬೇಕೇ, ಬೇಡವೇ ಎಂಬ ಪ್ರಶ್ನೆಗಳಿಗೆ ನಾವೀಗ ಹೋಗುವುದು ಬೇಡ. ಇಡೀ ಜಗತ್ತು ಹೊಸ ವರ್ಷದ ಆಗಮನಕ್ಕೆ ಸಜ್ಜಾಗಿರುವಾಗಈಗ ವಿವೇಚಿಸಬೇಕಾದ ಹಲವು ಸಂಗತಿಗಳಿವೆ.

ಹೊಸ ವರ್ಷಾಚರಣೆ ಯಾವತ್ತೂ ಅತಿರೇಕಕ್ಕೆ ಹೋಗಿ ನಮ್ಮ ಜೀವನದ ನಾಶದವರೆಗೆ ಹೋಗಬಾರದು. ಹೊಸವರ್ಷದಲ್ಲಿ ಹಳೆಯ ತಪ್ಪುಗಳನ್ನು ಮುಂದುವರಿಸಬಾರದು, ನಮ್ಮದೇ ಗುಣಮಟ್ಟವನ್ನು ವೃದ್ಧಿಸಿಕೊಳ್ಳಬೇಕು. ಹೊಸ ಸಂಬಂಧಗಳನ್ನು ಶುರು ಮಾಡುವುದು ಎಷ್ಟು ಮುಖ್ಯವೋ ಸಂಬಂಧಗಳನ್ನು ಅಷ್ಟೇ ಹದವಾಗಿ ಕಾಪಾಡಿಕೊಳ್ಳುವುದು ಅಗತ್ಯ.

ಇದನ್ನೂ ಓದಿ: Vishwavani Editorial: ದಿನಪತ್ರಿಕೆ ಓದುವ ಅಭ್ಯಾಸ

ಬೆಲೆಯೇರಿಕೆ ನಮ್ಮ ಕೈಗೆ ಸಿಗದೆ ಓಡುತ್ತಿದೆ. ಅದಕ್ಕೆ ತಕ್ಕಂತೆ ಹಣ ಗಳಿಸಲು ಸಾಧ್ಯವಾಗದೇ ಪರ ದಾಡುವ ದೊಡ್ಡ ವರ್ಗ ಭಾರತದಲ್ಲಿದೆ. ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯವನ್ನು ನಿಭಾಯಿಸು ವುದು ಒಂದು ಸಂಸಾರಕ್ಕೆ ಜೀವಮಾನದ ಕಷ್ಟವಾಗಿದೆ. ಇದರ ಜೊತೆಗೆ ಸ್ವಂತಕ್ಕೊಂದು ಮನೆ ಕಟ್ಟಿಕೊಂಡರೆ ಆ ಸಾಲ ತೀರಿಸುವ ಚಿಂತೆಯಲ್ಲೇ ಬದುಕು ಮುಗಿದು ಹೋಗುತ್ತದೆ.

ಇವೆಲ್ಲ ಪ್ರತಿವರ್ಷ ಜನರನ್ನು ಬಾಧಿಸುವ ಸಮಸ್ಯೆಗಳು. ಇವನ್ನೆಲ್ಲ ಮೀರಿಯೂ ಜೀವನದಲ್ಲಿ ಉತ್ಸಾಹ, ಸಂತೋಷಗಳನ್ನು ಕಂಡುಕೊಳ್ಳಬೇಕು. ಇವನ್ನೆಲ್ಲ ಹೊರಗಿನ ಜಗತ್ತಿನಿಂದ ಪಡೆದು ಕೊಳ್ಳಲು ಸಾಧ್ಯವೇ ಇಲ್ಲ. ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳುವ ಮೂಲಕ ಆನಂದದ ಸೆಲೆಯನ್ನು ಪತ್ತೆಹಚ್ಚಬಹುದು. ಅಂತಹದ್ದೊಂದು ನಿರಂತರ ಆನಂದದ ಸೆಲೆ ಎಲ್ಲರಿಗೂ ಸಿಗಲಿ ಎನ್ನುವುದು ನಮ್ಮ ಹಾರೈಕೆ.