ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸಾಂಕೇತಿಕ ಅಭಿವ್ಯಕ್ತಿಯಾಗಲಿ

ಭಾರತವು ಇಂಥ ಉತ್ತಮಿಕೆಗಳ ನೆಲೆವೀಡು ಎಂಬುದು ವಿವಿಧ ರಾಷ್ಟ್ರಗಳಿಗೆ ಗೊತ್ತಿರು ವಂಥದ್ದೇ; ಜಗತ್ತನ್ನು ಕೋವಿಡ್ ಪಿಡುಗು ಅಮರಿಕೊಂಡಾಗ ಯಾವ ಭೇದ-ಭಾವವನ್ನೂ ಮಾಡದೆ ಹಲವು ದೇಶಗಳಿಗೆ ಲಸಿಕೆಯನ್ನು ಒದಗಿಸುವ ಔದಾರ್ಯ ತೋರಿದ ಭಾರತವು, ವಿಶ್ವದ ಯಾವುದೇ ಮೂಲೆಯಲ್ಲಿ ಭೂಕಂಪ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ, ಸಂಕಷ್ಟದಲ್ಲಿ ಸಿಲುಕಿರುವವರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಿದೆ.

Vishwavani Editorial: ಸಾಂಕೇತಿಕ ಅಭಿವ್ಯಕ್ತಿಯಾಗಲಿ

-

Ashok Nayak
Ashok Nayak Nov 26, 2025 10:20 AM

ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲ್ಭಾಗದಲ್ಲಿ ಕೇಸರಿ ಧ್ವಜಾರೋಹಣವಾಗಿದೆ. ಈ ಧರ್ಮಧ್ವಜದ ಆರೋಹಣ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಜರಿದ್ದು ಕಾರ್ಯಕ್ರಮವನ್ನು ಕಳೆಗಟ್ಟಿಸಿದ್ದಾರೆ. ಚಿತ್ತಾಕರ್ಷಕ ರಂಗೋಲಿಗಳು, ಹೂವು ಗಳಿಂದ ಅಲಂಕೃತಗೊಂಡಿದ್ದ ಅಯೋಧ್ಯೆ ನಗರಿಯಲ್ಲಿ ‘ಜೈ ಶ್ರೀರಾಮ್’ ಎಂಬ ಉದ್ಘೋಷ ಶ್ರದ್ಧಾವಂತರಿಂದ ಅನುರಣನಗೊಂಡಿದೆ.

ಶ್ರೀರಾಮಚಂದ್ರ ಕೇವಲ ರಾಜನಾಗಿರದೆ ‘ಆದರ್ಶವ್ಯಕ್ತಿ’, ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಸಿಕೊಂಡವನು. ಹೀಗಾಗಿ ಶ್ರೀರಾಮ ಮಂದಿರದ ಶಿಖರವೇರಿರುವ ಧರ್ಮಧ್ವಜವು ಕೇವಲ ಧಾರ್ಮಿಕ ನೆಲೆಯಲ್ಲಿ ಮಾತ್ರವಲ್ಲದೆ, ಭಾರತೀಯರ ಆದರ್ಶ, ಅಸ್ಮಿತೆ, ಮರ್ಯಾದೆ, ಸ್ವಾಭಿಮಾನ, ‘ವಸುದೈವ ಕುಟುಂಬಕಂ’ ಪರಿಕಲ್ಪನೆಯ ಆಶಯದಂತೆ ಮಿಕ್ಕ ದೇಶಗಳ ಜನರನ್ನೂ ತಮ್ಮವರೆಂದೇ ಪರಿಭಾವಿಸುವ ಭಾರತೀಯರ ಹೃದಯ ವೈಶಾಲ್ಯ, ಸನಾತನ ಧರ್ಮದ ಶ್ರೇಷ್ಠತೆ ಮುಂತಾದವನ್ನು ವಿಶ್ವಕ್ಕೇ ಸಾರಿ ಹೇಳುವ ಸಾಂಕೇತಿಕ ಅಭಿವ್ಯಕ್ತಿ ಯಾಗಬೇಕು.

ಇದನ್ನೂ ಓದಿ: Vishwavani Editorial: ಜೀವಾಮೃತವೇ ವಿಷವಾದರೆ...

ಭಾರತವು ಇಂಥ ಉತ್ತಮಿಕೆಗಳ ನೆಲೆವೀಡು ಎಂಬುದು ವಿವಿಧ ರಾಷ್ಟ್ರಗಳಿಗೆ ಗೊತ್ತಿರು ವಂಥದ್ದೇ; ಜಗತ್ತನ್ನು ಕೋವಿಡ್ ಪಿಡುಗು ಅಮರಿಕೊಂಡಾಗ ಯಾವ ಭೇದ-ಭಾವವನ್ನೂ ಮಾಡದೆ ಹಲವು ದೇಶಗಳಿಗೆ ಲಸಿಕೆಯನ್ನು ಒದಗಿಸುವ ಔದಾರ್ಯ ತೋರಿದ ಭಾರತವು, ವಿಶ್ವದ ಯಾವುದೇ ಮೂಲೆಯಲ್ಲಿ ಭೂಕಂಪ, ಚಂಡಮಾರುತದಂಥ ಪ್ರಾಕೃತಿಕ ವಿಕೋಪ ಗಳು ಸಂಭವಿಸಿದಾಗ, ಸಂಕಷ್ಟದಲ್ಲಿ ಸಿಲುಕಿರುವವರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿ ದ್ದಿದೆ.

ಇಷ್ಟಾಗಿಯೂ, ಭಾರತವನ್ನು ಜಾಗತಿಕ ಸಮುದಾಯದ ದೃಷ್ಟಿಯಲ್ಲಿ ‘ಖಳನಾಯಕ’ನಂತೆ ಬಿಂಬಿಸಲು ಮಗ್ಗುಲು ಮುಳ್ಳುದೇಶಗಳು ಕಸರತ್ತು ಮಾಡುತ್ತಿರುವುದೂ ಇದೆ. ಹೀಗಾಗಿ, ಭಾರತ ಮತ್ತು ಭಾರತೀಯ ಎಂಬ ಅಸ್ತಿತ್ವಗಳ ಅರ್ಥವೇನು ಎಂಬುದನ್ನು ಜಗತ್ತಿನೆ ದುರು ಮತ್ತೊಮ್ಮೆ ಹರವಿಡುವ ಕಾಲ ಬಂದಿದೆ. ಶ್ರೀರಾಮ ಮಂದಿರದ ಶಿಖರದಲ್ಲಿ ಹಾರುತ್ತಿರುವ ಧರ್ಮಧ್ವಜವು ಈ ನಿಟ್ಟಿನಲ್ಲಿ ನಿತ್ಯಸ್ಪೂರ್ತಿಯಾಗಿ ಒದಗಲಿ...