ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ರಾಜಕಾರಣವೋ, ದೃಶ್ಯಭೀಷಣವೋ ?

ರಾಜ್ಯದ ಜನರಿಗೆ ಪ್ರಸ್ತುತ ಕಾಣುತ್ತಿರುವುದು ರಾಜಕಾರಣವಲ್ಲ, ‘ದೃಶ್ಯಭೀಷಣ’. ಜನಕಲ್ಯಾಣಕ್ಕೆ ಆಳುಗರು ದಿನಪೂರ್ತಿ ಸಮಯ ವಿನಿಯೋಗಿಸಿದರೂ ಸಾಲದು ಎಂಬ ಅನಿವಾರ್ಯತೆ ಇರು ವಾಗ, ಆಳುಗ ಪಕ್ಷ ದವರು ಹಾಗೂ ವಿಪಕ್ಷದವರು ತಂತಮ್ಮ ಮನೆಯ ಅಂತಃಕಲಹದ ಬೆಂಕಿಯ ಶಮನಕ್ಕೇ ಬಹುತೇಕ ಸಮಯವನ್ನು ಮೀಸಲಿಡುವಂತಾದರೆ, ಜನಕಲ್ಯಾಣದ ಆಶಯ ಸಾಕಾರ ಗೊಳ್ಳುವುದೆಂತು?

ರಾಜಕಾರಣವೋ, ದೃಶ್ಯಭೀಷಣವೋ ?

Profile Ashok Nayak Mar 29, 2025 6:28 AM

ರಾಜ್ಯ ರಾಜಕಾರಣದ ಇಂದಿನ ಸ್ಥಿತಿಗತಿಯನ್ನು ಅವಲೋಕಿಸಿದ ಜನರಿಗೆ ರಾಮರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ ಎಂಬ ಮಾತು ನೆನಪಾದರೆ ಅಚ್ಚರಿಯಲ್ಲ. ಒಂದೆಡೆ, ರಾಜ್ಯದ ಅಧಿಕಾರ ಗದ್ದುಗೆಯನ್ನು ಅಪ್ಪಿರುವ ಕಾಂಗ್ರೆಸ್ ಪಕ್ಷದಲ್ಲಿ ಗುಪ್ತಗಾಮಿನಿ ಯಾಗಿದ್ದ ‘ನೀ ಕೊಡೆ, ನಾ ಬಿಡೆ’ ಎಂಬ ಹಗ್ಗಜಗ್ಗಾಟವು ಪ್ರಸ್ತುತ ದೆಹಲಿಯ ಅಂಗಳವನ್ನು ತಲುಪಿದ್ದರೆ, ಮತ್ತೊಂದೆಡೆ ಬಿಜೆಪಿಯ ರಾಜ್ಯ ಘಟಕದ ಪರಿಸ್ಥಿತಿ ‘ಮನೆಯೊಂದು ಮೂರು ಬಾಗಿಲು’ ಎನ್ನುವಂತಾಗಿದೆ. ಹೀಗೆ ಎರಡೂ ಮನೆಗಳು ಮತ್ತು ಅವುಗಳಲ್ಲಿರುವವರ ಮನ ಗಳು ಮುರಿದಾಗ, ಆಡಳಿತ ಯಂತ್ರವು ಸೂತ್ರಹರಿದ ಗಾಳಿಪಟದಂತಾಗುತ್ತದೆ.

ರಾಜ್ಯದ ಜನರಿಗೆ ಪ್ರಸ್ತುತ ಕಾಣುತ್ತಿರುವುದು ರಾಜಕಾರಣವಲ್ಲ, ‘ದೃಶ್ಯಭೀಷಣ’. ಜನಕಲ್ಯಾಣಕ್ಕೆ ಆಳುಗರು ದಿನಪೂರ್ತಿ ಸಮಯ ವಿನಿಯೋಗಿಸಿದರೂ ಸಾಲದು ಎಂಬ ಅನಿವಾರ್ಯತೆ ಇರುವಾಗ, ಆಳುಗ ಪಕ್ಷ ದವರು ಹಾಗೂ ವಿಪಕ್ಷದವರು ತಂತಮ್ಮ ಮನೆಯ ಅಂತಃಕಲಹದ ಬೆಂಕಿಯ ಶಮನಕ್ಕೇ ಬಹುತೇಕ ಸಮಯವನ್ನು ಮೀಸಲಿಡುವಂತಾದರೆ, ಜನಕಲ್ಯಾಣದ ಆಶಯ ಸಾಕಾರ ಗೊಳ್ಳುವುದೆಂತು? ಕಾಂಗ್ರೆಸ್ ನಲ್ಲಿ ‘ಅಧಿಕಾರ-ಹಸ್ತಾಂತರ’ ಎಂಬ ‘ಅನಿಶ್ಚಿತ’ ಚರ್ಚಾ ವಿಷಯಕ್ಕೆ ಸಂಬಂಧಿಸಿ ಕೇಳಿ ಬರುತ್ತಿರುವ ಗುಸುಗುಸು ಮಾತು ಗಳು ಹಾಗೂ ಬಿಜೆಪಿಯಲ್ಲಿ ಮೊನ್ನೆಯಷ್ಟೇ ಘಟಿಸಿದ ಪ್ರಮುಖ ನಾಯಕರೊಬ್ಬರ ಉಚ್ಚಾಟನೆ- ಈ ಎರಡೂ ಸಮಸ್ಯೆ ಗಳಿಗೆ ಪ್ರಜಾಪ್ರತಿನಿಧಿಗಳನ್ನು ಚುನಾಯಿಸಿ ಕಳಿಸಿದ ಜನರಂತೂ ಕಾರಣರಲ್ಲ.

ಇದನ್ನೂ ಓದಿ: Vishwavani Editorial: ಬಿಜೆಪಿ ಕಲಹ ಉಲ್ಭಣ

ಆದರೆ ತಾವು ಮಾಡದ ತಪ್ಪಿಗೆ ಜನರು ಹೀಗೆ ಪರೋಕ್ಷವಾಗಿ ಶಿಕ್ಷೆಯನ್ನು ಅನುಭವಿಸ ಬೇಕಾಗಿ ಬಂದಿರುವುದು ವಿಪರ್ಯಾಸದ ಪರಮಾವಽ. ವಿವೇಚನೆಯಿರುವ ಒಂದಿಷ್ಟು ನಾಯಕರು ಒಂದೆಡೆ ಕಲೆತು ಮುಕ್ತವಾಗಿ ಮಾತನಾಡಿ ಗೊಂದಲಗಳನ್ನು ನಿವಾರಿಸಿಬಿಟ್ಟರೆ, ನಾಲ್ಕು ಗೋಡೆಗಳ ಮಧ್ಯೆಯೇ ಇತ್ಯರ್ಥವಾಗಿಬಿಡುವ ಸಮಸ್ಯೆಗಳು ಎರಡೂ ಪಕ್ಷ-ಪಾಳಯಗಳದ್ದು. ಈ ಸರಳ ಸಂಗತಿಯನ್ನು ಅರಿಯದೆ ‘ಹಾದಿರಂಪ-ಬೀದಿರಂಪ’ ಮಾಡಿ ಕೊಂಡರೆ, ಆ ಪ್ರಹಸನಕ್ಕೆ ತೆರಿಗೆದಾರರ ಹಣ ವೆಚ್ಚವಾಗಬೇಕೇ?! ಈ ಪ್ರಶ್ನೆಗೆ ಉತ್ತರಿಸುವವ ರಾರು?