ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ದರ ಏರಿಕೆಯೊಂದೇ ಪರಿಹಾರವಲ್ಲ

ಬಜೆಟ್ ಮಂಡನೆಗೆ ಮುನ್ನವೇ ರಾಜ್ಯದಲ್ಲಿ ಬೆಲೆ ಏರಿಕೆ ಜಮಾನಾ ಆರಂಭ ವಾಗಿದೆ. ರಾಜ್ಯ ಸರಕಾರ 2023ರ ಜುಲೈನಲ್ಲಿ ಹಾಲಿನ ದರವನ್ನು 3 ರು.ಗಳಷ್ಟು ಹೆಚ್ಚಿಸಿತ್ತು. 2024ರ ಜೂನ್‌ ನಲ್ಲಿ ಈ ದರವನ್ನು ಮತ್ತೆ 2 ರು. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಹಾಲು ಉತ್ಪಾದಕರ ಹಿತ ದೃಷ್ಟಿಯಿಂದ ಏರಿಕೆ ಅನಿವಾರ‍್ಯ ಎಂದು ಕೆಎಂಎಫ್ ಹೇಳಿಕೊಂಡಿದೆ

ದರ ಏರಿಕೆಯೊಂದೇ ಪರಿಹಾರವಲ್ಲ

Profile Ashok Nayak Mar 7, 2025 5:34 AM

ಆಸ್ತಿ ತೆರಿಗೆ, ಬಸ್ ಮತ್ತು ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಿದ ಬೆನ್ನಿಗೇ ರಾಜ್ಯ ಸರಕಾರ ಹಾಲಿನ ದರವನ್ನು ಮತ್ತೊಮ್ಮೆ ಹೆಚ್ಚಿಸುವ ಸುಳಿವು ನೀಡಿದೆ. ಇದರ ಬೆನ್ನಿಗೇ ಅಟೋ ರಿಕ್ಷಾ ಸಂಘಟನೆಗಳು ದರವನ್ನು ೨ನೇ ಬಾರಿಗೆ ಏರಿಸಲು ಪ್ರಸ್ತಾವನೆ ಸಲ್ಲಿಸಿವೆ. ನೀರಿನ ದರ ಹೆಚ್ಚಿಸುವುದು ಅನಿವಾರ‍್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ತಿಳಿಸಿದ್ದಾರೆ. ಬೆಸ್ಕಾಂ ಸೇರಿದಂತೆ ಎಲ್ಲಾ ವಿದ್ಯುತ್ ಪ್ರಸರಣ ನಿಗಮಗಳು ವಿದ್ಯುತ್ ದರ ಏರಿಕೆ ಸಂಬಂಧ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಅಹವಾಲು ಸಲ್ಲಿಸಿವೆ. ಆಯೋಗ ತನ್ನ ನಿರ್ಧಾರ ಪ್ರಕಟಿಸುವ ಮುನ್ನವೇ ಬೆಸ್ಕಾಂ ಹೊಸದಾಗಿ ಮನೆ ಕಟ್ಟುವ ವರಿಗೆ ಕಡ್ಡಾಯ ಗೊಳಿಸಲಾಗಿರುವ ತಾತ್ಕಾಲಿಕ ಸ್ಮಾರ್ಟ್ ಮೀಟರ್‌ನ ಠೇವಣಿ ಮತ್ತು ವಿದ್ಯುತ್ ದರವನ್ನು 900 ರು.ಗಳಿಂದ 5 ಸಾವಿರ ರು.ಗಳ ತನಕ ಏರಿಸಿದೆ.

ಇದನ್ನೂ ಓದಿ: Vishwavani Editorial: ನಕಲಿ ಅಂಕಪಟ್ಟಿಗಳಿಗೆ ಕಡಿವಾಣ ಬೀಳಲಿ

ಒಟ್ಟಾರೆಯಾಗಿ ಬಜೆಟ್ ಮಂಡನೆಗೆ ಮುನ್ನವೇ ರಾಜ್ಯದಲ್ಲಿ ಬೆಲೆ ಏರಿಕೆ ಜಮಾನಾ ಆರಂಭ ವಾಗಿದೆ. ರಾಜ್ಯ ಸರಕಾರ 2023ರ ಜುಲೈನಲ್ಲಿ ಹಾಲಿನ ದರವನ್ನು 3 ರು.ಗಳಷ್ಟು ಹೆಚ್ಚಿಸಿತ್ತು. 2024ರ ಜೂನ್‌ನಲ್ಲಿ ಈ ದರವನ್ನು ಮತ್ತೆ 2 ರು. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಏರಿಕೆ ಅನಿವಾರ‍್ಯ ಎಂದು ಕೆಎಂಎಫ್ ಹೇಳಿಕೊಂಡಿದೆ. ‌

ಹೈನುಗಾರರ ಹೆಸರಿನಲ್ಲಿ ದರ ಏರಿಕೆ ಪ್ರಸ್ತಾಪ ಮುಂದಿಟ್ಟಿರುವ ಸರಕಾರ 6 ತಿಂಗಳಿನಿಂದ 656 ಕೋಟಿ ರು. ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದೆ. ಈ ಹಿಂದೆ ದರ ಏರಿಕೆಯ ಬಳಿಕವೂ ರೈತರಿಗೆ ಏರಿಕೆ ಹಣದ ಪೂರ್ತಿ ಲಾಭ ವರ್ಗಾವಣೆಯಾಗಿರಲಿಲ್ಲ.

ನಂದಿನಿ ಉತ್ಪನ್ನಗಳಿಗೆ ಹೊರರಾಜ್ಯಗಳಿಂದಲೂ ಬೇಡಿಕೆ ಇದೆ. ಈ ಬೇಡಿಕೆಯನ್ನು ಬಳಸಿ ಕೊಂಡು ಹಾಲು ಒಕ್ಕೂಟವನ್ನು ಲಾಭದತ್ತ ಒಯ್ಯವ ಪ್ರಯತ್ನವಾಗ ಬೇಕೇ ಹೊರತು ನಷ್ಟದ ವಿಚಾರವನ್ನು ಮುಂದಿಟ್ಟು ಏಳೆಂಟು ತಿಂಗಳಿಗೊಮ್ಮೆ ಹಾಲಿನ ದರವನ್ನು ಏರಿಸುವುದು ಸಲ್ಲ.

ರಾಜಕೀಯ ನಾಯಕರ ಹಸ್ತಕ್ಷೇಪದಿಂದ ಎಲ್ಲ ಒಕ್ಕೂಟಗಳಲ್ಲೂ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ. ಅಲ್ಲೆಲ್ಲ ಹಗರಣಗಳ ದೂರುಗಳಿವೆ. ಜೀವನಾ ವಶ್ಯಕ ವಸ್ತುಗಳ ಬೆಲೆಯನ್ನು ನಿಯಂತ್ರಣದಲ್ಲಿಡುವುದು ಸರಕಾರದ ಕರ್ತವ್ಯ. ಇದಕ್ಕೆ ಬೇಕಿರುವುದು ದಕ್ಷ ಆಡಳಿತ. ಕೆಎಂಎ- ಈ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.