ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ರಾಜ್ಯದ ನಿಲುವು ಬದಲಾಗದಿರಲಿ

ಕೆಲ ತಿಂಗಳ ಹಿಂದೆ ವಯನಾಡಲ್ಲಿ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದರು. ಈ ವಿಷಯ ದಲ್ಲಿ ಎರಡು ರಾಜ್ಯಗಳ ಬಾಂಧವ್ಯಕ್ಕಿಂತಲೂ ಸಮಸ್ತ ಜೀವಸಂಕುಲದ ಪ್ರಶ್ನೆ ಅಡಗಿರುವುದು ಇಬ್ಬರು ಹಿರಿಯ ಸಚಿವರಿಗೆ ತಿಳಿಯದ ವಿಷಯವೇನಲ್ಲ.

ರಾಜ್ಯದ ನಿಲುವು ಬದಲಾಗದಿರಲಿ

Profile Ashok Nayak Apr 1, 2025 5:09 AM

ಬಂಡೀಪುರ ಅರಣ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ವಾಹನ ಸಂಚಾ ರಕ್ಕೆ ಅವಕಾಶ ನೀಡಬೇಕೆಂಬ ಕೇರಳ ಲಾಬಿಗೆ ರಾಜ್ಯ ಸರಕಾರ ಮಣಿಯುವ ಲಕ್ಷಣಗಳು ಕಂಡು ಬರುತ್ತಿವೆ. ವಯನಾಡು ಲೋಕಸಭೆ ಉಪಚುನಾವಣೆ ವೇಳೆ, ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ‘ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸುವ ವಿಚಾರ ನನಗೆ ಬಿಡಿ’ ಎಂದು ಹೇಳಿದ್ದರು. ಇಲ್ಲಿನ ಸಂಸದೆಯಾಗಿ ಆಯ್ಕೆಯಾದ ತಮ್ಮ ನಾಯಕಿಯ ಮಾತನ್ನು ನೆರವೇರಿಸಲು ಈಗ ರಾಜ್ಯ ಸರಕಾರವೇ ಖುದ್ದು ಆಸಕ್ತಿ ವಹಿಸಿರುವಂತೆ ಕಾಣುತ್ತಿದೆ. ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಕೆ.ಸಿ.ವೇಣುಗೋಪಾಲ್‌ರನ್ನು ಭೇಟಿ ಮಾಡಿದ ಬಳಿಕ ಸುದ್ದಿ ಗಾರರ ಜತೆ ಮಾತನಾ ಡಿದ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಎರಡೂ ರಾಜ್ಯಗಳ ಬಾಂಧವ್ಯವನ್ನು ಗಮನದಲ್ಲಿಟ್ಟು ಕೊಂಡು, ಎಲ್ಲರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: Vishwavani Editorial: ರಾಜಕಾರಣವೋ, ದೃಶ್ಯಭೀಷಣವೋ ?

ಕೆಲ ತಿಂಗಳ ಹಿಂದೆ ವಯನಾಡಲ್ಲಿ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದರು. ಈ ವಿಷಯ ದಲ್ಲಿ ಎರಡು ರಾಜ್ಯಗಳ ಬಾಂಧವ್ಯಕ್ಕಿಂತಲೂ ಸಮಸ್ತ ಜೀವಸಂಕುಲದ ಪ್ರಶ್ನೆ ಅಡಗಿರುವುದು ಇಬ್ಬರು ಹಿರಿಯ ಸಚಿವರಿಗೆ ತಿಳಿಯದ ವಿಷಯವೇನಲ್ಲ.

ರಾತ್ರಿ ವಾಹನ ಸಂಚಾರ ನಿಷೇಧಿಸಿದ ಬಳಿಕ ಈ ಹೆದ್ದಾರಿಯಲ್ಲಿ ವಾಹನಗಳಡಿ ಸಿಲುಕಿ ಸಾಯುವ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಗೊತ್ತಿರುವ ವಿಚಾರ. ಮೇಲಾಗಿ ಸುಪ್ರೀಂ ಕೋರ್ಟ್ ಈ ಕುರಿತ ರಾಜ್ಯದ ತೀರ್ಮಾನವನ್ನು ಎತ್ತಿಹಿಡಿದಿದೆ. ಕೇರಳ ಸರಕಾರ ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಬಾಕಿ ಇದೆ. ಎರಡೂ ರಾಜ್ಯಗಳ ಬಾಂಧವ್ಯದ ಮೇಲೆ ತೀರ್ಮಾನ ಕೈಗೊಳ್ಳಲು ಈಗ ರಾಜ್ಯ ಸರಕಾರಕ್ಕೂ ಅವಕಾಶವಿಲ್ಲ.

ಆದರೆ ಪ್ರಿಯಾಂಕಾ ಮಾತನ್ನು ಶಾಸನವಾಗಿಸಬೇಕೆಂಬ ಹಠಕ್ಕೆ ಬಿದ್ದರೆ, ಸರ್ವೋಚ್ಚ ನ್ಯಾಯಾಲಯ ದಲ್ಲಿ ಕರ್ನಾಟಕದ ವಾದವನ್ನು ದುರ್ಬಲಗೊಳಿಸಲು ಅವಕಾಶವಿದೆ. ಸದ್ಯಕ್ಕೆ ರಾಜ್ಯದ ಪರಿಸರಾ ಸಕ್ತರೆಲ್ಲರೂ ಸೇರಿ ರಾಜಕೀಯ ಹಿತಾಸಕ್ತಿಗಾಗಿ ನಮ್ಮ ರಾಜ್ಯದ/ದೇಶದ ಪ್ರಾಣಿಸಂಕುಲ ಬಲಿಯಾಗ ದಂತೆ ನೋಡಿಕೊಳ್ಳಬೇಕಾಗಿದೆ.