ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸರಣಿ ಸಂಕಷ್ಟದಲ್ಲಿ ಪಾಕಿಸ್ತಾನ

‘ತೆಹ್ರೀಕ್-ಇ-ತಾಲಿಬಾನ್’ ನಡೆಸಿದ ದಾಳಿಯಲ್ಲಿ 20 ಮಂದಿ ಪಾಕ್ ಸೈನಿಕರು ಅಸುನೀಗಿದ್ದಾರೆ ಹಾಗೂ ಪಾಕಿಗಳ ಶಸಾಸಗಳನ್ನೂ ಅವರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಉಗ್ರವಾದದ ಅಬ್ಬರ ಹಾಗೂ ‘ಛಾಯಾಸಮರದ’ ಮೂಲಕ ಶಾಂತಿಪ್ರಿಯ ರಾಷ್ಟ್ರಗಳಿಗೆ ಕಂಟಕ ಪ್ರಾಯವಾಗಿದ್ದ ಪಾಕಿಸ್ತಾನಕ್ಕೆ, ಈಗ ಎಲ್ಲವೂ ತನ್ನ ಲೆಕ್ಕಾಚಾರದಂತೆ ನಡೆಯುತ್ತಿಲ್ಲ ಎಂಬ ಕಹಿ ಸತ್ಯದ ಅರಿವಾಗಿರ ಬೇಕು!

ಸರಣಿ ಸಂಕಷ್ಟದಲ್ಲಿ ಪಾಕಿಸ್ತಾನ

Profile Ashok Nayak May 10, 2025 6:10 AM

ಗ್ರಹಚಾರ ನೆಟ್ಟಗಿಲ್ಲದಿದ್ದರೆ ಹಗ್ಗವೂ ಹಾವಾಗಿ ಕಚ್ಚುತ್ತದೆ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಪಾಕಿಸ್ತಾನ ಸದ್ಯ ಹಾದುಹೋಗುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿ ದವರಿಗೆ ಈ ಮಾತು ನೆನಪಾದಲ್ಲಿ ಅಚ್ಚರಿಯೇನಿಲ್ಲ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್-ಪೋಷಿತ ಉಗ್ರರು ನಡೆಸಿದ ಅಮಾಯಕರ ಮಾರಣಹೋಮಕ್ಕೆ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮೂಲಕ ಭಾರತ ಸರಿಯಾಗೇ ತಪರಾಕಿ ನೀಡಿದೆ, ನೀಡುತ್ತಿದೆ. ಇದರಿಂದ ಸುಧಾರಿಸಿಕೊಳ್ಳುವ ಮುನ್ನವೇ ಇತ್ತ ಬಲೂಚಿಸ್ತಾನದ ಬಂಡುಕೋರರು, ಅತ್ತ ಕಡೆ ತಾಲಿಬಾನಿಗಳು ಕೂಡ ಪಾಕಿಸ್ತಾನದ ಮೇಲೆ ದಾಳಿಗೆ ಮುಂದಾಗಿದ್ದಾರೆ. 12 ಮಂದಿ ಪಾಕ್ ಸೈನಿಕರು ಯುದ್ಧ ಸಾಮಗ್ರಿಗಳೊಂದಿಗೆ ಸಾಗುತ್ತಿದ್ದ ವಾಹನವನ್ನು ಬಲೂಚಿ ಬಂಡುಕೋರರು ಸ್ಫೋಟಿಸಿದ ವಿಡಿಯೋ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು.

ಈಗ ‘ತೆಹ್ರೀಕ್-ಇ-ತಾಲಿಬಾನ್’ ನಡೆಸಿದ ದಾಳಿಯಲ್ಲಿ 20 ಮಂದಿ ಪಾಕ್ ಸೈನಿಕರು ಅಸುನೀಗಿದ್ದಾರೆ ಹಾಗೂ ಪಾಕಿಗಳ ಶಸಾಸಗಳನ್ನೂ ಅವರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉಗ್ರವಾದದ ಅಬ್ಬರ ಹಾಗೂ ‘ಛಾಯಾಸಮರದ’ ಮೂಲಕ ಶಾಂತಿಪ್ರಿಯ ರಾಷ್ಟ್ರಗಳಿಗೆ ಕಂಟಕ ಪ್ರಾಯವಾಗಿದ್ದ ಪಾಕಿಸ್ತಾನಕ್ಕೆ, ಈಗ ಎಲ್ಲವೂ ತನ್ನ ಲೆಕ್ಕಾಚಾರದಂತೆ ನಡೆಯುತ್ತಿಲ್ಲ ಎಂಬ ಕಹಿ ಸತ್ಯದ ಅರಿವಾಗಿರಬೇಕು!

ಇದನ್ನೂ ಓದಿ: Vishwavani Editorial: ಸುಟ್ಟರೂ ಹೋಗದ ಹುಟ್ಟುಗುಣ!

‘ಕಿಡಿಗೇಡಿ ವ್ಯಕ್ತಿಗೆ ಕಿರಿಕಿರಿ ತಪ್ಪಿದ್ದಲ್ಲ’ ಎಂಬರ್ಥದ ಮಾತನ್ನು ನಮ್ಮ ಜನರು ಆಡುವುದುಂಟು. ಅಂದರೆ, ಪರಿಶ್ರಮದ ಹಾದಿಯನ್ನು ಕೈಬಿಟ್ಟು, ಕಿಡಿಗೇಡಿತನದಿಂದಲೋ, ಮತ್ತೊಬ್ಬರನ್ನು ಸುಲಿಗೆ ಮಾಡಿಯೋ, ಹಿಂಸಿಸಿಯೋ ಅನ್ನ ದಕ್ಕಿಸಿಕೊಳ್ಳುವವನು ನೆಮ್ಮದಿಯಿಂದ ಇರಲಾಗದು ಅಂತ ಈ ಮಾತಿನ ಅರ್ಥ. ಪಾಕಿಸ್ತಾನ ಇದನ್ನು ಇನ್ನಾದರೂ ಗ್ರಹಿಸಿ, ಆತ್ಮಾವಲೋಕನಕ್ಕೆ ಮುಂದಾದರೆ ಒಳಿತು.

ಇಲ್ಲವಾದಲ್ಲಿ, ಜಾಗತಿಕ ಸಮುದಾಯದೆದುರು ಈಗಾಗಲೇ ಮೂರಾಬಟ್ಟೆಯಾಗಿರುವ ಅದರ ಪರಿಸ್ಥಿತಿ ಮತ್ತಷ್ಟು ಅಧೋಗತಿಗೆ ಇಳಿಯುವ ದಿನಗಳು ದೂರವಿಲ್ಲ. ಸಮುದ್ರದಲ್ಲಿ ಸಂಚರಿಸುವ ಹಡಗು ದಡದಲ್ಲಿ ನಿಂತಿರುವವರಿಗೆ ಕಾಣುವುದಕ್ಕೂ ಮೊದಲು ಹಡಗಿನ ಧ್ವಜ ಕಾಣುತ್ತದೆ. ಪಾಕಿ ಸ್ತಾನಕ್ಕೆ ಈಗ ಸಂಕಷ್ಟದ ಪತಾಕೆ ಕಾಣಿಸಿಕೊಂಡಿದೆ. ಅದು ತಪ್ಪನ್ನು ಇನ್ನಾದರೂ ತಿದ್ದಿಕೊಳ್ಳ ದಿದ್ದಲ್ಲಿ, ಹಡಗು ಬಂದು ಅಪ್ಪಳಿಸುವ ದಿನಗಳು ದೂರವಿಲ್ಲ...