ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೆಎಂಎಫ್ ಬ್ರ್ಯಾಂಡ್ ಉಳಿಸಿ

2018-26ರ ಅವಧಿಯಲ್ಲಿ ಜಾನುವಾರು ಮೃತಪಟ್ಟ ರೈತರಿಗೆ ನೀಡ ಬೇಕಾಗಿದ್ದ ವಿಮೆ ಪರಿಹಾರ ಹಾಗೂ ಟ್ರಸ್ಟ್ ಹಣವನ್ನು ಅವರಿಗೆ ನೀಡದೆ ಪರಿಚಿತರ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸ ಲಾಗಿದೆ ಎಂಬುದು ಆರೋಪ. ಮಂಡ್ಯದ ಮನ್‌ಮುಲ್ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೂ 11 ಮಂದಿ ಯನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.

ಕೆಎಂಎಫ್ ಬ್ರ್ಯಾಂಡ್ ಉಳಿಸಿ

-

Profile
Ashok Nayak Oct 16, 2026 11:55 PM

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯ ನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ರಾಬಕೊವಿ) ವಿಮೆ, ರೈತ ಕಲ್ಯಾಣ ಟ್ರಸ್ಟ್‌ನ 16.5 ಕೋಟಿ ರೂ.ಗೂ ಅಧಿಕ ಹಣ ದುರ್ಬಳಕೆ ಆರೋಪದಡಿ ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ ರೆಡ್ಡಿ ಸೇರಿದಂತೆ ಆರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

2018-26ರ ಅವಧಿಯಲ್ಲಿ ಜಾನುವಾರು ಮೃತಪಟ್ಟ ರೈತರಿಗೆ ನೀಡ ಬೇಕಾಗಿದ್ದ ವಿಮೆ ಪರಿಹಾರ ಹಾಗೂ ಟ್ರಸ್ಟ್ ಹಣವನ್ನು ಅವರಿಗೆ ನೀಡದೆ ಪರಿಚಿತರ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸ ಲಾಗಿದೆ ಎಂಬುದು ಆರೋಪ. ಮಂಡ್ಯದ ಮನ್‌ಮುಲ್ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೂ 11 ಮಂದಿ ಯನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: KMF Nandini: ಆರ್‌ಸಿಬಿಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್‌ ನಂದಿನಿ; ಮೈದಾನದಲ್ಲಿ ಅಮುಲ್‌ ಉತ್ಪನ್ನಗಳಿಗೆ ಸ್ಪರ್ಧೆ

ಎರಡು ವರ್ಷಗಳಿಂದ ಈ ಅಕ್ರಮ ನಡೆಯುತ್ತಿದೆ ಎನ್ನಲಾಗಿದ್ದು, ಎಷ್ಟು ಕೋಟಿ ಪ್ರಮಾಣದ ಅವ್ಯವ ಹಾರ ನಡೆದಿದೆಯೋ ಹೊರಬರಬೇಕಿದೆ. ಇದೆಲ್ಲವೂ, ನಾಡಿನ ಹೆಮ್ಮೆಯ ಬ್ರ್ಯಾಂಡ್ ಆಗಿ ಬೆಳೆದಿರುವ ಕೆಎಂಎಫ್ ಹೆಸರಿಗೆ ಮಸಿ ಬಳಿಯವ ಕೃತ್ಯಗ ಳಾಗಿವೆ. ನಂದಿನಿ ಉತ್ಪನ್ನಗಳು ನಾಡಿನಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಲ್ಲೂ ತಮ್ಮ ಪರಿಶುದ್ಧತೆ, ರುಚಿ, ಗುಣಮಟ್ಟಕ್ಕೆ ಖ್ಯಾತಿ ಪಡೆದಿವೆ. ‌

ತಿರುಪತಿಯ ಪ್ರಕರಣವನ್ನು ನೆನಪಿಸಿಕೊಳ್ಳಬಹುದು. ಅಲ್ಲಿ ನಡೆದ, ಲಡ್ಡುವಿಗೆ ಕಳಪೆ ತುಪ್ಪ ಬಳಕೆಯ ಪ್ರಕರಣದಲ್ಲಿ ಕೊನೆಗೂ ಪರಿಶುದ್ಧ ತುಪ್ಪಕ್ಕಾಗಿ ನಮ್ಮ ನಂದಿನಿಯನ್ನೇ ಸಂಸ್ಥೆ ಅವಲಂಬಿಸಬೇಕಾಗಿ ಬಂದಿತ್ತು. ರಾಜ್ಯದಲ್ಲಿ ಇಂದಿಗೂ ಅಮುಲ್ ಸೇರಿದಂತೆ ಇತರ ರಾಜ್ಯಗಳ ದೊಡ್ಡ ಬ್ರ್ಯಾಂಡ್‌ಗಳು ಬಂದು ಸೆಣಸಾಡುತ್ತಿದ್ದರೂ, ನಂದಿನಿ ಜನಮಾನಸದಲ್ಲಿ ಪಡೆದಿರುವ ಸ್ಥಾನವನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಹಾಲೂ ಸೇರಿದಂತೆ ನಂದಿನಿ ಉತ್ಪನ್ನಗಳ ಗುಣಮಟ್ಟ.

ಹೀಗಿರುವಾಗ, ಅದರ ಬ್ರ್ಯಾಂಡ್ ನೇಮ್ ಕೆಡಿಸುವ ಎಲ್ಲ ಬಗೆಯ ಅಕ್ರಮಗಳನ್ನೂ ಕಠಿಣ ವಾಗಿಯೇ ಶಿಕ್ಷಿಸಬೇಕಾಗುತ್ತದೆ. ಒಮ್ಮೆ ಹೋದ ಮಾನ ಮತ್ತೆ ಬಾರದು. ಕೆಎಂಎಫ್‌ʼನ ಉತ್ಪನ್ನಗಳ ಗುಣಮಟ್ಟ ವನ್ನು ಖಾತ್ರಿಪಡಿಸಿಕೊಳ್ಳಲು, ಜಿಲ್ಲಾ ಘಟಕಗಳಲ್ಲಿ ಎಲ್ಲವೂ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಜಾಸತ್ತಾತ್ಮಕ ವ್ಯವಸ್ಥೆ ಇರಬೇಕು. ‌

ಸದ್ಯ ಕೆಎಂಎಫ್ ಅಧ್ಯಕ್ಷರಿಲ್ಲದೆ, ಚುನಾವಣೆಯೂ ನಡೆಯದೆ ಅಧಿಕಾರಿಗಳ ಹಿಡಿತದಲ್ಲಿದೆ. ಇಂಥ ಘಟನೆಗಳ ಉತ್ತರದಾಯಿತ್ವ ಯಾರದು ಎಂಬ ಪ್ರಶ್ನೆ ಉಳಿದಿದೆ. ಹಾಗೆಯೇ ಜಿಲ್ಲಾ ಘಟಕಗಳ ಮೇಲೆ ಕೇಂದ್ರಕ್ಕೆ ಹಿಡಿತ ಇಲ್ಲವೇ, ಇಂಥ ಅಕ್ರ ಮಗಳನ್ನು ತಡೆಗಟ್ಟುವ ಹೊಣೆಗಾರಿಕೆ ಯಾರದು ಎಂಬ ಪ್ರಶ್ನೆಯೂ ಇದೆ.