Vishwavani Editorial: ಪ್ರತಿಭಟನೆ ಜನರಿಗೆ ಕಷ್ಟವಾಗಬಾರದು
ಪ್ರತಿಭಟನೆ ಎಂದ ಕೂಡಲೇ ನೇರವಾಗಿ ಜನಸಾಮಾನ್ಯರಿಗೇ ತೊಂದರೆ ಕೊಡುವ ನೂರಾರು ವರ್ಷಗಳ ಪದ್ಧತಿಯನ್ನು ನಿಲ್ಲಿಸುವುದು ದೇಶದ ಪ್ರಗತಿಯ ಹಿನ್ನೆಲೆಯಲ್ಲಿ ಬಹಳ ಕ್ಷೇಮವೆನಿಸುತ್ತದೆ. ಇದರ ಬದಲು ಯಾವ ರಚನಾತ್ಮಕ ಮಾರ್ಗ ಹಿಡಿದರೆ ತಮ್ಮ ದಾರಿ ಸುಗಮವಾಗುತ್ತದೆ ಎಂದು ರೈತರೇ ಯೋಚಿಸಿ ನಿರ್ಧರಿಸಬೇಕು.
-
ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಒಂದು ಟನ್ ಕಬ್ಬಿನ ಕನಿಷ್ಠ ಬೆಂಬಲ ಬೆಲೆಯನ್ನು 5500 ರು.ಗೇರಿಸಿ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಮಳೆ ಬಂದಿಲ್ಲ, ನೀರಾವರಿ ಕೊರತೆಯಿದೆ, ಕಬ್ಬಿನ ಕಟಾವು, ಸಾಗಣೆ ಎಲ್ಲವೂ ಸೇರಿ ನಾವು ನಷ್ಟದಲ್ಲಿದ್ದೇವೆ. ಒಂದು ಟನ್ ಕಬ್ಬಿಗೆ ಕನಿಷ್ಠ 5500 ರು. ನೀಡಿದರೆ, ರಾಜ್ಯ ಸರ್ಕಾರ ಹೆಚ್ಚುವರಿ 900 ರು. ಪ್ರೋತ್ಸಾಹಧನ ನೀಡಿದರೆ ಮಾತ್ರ ಬೆಳೆಗಾರರು ಬಚಾವಾಗಲು ಸಾಧ್ಯ ಎಂದು ಹೋರಾಟಗಾರರು ವಾದಿಸುತ್ತಿದ್ದಾರೆ. ಅದಕ್ಕಾಗಿ ಮಂಗಳವಾರ ಮತ್ತು ಬುಧವಾರವೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ.
ರೈತರ ಬೇಡಿಕೆ ಏನೇ ಇರಬಹುದು, ಅದಕ್ಕಾಗಿ ಹೆದ್ದಾರಿಗಳನ್ನು ತಡೆದು ಜನರಿಗೆ ತೊಂದರೆ ಕೊಡುವುದು ಸುತಾರಾಮ್ ಸರಿಯಲ್ಲ. ಯಾವುದೋ ತುರ್ತು ಕೆಲಸಗಳಿಗಾಗಿ, ಪೂರ್ವಯೋಜಿತ ಕಾರ್ಯಗಳಿಗಾಗಿ ಜನರು ಸಂಚಾರ ಮಾಡುತ್ತಿರುತ್ತಾರೆ.
ಇದನ್ನೂ ಓದಿ: Vishwavani Editorial: ಹಾಲು ದುಬಾರಿಯ ಬರೆ
ಯಾವುದಕ್ಕೂ ಸಂಬಂಧವಿಲ್ಲದ ಜನಸಾಮಾನ್ಯರಿಗೆ ತೊಂದರೆ ನೀಡುವುದು ನ್ಯಾಯವೇ? ರೈತರಿಗೆ ಯಾವ ತೊಂದರೆಯನ್ನೂ ಮಾಡದ, ಸಾಲದ್ದಕ್ಕೆ ಅವರ ಬೇಡಿಕೆ ನ್ಯಾಯ ಯುತವಾಗಿದ್ದರೆ ಅದಕ್ಕೆ ಬೆಂಬಲ ಕೊಡುವುದಕ್ಕೂ ಸಜ್ಜಾಗಿರುವ ಜನಸಾಮಾನ್ಯರು ಇಲ್ಲಿ ಯಾಕೆ ಪರಿತಾಪಪಡಬೇಕು? ಜನಸಾಮಾನ್ಯರಿಗೆ ತೊಂದರೆ ಕೊಡುವುದರಿಂದ ಅವರೂ ಶಾಪ ಹಾಕಿಕೊಳ್ಳುತ್ತಾರೆಯೇ ಹೊರತು, ರೈತರ ಬೇಡಿಕೆಗಳಿಗೆ ಬೆಂಬಲವಾಗಿಯೇನು ನಿಲ್ಲುವುದಿಲ್ಲ.
ಪ್ರತಿಭಟನೆ ಎಂದ ಕೂಡಲೇ ನೇರವಾಗಿ ಜನಸಾಮಾನ್ಯರಿಗೇ ತೊಂದರೆ ಕೊಡುವ ನೂರಾರು ವರ್ಷಗಳ ಪದ್ಧತಿಯನ್ನು ನಿಲ್ಲಿಸುವುದು ದೇಶದ ಪ್ರಗತಿಯ ಹಿನ್ನೆಲೆಯಲ್ಲಿ ಬಹಳ ಕ್ಷೇಮ ವೆನಿಸುತ್ತದೆ. ಇದರ ಬದಲು ಯಾವ ರಚನಾತ್ಮಕ ಮಾರ್ಗ ಹಿಡಿದರೆ ತಮ್ಮ ದಾರಿ ಸುಗಮವಾಗುತ್ತದೆ ಎಂದು ರೈತರೇ ಯೋಚಿಸಿ ನಿರ್ಧರಿಸಬೇಕು. ತಮಗೆ ಕಷ್ಟವಿದೆ ಎನ್ನುವುದಾದರೆ ರೈತರು ಕಾರ್ಖಾನೆ ಮಾಲಿಕರಿಗೆ ಕಬ್ಬು ಪೂರೈಸದೇ, ಅವರು ವ್ಯವಹಾರಗಳನ್ನು ಮಾಡದೇ ಇರುವಂತೆ ನೋಡಿ ಕೊಂಡರೆ ಸಹಜವಾಗಿ ಪ್ರಭಾವ ಬೀರುತ್ತದೆ.
ಇಲ್ಲವೇ ನೇರವಾಗಿ ಸರ್ಕಾರಿ ವ್ಯವಹಾರಗಳಿಗೇ ಕೈಹಾಕಿ, ಅಲ್ಲಿನ ಕಾರ್ಯನಿರ್ವಹಣೆಗೆ ಅಡ್ಡಿ ಮಾಡಿದರೆ, ಸಹಜವಾಗಿ ಸರ್ಕಾರ ಮಾತುಕತೆಗೆ ಕೂರುತ್ತದೆ. ಇದನ್ನೂ ಹೊರತುಪಡಿಸಿ ಯಾವುದೇ ಪರ್ಯಾಯ ಮಾರ್ಗ ಗಳಿದ್ದರೇ, ಅದನ್ನೇ ಬಳಸುವುದು ಸೂಕ್ತ. ರೈತರು ತೊಂದರೆಯಲ್ಲಿದ್ದಾರೆ ಎನ್ನುವು ದು ಸತ್ಯ. ಹಾಗಂತ ಅವರಷ್ಟೇ ಕಷ್ಟದಲ್ಲಿರುವ ಇನ್ನೊಬ್ಬರಿಗೂ ತೊಂದರೆ ಕೊಡುವುದು ಸೂಕ್ತವಲ್ಲ.