ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vishwavani Editorial: ಭಾಷಾ ವಿದ್ವೇಷಕ್ಕೆ ಅವಕಾಶ ಬೇಡ

ಇಲ್ಲಿನ ನಡೆದ ಘಟನೆ ವೈಯಕ್ತಿಕ ಸ್ವರೂಪದ್ದಾಗಿದ್ದು, ಕಂಡಕ್ಟರ್ ಬಳಿ ಅನುಚಿತ ವರ್ತನೆ ತೋರಿದ ಮಹಿಳಾ ಪ್ರಯಾಣಿಕರೊಬ್ಬರು ತನ್ನ ರಕ್ಷಣೆಗೆ ಭಾಷಾ ದ್ವೇಷವನ್ನು ಗುರಾಣಿ ಯಾಗಿ ಬಳಸಿರುವುದು ಸ್ಪಷ್ಟ. ದೂರು ನೀಡಿದ ನಿರ್ವಾಹಕನ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲಿ ಸಿರುವುದು ಮಹಿಳೆಯ ದುರುದ್ದೇಶಕ್ಕೆ ಸಾಕ್ಷಿಯಾಗಿದೆ

ಭಾಷಾ ವಿದ್ವೇಷಕ್ಕೆ ಅವಕಾಶ ಬೇಡ

Profile Ashok Nayak Feb 25, 2025 6:17 AM

ಮರಾಠಿ ಭಾಷೆ ಮಾತನಾಡಲು ಬರುವುದಿಲ್ಲ ಎಂದ ವಾಯವ್ಯ ಸಾರಿಗೆ ಸಂಸ್ಥೆಯ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಬೆಳಗಾವಿಯ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಮರಾಠಿ ಭಾಷಿಕರು ಹಲ್ಲೆ ಮಾಡಿದ ಘಟನೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ದ್ವೇಷ ಮಯ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಘಟನೆ ಬಳಿಕ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಉಭಯ ರಾಜ್ಯಗಳ ಬಸ್‌ಗಳ ಮೇಲೆ ದಾಳಿ ಮಾಡಲಾಗುತ್ತಿದ್ದು, ಅಮಾಯಕ ಚಾಲಕ, ನಿರ್ವಾಹಕರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಲಾಗುತ್ತಿದೆ. ಬಾಳೇಕುಂದ್ರಿ ಘಟನೆ ಯನ್ನು ಮರಾಠಿ- ಕನ್ನಡ ಎಂಬ ನೆಲೆಯಲ್ಲಿ ನೋಡದೆ, ಕೆಲವು ಕಿಡಿಗೇಡಿಗಳ ದುಷ್ಕೃತ್ಯ ವೆಂದು ಪರಿಗಣಿಸಬೇಕು. ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಉಭಯ ರಾಜ್ಯಗಳು ಸಮ್ಮತಿ ನೀಡಬೇಕು.

ಇಲ್ಲಿನ ನಡೆದ ಘಟನೆ ವೈಯಕ್ತಿಕ ಸ್ವರೂಪದ್ದಾಗಿದ್ದು, ಕಂಡಕ್ಟರ್ ಬಳಿ ಅನುಚಿತ ವರ್ತನೆ ತೋರಿದ ಮಹಿಳಾ ಪ್ರಯಾಣಿಕರೊಬ್ಬರು ತನ್ನ ರಕ್ಷಣೆಗೆ ಭಾಷಾ ದ್ವೇಷವನ್ನು ಗುರಾಣಿ ಯಾಗಿ ಬಳಸಿರುವುದು ಸ್ಪಷ್ಟ. ದೂರು ನೀಡಿದ ನಿರ್ವಾಹಕನ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲಿಸಿರುವುದು ಮಹಿಳೆಯ ದುರುದ್ದೇಶಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Vishwavani Editorial: ಇದು ಜನಾಕ್ರೋಶದ ಪರಮಾವಧಿ

ಈ ಘಟನೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಿಳಿದ ಕನ್ನಡ ಪರ ಹೋರಾಟ ಗಾರರು, ತಪ್ಪಿತಸ್ಥ ಪ್ರಯಾಣಿಕರು ಮತ್ತು ಹಲ್ಲೆ ನಡೆಸಿದ ಗ್ರಾಮಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಬೇಕಿತ್ತು. ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಮೇಲೆ ಕಲ್ಲುತೂರುವ, ಮಸಿ ಬಳಿ ಯುವ ಕೃತ್ಯಕ್ಕೆ ಇಳಿಯಬಾರದಿತ್ತು.

ಇದೇ ವೇಳೆ ಗಡಿಯಲ್ಲಿ ವಿನಾಕಾರಣ ಪುಂಡಾಟ ನಡೆಸದಂತೆ ಎಂಇಎಸ್ ಮತ್ತು ಶಿವಸೇನೆ ಕಾರ‍್ಯಕರ್ತರಿಗೆ ಆ ಪಕ್ಷಗಳ ನಾಯಕರು ಎಚ್ಚರಿಕೆ ನೀಡಬೇಕಿತ್ತು. ಇಂತಹ ಸಂದರ್ಭಗಳಲ್ಲಿ ನಾಯಕರೆನಿಸಿ ಕೊಂಡವರು ಸಾಕಷ್ಟು ವಿವೇಕ ಮತ್ತು ವಿವೇಚನೆಯಿಂದ ತಕ್ಷಣವೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲದೇ ಹೋದರೆ ಎರಡೂ ರಾಜ್ಯಗಳ ನಡುವಣ ಅಪನಂಬಿಕೆ ಮತ್ತು ಒಡಕು ಮತ್ತಷ್ಟೂ ವಿಸ್ತರಿಸುವ ಸಾಧ್ಯತೆ ಇದೆ.

ಹಲ್ಲೆ ಪ್ರಕರಣವು ರಾಜಕೀಯ ಮತ್ತು ಭಾಷಾ ವಿದ್ವೇಷಕ್ಕೆ ಕಾರಣವಾಗದಂತೆ ನೋಡಿ ಕೊಳ್ಳುವುದು ಭಾರತೀಯ ಸಂವಿಧಾನದಡಿ ಕಾರ‍್ಯ ನಿರ್ವಹಿಸುವ ಉಭಯ ರಾಜ್ಯಗಳ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ.