Vishwavani Editorial: ಸಿದ್ಧಾಂತಗಳ ಅವಸಾನ
ಪಶ್ಚಿಮ ಬಂಗಾಳದಲ್ಲೂ ಇದೇ ಸ್ಥಿತಿ ಕಾಣಿಸುತ್ತಿದೆ. ಅಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಇಬ್ಭಾಗವಾಗಿದೆ. ಒಂದು ಬಲಿಷ್ಠ ಬಣ ಬಿಜೆಪಿಯತ್ತ ಚಲಿಸುತ್ತಿದೆ. ಈ ರಾಜಕೀಯ ಬಿಕ್ಕಟ್ಟನ್ನು ನಿಭಾಯಿಸಲು ಮಮತಾ ಅಸಫಲರಾಗಿದ್ದಾರೆ. ಬಿಜೆಪಿ ಹಾಗೂ ಕಮ್ಯು ನಿಸ್ಟ್ ಪಕ್ಷಗಳ ರಾಜಕಾರಣವನ್ನು ವಿರೋಧಿಸುತ್ತಲೇ ಮಮತಾ ತಮ್ಮ ಪಕ್ಷವನ್ನು ಕಟ್ಟಿಕೊಂಡಿ ದ್ದಾರೆ.
-
ರಾಜಕೀಯದಲ್ಲಿ ತತ್ವ, ಸಿದ್ಧಾಂತ, ಸೈದ್ಧಾಂತಿಕ ಬದ್ಧತೆ ಮುಂತಾದವುಗಳನ್ನು ಅಪೇಕ್ಷಿಸುವವರಿಗೆ ಇದು ಕಷ್ಟದ ಕಾಲ. ಎರಡು ರಾಜ್ಯಗಳ ರಾಜಕೀಯ ಬೆಳವಣಿಗೆಗಳನ್ನು ಇಲ್ಲಿ ಗಮನಿಸಬಹುದು. ತಮಿಳುನಾಡಿನಲ್ಲಿ ಎಐಡಿಎಂಕೆಗೆ ಮತ್ತೆ ಶಾಕ್ ಎಂಬಂತೆ ನಾಲ್ವರು ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಆಡಳಿತಾರೂಢ ತಮಿಳಗ ವೆಟ್ರಿ ಕಳಗಂಗೆ ಸೇರಿದ್ದಾರೆ.
300ಕ್ಕೂ ಹೆಚ್ಚು ಎಐಎಡಿಎಂಕೆ ಸದಸ್ಯರು ಟಿವಿಕೆಗೆ ಸೇರ್ಪಡೆಗೊಂಡಿದ್ದಾರೆ. ಚುನಾವಣಾ ಹಿನ್ನಡೆ ಯ ನಂತರ 25 ಎಐಎಡಿಎಂಕೆ ಶಾಸಕರ ಬಂಡಾಯ ಗುಂಪು ಪಕ್ಷದ ವಿಪ್ ಅನ್ನು ಧಿಕ್ಕರಿಸಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸಮತ ಯಾಚನೆಯನ್ನು ಬೆಂಬಲಿಸಿತ್ತು.
ಇನ್ನೊಂದು ಕಡೆ, ಕಾಂಗ್ರೆಸ್ ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾಗಿದ್ದರೂ ವಿಜಯ್ ಅವರ ಟಿವಿಕೆ ಜೊತೆ ಕೈಜೋಡಿಸಿ ವಿಶ್ವಾಸಮತ ಬೆಂಬಲಿಸಿತ್ತು. ಅಂದರೆ, ಅಧಿಕಾರ ಎಲ್ಲಿ ಇದೆಯೋ ಆ ಕಡೆಗೆ ಈ ಪಕ್ಷಗಳು, ಅದರ ಸದಸ್ಯರು ಸಾಗುತ್ತಿರುವುದು ಸ್ಪಷ್ಟ. ಟಿವಿಕೆಯನ್ನು ಬೆಂಬಲಿಸುವ ಹಂತದಲ್ಲಿ ಈ ಎರಡೂ ಪಕ್ಷಗಳ ನಾಯಕರಿಗೂ ತಮ್ಮ ಸಾಂಪ್ರದಾಯಿಕ ವೈರ ಪರಿಗಣನೆಗೆ ಬಂದಿಲ್ಲ.
ಇದನ್ನೂ ಓದಿ: Mamata Banerjee: ಸಿನಿಮಾಕ್ಕೆ ಕೂಡ ಹರಕೆ ಹೊತ್ತಿರಲಿಲ್ಲ, ಆದ್ರೆ ಮಮತಾ ಬ್ಯಾನರ್ಜಿ ಸೋಲಬೇಕು; ಒಳ್ಳೆ ಹುಡುಗ ಪ್ರಥಮ್
ಪಶ್ಚಿಮ ಬಂಗಾಳದಲ್ಲೂ ಇದೇ ಸ್ಥಿತಿ ಕಾಣಿಸುತ್ತಿದೆ. ಅಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಇಬ್ಭಾಗವಾಗಿದೆ. ಒಂದು ಬಲಿಷ್ಠ ಬಣ ಬಿಜೆಪಿಯತ್ತ ಚಲಿಸುತ್ತಿದೆ. ಈ ರಾಜಕೀಯ ಬಿಕ್ಕಟ್ಟನ್ನು ನಿಭಾಯಿಸಲು ಮಮತಾ ಅಸಫಲರಾಗಿದ್ದಾರೆ. ಬಿಜೆಪಿ ಹಾಗೂ ಕಮ್ಯು ನಿಸ್ಟ್ ಪಕ್ಷಗಳ ರಾಜಕಾರಣವವನ್ನು ವಿರೋಧಿಸುತ್ತಲೇ ಮಮತಾ ತಮ್ಮ ಪಕ್ಷವನ್ನು ಕಟ್ಟಿಕೊಂಡಿ ದ್ದಾರೆ.
ಇದೀಗ ಅವರ ವಿಚಾರಗಳಿಗೆ ಅವರ ಪಕ್ಷದಲ್ಲೇ ಯಾವ ಗೌರವವೂ ಇಲ್ಲದಂತಾಗಿದೆ. ಹಾಗೆಯೇ ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ತಮ್ಮದೇ ಆದ ಸಂಘಟನೆಯನ್ನು ಬಲಿಷ್ಠಗೊಳಿಸಲು, ಮುಂದೊಮ್ಮೆ ರಾಜಕೀಯಕ್ಕೆ ಇಳಿಸಲು ನಿರ್ಧರಿಸಿದಂತಿದೆ.
ಅವರಿಗೂ ಬಿಜೆಪಿಯ ಸಿದ್ಧಾಂತ ಬೇಡವಾಗಿದೆ. ಇನ್ನೊಂದು ಕಡೆಯಲ್ಲಿ ಹೊಸದಾಗಿ ಹುಟ್ಟಿ ಕೊಂಡಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಅದರ ನಾಯಕ ಅಭಿಜಿತ್ ದೀಪ್ಕೆ ನಾಯಕತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದೆ. ಮೋದಿ ಸರಕಾರದ ವಿರೋಧ ಎಂಬ ಒನ್‌ಲೈನ್ ಅಜೆಂಡಾ ಹೊರತುಪಡಿಸಿ ಇನ್ಯಾವುದೇ ಧ್ಯೇಯ ಆ ಸಂಘಟನೆಯಲ್ಲಿ ಇರುವಂತೆ ಕಾಣುತ್ತಿಲ್ಲ. ತತ್ವ- ಧ್ಯೇಯ- ಸಿದ್ಧಾಂತಗಳು ಅಧಿಕಾರ ಪಡೆಯುವವರೆಗೂ ಮಾತ್ರ, ಅದು ಸಿಗದೇ ಹೋದಲ್ಲಿ ಅವುಗಳಿಗೆ ಯಾವ ಅರ್ಥವೂ ಇಲ್ಲ ಎಂದು ತೀರ್ಮಾನಿಸಿದಾಗ ಇಂಥ ಕ್ಷಿಪ್ರ ಬೆಳವಣಿಗೆ ಗಳು ಸಂಭವಿಸುತ್ತವೆ.