ಆಯೋಗದಲ್ಲಿ ಒಡಕು
ಕಳೆದ 10 ತಿಂಗಳಲ್ಲಿ ಹಲವಾರು ವಿಚಾರಗಳಿಗೆ ಸಂಬಂಧಿಸಿ 14 ಬಾರಿ ಇಬ್ಬರು ಆಯುಕ್ತರು ಆಕ್ಷೇಪ ಎತ್ತಿದ್ದಾರೆ. ಚುನಾವಣಾ ಆಯೋಗ, ಪ್ರಜಾಪ್ರಭುತ್ವದಲ್ಲಿ ಬಹು ಮಹತ್ವದ ಹೊಣೆಯನ್ನು ನಿರ್ವಹಿಸು ತ್ತದೆ. ಅಲ್ಲಿ ತೆಗೆದುಕೊಳ್ಳಲಾಗುವ ಕ್ರಮಗಳು ಚುನಾವಣಾ ಪ್ರಕ್ರಿಯೆಯನ್ನು ನೇರವಾಗಿ ಪ್ರಭಾವಿಸುತ್ತವೆ.
-
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಎಲ್ಲವೂ ಸರಿಯಾ ಗಿಲ್ಲ ಎಂದು ಮೊದಲಿನಿಂದಲೂ ಹೇಳುತ್ತ ಬರಲಾಗಿದೆ. ಇದೀಗ ಆ ಟೀಕೆಗೆ ಕೇಂದ್ರ ಚುನಾವಣಾ ಆಯೋಗದ ಇನ್ನಿಬ್ಬರು ಧ್ವನಿಗೂಡಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಮತ್ತು ಉಳಿದಿಬ್ಬರು ಚುನಾವಣಾ ಆಯುಕ್ತರಾದ (ಇಸಿ) ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ನಡುವೆ ತೀವ್ರ ಸ್ವರೂಪದ ಅಭಿಪ್ರಾಯ ಬೇಧ ವ್ಯಕ್ತವಾಗಿದೆ.
ಕಳೆದ 10 ತಿಂಗಳಲ್ಲಿ ಹಲವಾರು ವಿಚಾರಗಳಿಗೆ ಸಂಬಂಧಿಸಿ 14 ಬಾರಿ ಇಬ್ಬರು ಆಯುಕ್ತರು ಆಕ್ಷೇಪ ಎತ್ತಿದ್ದಾರೆ. ಚುನಾವಣಾ ಆಯೋಗ, ಪ್ರಜಾಪ್ರಭುತ್ವದಲ್ಲಿ ಬಹು ಮಹತ್ವದ ಹೊಣೆಯನ್ನು ನಿರ್ವಹಿಸುತ್ತದೆ. ಅಲ್ಲಿ ತೆಗೆದುಕೊಳ್ಳಲಾಗುವ ಕ್ರಮಗಳು ಚುನಾವಣಾ ಪ್ರಕ್ರಿಯೆಯನ್ನು ನೇರವಾಗಿ ಪ್ರಭಾವಿಸುತ್ತವೆ. ಇಂಥ ಹೊತ್ತಿನಲ್ಲಿ, ಮುಖ್ಯ ಚುನಾವಣಾ ಆಯುಕ್ತರ ನಿರ್ದೇಶನದ ಮೇರೆಗೆ ಆಯೋಗದಲ್ಲಿ ನಡೆದಿರುವ ಹಲವು ಪ್ರಮುಖ ಪ್ರಕ್ರಿಯೆಗಳು ನಮ್ಮ ಒಪ್ಪಿಗೆ ಇಲ್ಲದೆ ನಡೆದಿವೆ ಎಂದು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿರುವುದು ಗಮನಾರ್ಹ.
ಇದನ್ನೂ ಓದಿ: Vishwavani Editorial: ಕಸ್ತೂರಿರಂಗನ್ ವರದಿ ಗುಮ್ಮ
ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್-6 ನಮೂನೆಯಲ್ಲಿ ಇತ್ತೀಚೆಗೆ ಮಾಡಲಾಗಿ ರುವ ತಿದ್ದುಪಡಿಗಳು ನಿಯಮಬಾಹಿರ ಮತ್ತು ಅನಧಿಕೃತ ಎಂದು ಇಬ್ಬರೂ ಆಯುಕ್ತರು ಆಕ್ಷೇಪಿ ಸಿದ್ದಾರೆ. ಮತದಾರರ ದತ್ತಾಂಶಗಳನ್ನು ಕೇಂದ್ರೀಕರಿಸುವುದು ಮತ್ತು ‘ಇಸಿಐ-ನೆಟ್’ ತಂತ್ರಾಂಶ ಬಳಕೆ ವಿಚಾರಕ್ಕೂ ಇಬ್ಬರೂ ಆಯುಕ್ತರಿಂದ ಆಕ್ಷೇಪ ವ್ಯಕ್ತವಾಗಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಧನರಾದ/ಸ್ಥಳ ಬದಲಾಯಿಸಿದ ಮತದಾರರ ಹೆಸರುಗಳನ್ನು ಅಳಿಸುವ ವಿಚಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳ ವಿರುದ್ಧ ವಾಗಿ ಸಲ್ಲಿಸಲಾದ ಮೇಲ್ಮನವಿಗಳ ಅಧಿಕಾರದ ಬಗೆಗೂ ಇಬ್ಬರೂ ಆಯುಕ್ತರು ಪ್ರಶ್ನೆ ಮಾಡಿದ್ದಾರೆ.
30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮತದಾರರ ಪಟ್ಟಿಯಿಂದ ಒಟ್ಟು 13 ಕೋಟಿ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗೆ ಉಳಿದಿರುವುದು ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬಳಿಕ ತಿಳಿದುಬಂದಿದೆ. ಈ ಬೆಳವಣಿಗೆ ಚುನಾವಣಾ ಆಯೋಗದ ಕಾರ್ಯ ವೈಖರಿ ಯ ಬಗ್ಗೆ ಚಿಂತಿಸಲೇಬೇಕಾದ ಸನ್ನಿವೇಶವನ್ನು ನಮ್ಮ ಮುಂದಿಟ್ಟಿದೆ.
ನಿಜಕ್ಕೂ ಮುಖ್ಯ ಆಯುಕ್ತರ ಕಾರ್ಯ ವೈಖರಿಯೇ ಹಾಗಿದೆಯೇ? ಈ ಒಡಕು ಉಂಟಾಗಲು ಕಾರಣವೇನು? ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳು ಉಂಟಾಗಿರುವುದು ನಿಜವೇ? ಹಾಗಿದ್ದರೆ ಈ ಪ್ರಕ್ರಿಯೆ ಎಷ್ಟು ಪಾರದರ್ಶಕವಾಗಿ ನಡೆದಿದೆ? ಒತ್ಯಾದಿ ಪ್ರಶ್ನೆಗಳು ಮೂಡುತ್ತವೆ. ಇದೆಲ್ಲವನ್ನು ಪರಿಹರಿಸುವ ಕೆಲಸವನ್ನು ಆಯೋಗ, ಕೇಂದ್ರ ಸರಕಾರ ಮಾಡಬೇಕಿದೆ.