Vishwavani Editorial: ಇದು ಜನಾಕ್ರೋಶದ ಪರಮಾವಧಿ
ಸೇವೆಯೇ ಪ್ರಧಾನವಾಗಿ ರುವ ಬಸ್ಸು, ರೈಲು ಮತ್ತು ಮೆಟ್ರೋ ಸೇವೆಗಳನ್ನು ‘ವಾಣಿಜ್ಯಿಕ ಕನ್ನಡಕ’ದ ಮೂಲಕ ನೋಡಿದರೆ ಒದಗುವ ಪರಿಸ್ಥಿತಿ ಇದೇ ಆಗುತ್ತದೆ ಎಂಬುದಕ್ಕೀಗ ಸಾಕ್ಷಿ ಸಿಕ್ಕಂತಾಗಿದೆ. ಹಾಗೆಂದ ಮಾತ್ರಕ್ಕೆ ಸಂಸ್ಥೆಗೆ ನಷ್ಟ ಮಾಡಿಕೊಂಡು ಜನಸೇವೆ ಮಾಡಬೇಕು ಎಂದೇನಲ್ಲ; ಆದರೆ ಪ್ರಯಾಣದರದ ಏರಿಕೆಗೆ ನಿರ್ಧರಿಸುವುದಕ್ಕೂ ಮೊದಲು, ಚಾಲ್ತಿಯಲ್ಲಿರುವ ಸಾಮಾಜಿಕ ಸನ್ನಿವೇಶ, ಜನರು ಈಗಾಗಲೇ ವಿವಿಧ ತೆರನಾದ ಬೆಲೆಯೇರಿಕೆಗಳಿಗೆ ಒಡ್ಡಿಕೊಂಡಿರುವಿಕೆ, ಅವರ ಆರ್ಥಿಕ ಸ್ಥಿತಿ ಗತಿಯಲ್ಲಿನ ಕುಸಿತ ಇತ್ಯಾದಿ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇ ಕಾಗುತ್ತದೆ


ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲೆಂದು ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋ’ ಸಾರಿಗೆ ವ್ಯವಸ್ಥೆಯನ್ನು ನೆಚ್ಚಿಕೊಂಡಿದ್ದವರು ಗಣನೀಯ ಸಂಖ್ಯೆಯಲ್ಲಿದ್ದರು ಎಂಬುದನ್ನು ಬಿಡಿಸಿ ಹೇಳ ಬೇಕಿಲ್ಲ. ಆದರೀಗ, ಮೆಟ್ರೋ ಸಂಸ್ಥೆಯವರು ಅವೈಜ್ಞಾನಿಕ ರೀತಿಯಲ್ಲಿ, ಅತಿರೇಕ ಎಂಬುವಷ್ಟರ ಮಟ್ಟಿಗೆ ಪ್ರಯಾಣದರ ಏರಿಕೆಗೆ ಮುಂದಾಗಿದ್ದಕ್ಕೆ ಸಾರ್ವಜನಿಕ ವಲಯ ದಿಂದ ಸಹಜವಾಗೇ ಆಕ್ರೋಶ ಮತ್ತು ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಸಾಕ್ಷಿರೂಪ ಎಂಬಂತೆ ಬೆಂಗಳೂರಿನಲ್ಲಿ ಬರೋ ಬ್ಬರಿ 1 ಲಕ್ಷ ಪ್ರಯಾಣಿಕರು ಮೆಟ್ರೋ ಪ್ರಯಾಣದಿಂದ ವಿಮುಖರಾಗಿದ್ದಾರೆ ಎಂದಿವೆ ಲಭ್ಯ ಅಂಕಿ- ಅಂಶಗಳು. ಮೆಟ್ರೋ ಪ್ರಯಾಣಕ್ಕೆ ಜನರು ತಿಲಾಂಜಲಿ ಇತ್ತರು ಎಂದರೆ, ಸಹಜವಾಗಿ ರಸ್ತೆಮಾರ್ಗ ದಲ್ಲಿ ಸಂಚಾರಿ ದಟ್ಟಣೆ ಹೆಚ್ಚಾಗಲಿದೆ ಎಂದೇ ಅರ್ಥ.
ಇದು ಮತ್ತೊಂದು ಸುತ್ತಿನ ಸಮಸ್ಯೆಗಳಿಗೆ ಆಹ್ವಾನ ನೀಡುವುದಂತೂ ಖರೆ. ಸೇವೆಯೇ ಪ್ರಧಾನವಾಗಿ ರುವ ಬಸ್ಸು, ರೈಲು ಮತ್ತು ಮೆಟ್ರೋ ಸೇವೆಗಳನ್ನು ‘ವಾಣಿಜ್ಯಿಕ ಕನ್ನಡಕ’ದ ಮೂಲಕ ನೋಡಿದರೆ ಒದಗುವ ಪರಿಸ್ಥಿತಿ ಇದೇ ಆಗುತ್ತದೆ ಎಂಬುದಕ್ಕೀಗ ಸಾಕ್ಷಿ ಸಿಕ್ಕಂತಾಗಿದೆ. ಹಾಗೆಂದ ಮಾತ್ರಕ್ಕೆ ಸಂಸ್ಥೆಗೆ ನಷ್ಟ ಮಾಡಿಕೊಂಡು ಜನಸೇವೆ ಮಾಡಬೇಕು ಎಂದೇನಲ್ಲ; ಆದರೆ ಪ್ರಯಾಣದರದ ಏರಿಕೆಗೆ ನಿರ್ಧರಿಸುವುದಕ್ಕೂ ಮೊದಲು, ಚಾಲ್ತಿಯಲ್ಲಿರುವ ಸಾಮಾಜಿಕ ಸನ್ನಿವೇಶ, ಜನರು ಈಗಾಗಲೇ ವಿವಿಧ ತೆರನಾದ ಬೆಲೆಯೇರಿಕೆಗಳಿಗೆ ಒಡ್ಡಿಕೊಂಡಿರುವಿಕೆ, ಅವರ ಆರ್ಥಿಕ ಸ್ಥಿತಿ ಗತಿಯಲ್ಲಿನ ಕುಸಿತ ಇತ್ಯಾದಿ ಅಂಶಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಬೇ ಕಾಗುತ್ತದೆ.
ಇದನ್ನೂ ಓದಿ: Vishwavani Editorial: ಶಿಲಾಯುಗದತ್ತ ಅಮೆರಿಕದ ಆಳುಗರು?
ಇಂಥ ಸೂಕ್ಷ್ಮ ಅಂಶವು ಮೆಟ್ರೋ ಸಂಸ್ಥೆಯ ಕೆಲವೊಂದು ಪ್ರಭೃತಿಗಳಿಗೆ ಅರ್ಥವಾಗದಿರುವುದು ವಿಷಾದನೀಯ. ಅದು ಒಂದು ಸಂಸ್ಥೆಯೇ ಇರಲಿ ಅಥವಾ ಸರಕಾರವೇ ಇರಲಿ, ಜನಾಕ್ರೋಶಕ್ಕೆ ತುತ್ತಾಗುತ್ತಿದ್ದಂತೆ ಒಂದೋ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ, ಇಲ್ಲವೇ ಅದರ ಅಸ್ತಿತ್ವಕ್ಕೇ ಸಂಚಕಾರ ಒದಗುವಂಥ ಪರಿಸ್ಥಿತಿ ಎದುರಾಗುತ್ತದೆ ಎಂಬುದು ಹಸಿಮಣ್ಣಿನ ಮೇಲೆ ಗಾಜಿನಿಂದ ಕೊರೆದ ಅಕ್ಷರದಷ್ಟೇ ಸತ್ಯ.
ಈ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳದಿದ್ದಲ್ಲಿ ಒಂದು ಸಂಸ್ಥೆಯಾಗಲೀ ಸರಕಾರವಾಗಲೀ ಪ್ರಗತಿ ಪಥದತ್ತ ಹೆಜ್ಜೆ ಹಾಕಲಾಗದು. ಇದಕ್ಕೆ ಸಾಕಷ್ಟು ನಿದರ್ಶನಗಳಿರುವುದನ್ನು ಇತಿಹಾಸವೇ ಹೇಳು ತ್ತದೆ. ಸಂಬಂಧಪಟ್ಟವರು ಇನ್ನಾದರೂ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಲಿ.