ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಗುಡುಗಿನಲ್ಲಿದೆ ಪರೋಕ್ಷ ಸಂದೇಶ

ಕೆನಡಾ ದೇಶದ ಕನನಾ ಸ್ಕಿಸ್‌ನಲ್ಲಿ ಆಯೋಜಿಸಲಾಗಿರುವ ‘ಜಿ-7’ ದೇಶಗಳ ಶೃಂಗಸಭೆಗೆ ವಿಶೇಷ ಆಹ್ವಾನಿತರಾಗಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡು ವಾಗ, “ಭಯೋತ್ಪಾದನೆ ವಿರುದ್ಧ ಹೋರಾಡುವ ಬದಲಾಗಿ ಕೆಲವು ದೇಶಗಳು ಭಯೋತ್ಪಾದನೆಯ ಸೃಷ್ಟಿಕರ್ತ ದೇಶಕ್ಕೇ ನೆರವಾಗುವ ಮೂಲಕ ಇಬ್ಬಗೆ ನೀತಿಯನ್ನು ಅನುಸರಿಸುತ್ತಿವೆ" ಎಂಬ ಅಸಮಾ ಧಾನವನ್ನು ವ್ಯಕ್ತಪಡಿಸಿದ್ದಾರೆ.

ಗುಡುಗಿನಲ್ಲಿದೆ ಪರೋಕ್ಷ ಸಂದೇಶ

-

Ashok Nayak Ashok Nayak Jun 20, 2025 11:42 AM

ಕೆಲವೊಂದು ಕಾರ್ಯಸೂಚಿಗಳು ಪೂರ್ವನಿಗದಿತವೇ ಆಗಿದ್ದರೂ, ಆಯಾ ಸಂದರ್ಭಕ್ಕೆ ತಕ್ಕಂತೆ ‘ಕಾಕತಾಳೀಯತೆ’ಯನ್ನೂ ಧ್ವನಿಸುತ್ತವೆ ಎಂಬುದು ಸ್ವಾರಸ್ಯಕರ ಸಂಗತಿ. ಕೆನಡಾ ದೇಶದ ಕನನಾ ಸ್ಕಿಸ್‌ನಲ್ಲಿ ಆಯೋಜಿಸಲಾಗಿರುವ ‘ಜಿ-7’ ದೇಶಗಳ ಶೃಂಗಸಭೆಗೆ ವಿಶೇಷ ಆಹ್ವಾನಿತರಾಗಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, “ಭಯೋತ್ಪಾದನೆ ವಿರುದ್ಧ ಹೋರಾಡುವ ಬದಲಾಗಿ ಕೆಲವು ದೇಶಗಳು ಭಯೋತ್ಪಾದನೆಯ ಸೃಷ್ಟಿಕರ್ತ ದೇಶಕ್ಕೇ ನೆರವಾಗುವ ಮೂಲಕ ಇಬ್ಬಗೆ ನೀತಿಯನ್ನು ಅನುಸರಿಸುತ್ತಿವೆ" ಎಂಬ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಯಾವುದೇ ‘ನಿರ್ದಿಷ್ಟ’ ದೇಶದ ಹೆಸರನ್ನು ಉಲ್ಲೇಖಿಸಿಲ್ಲವಾದರೂ, ಅರಿವುಳ್ಳ ಜನರು ತಂತಮ್ಮ ಗ್ರಹಿಕೆಗೆ ತಕ್ಕಂತೆ ಇಂಥ ‘ಕೆಲವು’ ದೇಶಗಳ ಕಡೆಗೆ ಬೆರಳು ತಿರುಗಿಸಿಟ್ಟು ಕೊಂಡಿದ್ದಾರೆ. ಮತ್ತೊಂದೆಡೆ, ಸರಿಸುಮಾರು ಅದೇ ವೇಳೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ ಅಮೆರಿಕದ ಶ್ವೇತಭವನದಲ್ಲಿ ವಿಶೇಷ ಔತಣವನ್ನಿತ್ತು ಸತ್ಕರಿಸ ಲಾಗಿದೆ!

ಇದನ್ನೂ ಓದಿ: Vishwavani Editorial: ದುರಂತಗಳ ಸರಪಳಿ ತುಂಡಾಗಲಿ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪೈಶಾಚಿಕ ಕೃತ್ಯ ಮೆರೆದು 26 ಮಂದಿ ಅಮಾಯಕರ ಮಾರಣ ಹೋಮವನ್ನು ನಡೆಸುವುದಕ್ಕೆ ಚಿತಾವಣೆ ನೀಡಿದ್ದು ಇದೇ ಅಸೀಮ್ ಮುನೀರ್ ಅವರ ‘ಪರೋಕ್ಷ ಸಂದೇಶ ಭರಿತ’ ದ್ವೇಷಭಾಷಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಂಥವರಿಗೆ ಕೆಂಪುಹಾಸಿನ ಸ್ವಾಗತ ನೀಡಿ ಹೀಗೆ ಆತಿಥ್ಯ ನೀಡಿರುವ ಅಮೆರಿಕದ ವರ್ತನೆ ಅದರ ‘ಇಬ್ಬಗೆ ನೀತಿ’ಯ ಸ್ಪಷ್ಟ ಅಭಿವ್ಯಕ್ತಿಯಲ್ಲದೆ ಮತ್ತೇನು?! ಅಮೆರಿಕದ ವಾಣಿಜ್ಯ ಚಟುವಟಿಕೆಗಳ ಹೆಮ್ಮೆಯ ಭೌತಿಕ ಸಂಕೇತ ವೆನಿಸಿದ್ದ ‘ವರ್ಲ್ಡ್ ಟ್ರೇಡ್ ಸೆಂಟರ್’ನ ಅವಳಿ ಗೋಪುರಗಳನ್ನು ಮಣ್ಣು ಪಾಲಾಗಿಸಿದ್ದು ಭಯೋ ತ್ಪಾದಕರ ಕೃತ್ಯವೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಇಂಥ ಘೋರ-ಗಳಿಗೆಗೆ ಸಾಕ್ಷಿಯಾಗಿಯೂ ಅಮೆರಿಕವು ತನ್ನ ಅದ್ಯಾವುದೋ ಹಿತಾಸಕ್ತಿಯ ನೆರವೇರಿ ಕೆಗೆ ಮುನೀರ್ ಜತೆಗೆ ‘ಮುಚ್ಚಿದ ಬಾಗಿಲ ಔತಣಕೂಟ’ ನಡೆಸಿದ್ದು ನಗೆಪಾಟಲು. ಮನುಕುಲದ ಹಿತಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯವಾದಾಗ ಇಂಥ ಅಪಸವ್ಯ ನಡೆಯುತ್ತೇನೋ?!