ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಎಚ್ಚರಿಕೆ ಗಂಟೆಯಾಗಲಿ

ಭೂಕಂಪ ಸಂತ್ರಸ್ತ ಪ್ರದೇಶ ಒಂದರ್ಥದಲ್ಲಿ ಸ್ಮಶಾನವಾಗಿ ಮಾರ್ಪ ಟ್ಟಿದೆ. ಭೂಕಂಪದಂಥ ಪ್ರಕೃತಿ ವಿಕೋಪಗಳನ್ನು ತಡೆಯುವುದು ಹುಲುಮಾನವರಿಂದ ಆಗದ ಕೆಲಸ ಎಂಬುದೇನೋ ಸರಿ; ಆದರೆ, ಇಂಥ ವಿಪತ್ತುಗಳು ಜರುಗುವಲ್ಲಿ ತನ್ನ ಪಾತ್ರ ಎಷ್ಟಿದೆ ಎಂಬು ದರ ಅವಲೋಕನಕ್ಕೆ ಮನುಷ್ಯ ಒಡ್ಡಿ ಕೊಳ್ಳಬೇಕಾದ್ದು ಈ ಕ್ಷಣದ ಅನಿವಾರ್ಯತೆ.

ಎಚ್ಚರಿಕೆ ಗಂಟೆಯಾಗಲಿ

Profile Ashok Nayak Apr 2, 2025 4:58 AM

ಕುಂಬಾರನಿಗೆ ಒಂದು ವರ್ಷ, ದೊಣ್ಣೆಗೆ ಒಂದು ನಿಮಿಷ’ ಎಂಬುದೊಂದು ಮಾತಿದೆ. ಬೆವರು ಸುರಿಸಿ, ಪೈಸೆಗೆ ಪೈಸೆ ಸೇರಿಸಿ ಕಟ್ಟಿದ ಮನೆ, ವಾಣಿಜ್ಯ ಸಮುಚ್ಚಯದಂಥ ಕಟ್ಟಡಗಳು ಕೆಲವೇ ಕ್ಷಣ ದಲ್ಲಿ ಮಣ್ಣುಪಾಲಾದಾಗಿನ ಸಂಕಟವಿದೆಯಲ್ಲಾ, ಅದನ್ನು ಪದಗಳಲ್ಲಿ ವಿವರಿಸಲಾಗದು. ಇತ್ತೀಚೆಗೆ ಮ್ಯಾನ್ಮಾರ್, ಬ್ಯಾಂಕಾಕ್ ಮುಂತಾದ ಕಡೆಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದನ್ನು ವಿಶ್ವವಿಡೀ ಕಣ್ತುಂಬಿಕೊಂಡಿದೆ. ಬ್ಯಾಂಕಾಕ್‌ನಲ್ಲಿ ಗಗನಚುಂಬಿ ಕಟ್ಟಡಗಳು ಬೆಂಕಿ ಪೊಟ್ಟಣ ಗಳಂತೆ ಕಳಚಿ ಬಿದ್ದು ಮಣ್ಣು ಪಾಲಾಗಿದ್ದು ನಿಜಕ್ಕೂ ತಲ್ಲಣ ಹುಟ್ಟಿಸುವಂತಿತ್ತು. ಮತ್ತೊಂದೆಡೆ ಮ್ಯಾನ್ಮಾರ್ ಭೂಕಂಪದಿಂದಾಗಿ ಸಾವಿಗೀಡಾದವರ ಸಂಖ್ಯೆ 2000ವನ್ನೂ ದಾಟಿದೆ, ಹತ್ತತ್ತಿರ ೪೦೦೦ ಮಂದಿ ಗಾಯಗೊಂಡಿದ್ದಾರೆ ಹಾಗೂ 270 ಮಂದಿ ಕಾಣೆಯಾಗಿದ್ದಾರೆ, ನಿರಾಶ್ರಿತರಾದವರ ಸಂಖ್ಯೆ 35 ಲಕ್ಷವನ್ನು ಮುಟ್ಟಿದೆ ಎಂಬುದು ಲಭ್ಯ ಮಾಹಿತಿ.

ಒಟ್ಟಾರೆ ಹೇಳುವುದಾದರೆ, ಭೂಕಂಪ ಸಂತ್ರಸ್ತ ಪ್ರದೇಶ ಒಂದರ್ಥದಲ್ಲಿ ಸ್ಮಶಾನವಾಗಿ ಮಾರ್ಪ ಟ್ಟಿದೆ. ಭೂಕಂಪದಂಥ ಪ್ರಕೃತಿ ವಿಕೋಪಗಳನ್ನು ತಡೆಯುವುದು ಹುಲುಮಾನವರಿಂದ ಆಗದ ಕೆಲಸ ಎಂಬುದೇನೋ ಸರಿ; ಆದರೆ, ಇಂಥ ವಿಪತ್ತುಗಳು ಜರುಗುವಲ್ಲಿ ತನ್ನ ಪಾತ್ರ ಎಷ್ಟಿದೆ ಎಂಬು ದರ ಅವಲೋಕನಕ್ಕೆ ಮನುಷ್ಯ ಒಡ್ಡಿಕೊಳ್ಳಬೇಕಾದ್ದು ಈ ಕ್ಷಣದ ಅನಿವಾರ್ಯತೆ.

ಇದನ್ನೂ ಓದಿ: Vishwavani Editorial: ರಾಜ್ಯದ ನಿಲುವು ಬದಲಾಗದಿರಲಿ

ಬ್ಯಾಂಕಾಕ್ ಮತ್ತು ಮ್ಯಾನ್ಮಾರ್‌ನ ದುರಂತಗಳು ಬೆಂಗಳೂರು ಸೇರಿದಂತೆ ದೇಶದ ಹಲವು ಮಹಾ ನಗರ ಮತ್ತು ಪಟ್ಟಣಗಳಿಗೆ ಪಾಠವಾಗಬೇಕಿದೆ. ಊರೂರುಗಳ ಜೀವನಾಡಿಯೇ ಆಗಿದ್ದ ಕೆರೆಗಳನ್ನು ಅತಿಕ್ರಮಿಸಿ/ಮುಚ್ಚಿ ಅಲ್ಲಿ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸುವ, ಮಣ್ಣಿನ ಸವಕಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ವೈವಿಧ್ಯಮಯ ಮರಗಳ ಬುಡಕ್ಕೇ ಕೊಡಲಿಪೆಟ್ಟು ನೀಡುವ ಸ್ವಾರ್ಥಬುದ್ಧಿಯನ್ನು ಮನುಷ್ಯ ಇನ್ನಾದರೂ ಬಿಡಬೇಕಾಗಿದೆ.

‘ನಡೆವುದೊಂದೇ ಭೂಮಿ, ಕುಡಿಯಲೊಂದೇ ನೀರು’ ಎಂದಿದ್ದಾನೆ ಸರ್ವಜ್ಞ ಕವಿ. ಆದರೆ ಮನುಷ್ಯನ ಸ್ವಾರ್ಥಬುದ್ಧಿ, ದುರಾಸೆಗಳು ಇವಕ್ಕೂ ಸಂಚಕಾರ ತಂದರೆ, ಅದರಿಂದಾಗಿ ನಿಂತ ನೆಲವೇ ಕುಸಿದು ಬದುಕು ಮೂರಾಬಟ್ಟೆಯಾದರೆ, ಯಾರ ಬಳಿ ಅಳಲನ್ನು ತೋಡಿಕೊಳ್ಳಬೇಕು? ಈಗಲೂ ಕಾಲ ಮಿಂಚಿಲ್ಲ. ಪ್ರಕೃತಿಗೆ ಎದುರಾಗಿ ತೊಡೆ ತಟ್ಟಿದರೆ, ಒಂದು ದಿನ ಪ್ರಕೃತಿಯೇ ಮತ್ತೊಂದು ರೂಪ ದಲ್ಲಿ ನಮ್ಮ ನ್ನು ಆಪೋಶನಕ್ಕೆ ತೆಗೆದುಕೊಂಡುಬಿಡುತ್ತದೆ ಎಂಬುದನ್ನು ಅರಿಯೋಣ.