Vinayaka Mathapathy Column: ಮಹಾ ಕುಂಭಮೇಳ: ಹೀಗೊಂದು ಫ್ಲ್ಯಾಷ್ ಬ್ಯಾಕ್!

ಕಣ್ಮುಂದೆಯೇ ಪುಟಾಣಿ ಮಕ್ಕಳು ಕಾಲ್ತುಳಿತಕ್ಕೆ ಕೆಸರಿಗೆ ಸೇರಿ ಮಣ್ಣಲ್ಲಿ ಮಣ್ಣಾದವು. “ಹರ ಹರ ಮಹಾದೇವ" ಎಂಬ ಜಯಘೋಷ ಮೊಳಗಬೇಕಿದ್ದ ಜಾಗದಲ್ಲಿ, ಮೃತ್ಯುಂಜಯ ಮಂತ್ರ ಜಪಿಸುವ ಪರಿಸ್ಥಿತಿ ಆ ಕ್ಷಣಕ್ಕೆ ಬಂದೊದಗಿತ್ತು

Nehru and Mahakumbha
Profile Ashok Nayak January 15, 2025

Source : Vishwavani Daily News Paper

ರಾಜಬೀದಿ

ವಿನಾಯಕ ಮಠಪತಿ

ನನ್ನನ್ನು ಉಳಿಸಿ, ನನ್ನನ್ನು ಉಳಿಸಿ" ಎಂಬ ಕೂಗು ಜೋರಾಗತೊಡಗಿತ್ತು. ಏನಾಗುತ್ತಿದೆ ಎಂದು ತಿಳಿಯುವಷ್ಟರ ನೂರಾರು ಜನ ಕೆಸರಿನಲ್ಲಿ ಸಿಲುಕಿ ನರಳಾಡತೊಡಗಿದ್ದರು. ಇನ್ನೂ ಹಲವರು ಜೀವ ರಕ್ಷಣೆಗೆ ವಿದ್ಯುತ್ ಕಂಬದ ತಂತಿಗೆ ಜೋತಾಡಿದರು.

ಕಣ್ಮುಂದೆಯೇ ಪುಟಾಣಿ ಮಕ್ಕಳು ಕಾಲ್ತುಳಿತಕ್ಕೆ ಕೆಸರಿಗೆ ಸೇರಿ ಮಣ್ಣಲ್ಲಿ ಮಣ್ಣಾದವು. “ಹರ ಹರ ಮಹಾದೇವ" ಎಂಬ ಜಯಘೋಷ ಮೊಳಗಬೇಕಿದ್ದ ಜಾಗದಲ್ಲಿ, ಮೃತ್ಯುಂಜಯ ಮಂತ್ರ ಜಪಿಸುವ ಪರಿಸ್ಥಿತಿ ಆ ಕ್ಷಣಕ್ಕೆ ಬಂದೊದಗಿತ್ತು. ವಿಪರ್ಯಾಸವೆಂದರೆ ಈ ದುರ್ಘ ಟನೆ ಸಂಭವಿಸಿದ್ದ ಕೊಂಚ ದೂರದಲ್ಲಿ ಭಾರತದ ಅಂದಿನ ಪ್ರಧಾನಿಯೂ ಹಾಜರಿದ್ದರು. ಈ ಘಟನೆ ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯದಂತೆ ಉಳಿದುಕೊಂಡಿದೆ.

ಅದು 1954ರ ಕಾಲಘಟ್ಟ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ ಪಡೆದಿದ್ದ ದೇಶಕ್ಕೆ ಹೊಸದಿಕ್ಕು ತೋರಿಸುವ ಉತ್ಸಾಹದಲ್ಲಿ ನಮ್ಮ ಜನರಿದ್ದರು. ಶತಮಾನಗಳಿಂದ ಅನುಭ ವಿಸಿದ್ದ ನೋವಿನಿಂದ ಹೊರಬಂದಿದ್ದ ಜನ, ಪರಂಪರೆ ಹಾಗೂ ಧಾರ್ಮಿಕ ಆಚರಣೆಯ ವೈಭವ ಹೊತ್ತು ಮೆರೆಸುವುದಕ್ಕೆ ಸಜ್ಜಾಗಿದ್ದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಂದಿನ ಅಲಹಾಬಾದ್ ನ ತ್ರಿವೇಣಿ ಸಂಗಮದಲ್ಲಿ ಸ್ವತಂತ್ರ ಭಾರತದ ಮೊದಲ ಮಹಾ ಕುಂಭಮೇಳ ಆಯೋಜನೆಗೊಂಡಿದ್ದಲ್ಲದೆ, ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಜನಸಾಗರ ಹರಿದುಬಂದಿತ್ತು.

1954ರ ಫೆಬ್ರವರಿಯಲ್ಲಿ 12 ವರ್ಷಗಳ ನಂತರದಲ್ಲಿ ಮಹಾ ಕುಂಭಮೇಳ ಆಯೋಜಿಸ ಲಾಗಿತ್ತು. ಫೆಬ್ರವರಿ 3ರಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಗಂಗಾ, ಯಮುನಾ ಹಾಗೂ ಸರಸ್ವತಿ ನದಿ ಸೇರುವ ಅಂದಿನ ಅಲಹಾಬಾದ್ ತ್ರಿವೇಣಿ ಸಂಗಮಕ್ಕೆ ಸುಮಾರು 40 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ಕುಂಭಮೇಳದ ಉಸ್ತುವಾರಿ ಹೊತ್ತಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಗೋವಿಂದ ವಲ್ಲಭ ಪಂತ್ ನೇತೃತ್ವದ ಸರಕಾರ

ಪೂರ್ವಸಿದ್ಧತೆ ವಿಷಯದಲ್ಲಿ ಎಡವಿತ್ತು.

ಜನರ ಪುಣ್ಯಸ್ನಾನಕ್ಕೆ ಸಹಕಾರಿಯಾಗುವ ಉದ್ದೇಶದಿಂದ ನಿರ್ಮಿಸಿದ್ದ ತಾತ್ಕಾಲಿಕ ಘಾಟ್‌ ಗಳು ಸಾವಿನ ಕೂಪವಾಗಿ ಮಾರ್ಪಾಡಾಗಿದ್ದವು. ಪರಿಸ್ಥಿತಿ ಕೈ ಮೀರುವ ಹೊತ್ತಿಗೆ ಸಾವಿನ ಸಂಖ್ಯೆ ಹೆಚ್ಚುತ್ತಾ ಸಾಗಿತ್ತು. ಈ ದಿನವೇ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರೂ ಆಗಮಿಸಿದ್ದರು.

ದೇಶದ ಪ್ರಧಾನಿ ಕುಂಭಮೇಳದ ಸ್ಥಳಕ್ಕೆ ಬರುತ್ತಾರೆ ಎಂದರೆ ರಾಜ್ಯ ಸರಕಾರಗಳು ಅದಕ್ಕೆ ತಕ್ಕ ಭದ್ರತೆಗಳನ್ನು ಮಾಡಿಕೊಳ್ಳುತ್ತವೆ. ಅದರಂತೆ ಅಂದಿನ ಪ್ರಧಾನಿ ನೆಹರು ಅವರ ಭದ್ರತೆಗೆ ಸಾಕಷ್ಟು ಒತ್ತು ನೀಡಲಾಗಿತ್ತು. ಜನರ ಭದ್ರತೆ ದೃಷ್ಟಿಯಲ್ಲಿ ಅಂದಿನ ಯುಪಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿತ್ತು. ನೋಡನೋಡುತ್ತಿದ್ದಂತೆ ಕುಂಭಮೇಳ ನಡೆಯುತ್ತಿದ್ದ ಜಾಗದಲ್ಲಿ ಕಾಲ್ತುಳಿತ ಪ್ರಾರಂಭವಾಗಿ, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಕೆಸರಿನಲ್ಲಿ ಸಿಲುಕಿ ನರಳಾಡಿ ಪ್ರಾಣ ಬಿಟ್ಟರು. ಇಲ್ಲಿ ಏನಾಗುತ್ತಿದೆ ಎಂದು ಅರಿಯುವ ಮೊದಲೇ ದುರ್ಘಟನೆ ಸಂಭವಿಸಿತು.

ಮೂಲಗಳ ಪ್ರಕಾರ 800 ಜನ ಪ್ರಾಣ ಕಳೆದುಕೊಂಡರೆ 2 ಸಾವಿರಕ್ಕೂ ಅಧಿಕ ಜನ ಗಾಯ ಗೊಂಡಿದ್ದರು. ಈ ದುರ್ಘಟನೆ ಹಲವು ವರ್ಷಗಳವರೆಗೆ ಭಕ್ತರನ್ನು ಇನ್ನಿಲ್ಲದಂತೆ ಕಾಡಿತ್ತು. ಕಾಲ್ತುಳಿತದ ಘಟನೆ ನಡೆದ ಸಂದರ್ಭದಲ್ಲಿ ಕೂದಲೆಳೆ ಅಂತರದ ಇದ್ದ ಪ್ರಧಾನಿ ನೆಹರು ನಂತರ ಸಂಸತ್ತಿನ ಒಳಗೆ ಹಾಗೂ ಹೊರಗೆ ವಿರೋಧಪಕ್ಷಗಳ ಆರೋಪಕ್ಕೆ ಗುರಿಯಾಗ ಬೇಕಾಯಿತು. ಈ ಸಂದರ್ಭದಲ್ಲಿ, ಕುಂಭಮೇಳ ಕಾಲ್ತುಳಿತ ದುರ್ಘಟನೆ ಕುರಿತು ರಾಜ್ಯಸಭೆ ಯಲ್ಲಿ ಮಾತನಾಡಿದ್ದ ಅವರು, ಘಟನೆ ಕುರಿತು ನೋವು ಹೊರಹಾಕಿದ್ದಲ್ಲದೆ, ಇದೊಂದು ರಾಷ್ಟ್ರೀಯ ದುರಂತ ಎಂದಿದ್ದರು.

ಒಂದು ನಿಮಿಷ ಮೌನಾಚರಣೆ ಮಾಡಿ, ನ್ಯಾಯಮೂರ್ತಿ ಕಮಲಾಕಾಂತ್ ವರ್ಮಾ ನೇತೃತ್ವದ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿದ್ದು ಬಿಟ್ಟರೆ ಮೃತಪಟ್ಟವರ ಕುಟುಂಬಕ್ಕೆ ಒಂದು ರುಪಾಯಿ ಪರಿಹಾರವನ್ನೂ ನೀಡದೆ ಸಂಪೂರ್ಣ ಘಟನೆಯನ್ನು ಮರೆಯ ಲಾಯ್ತು.

1954ರ ಮಹಾ ಕುಂಭಮೇಳದಲ್ಲಿ ನಡೆದ ದುರಂತದ ಕುರಿತು ಆ ದಿನಗಳಲ್ಲಿ ಅಷ್ಟೊಂದು ಚರ್ಚೆಗಳು ನಡೆಯಲಿಲ್ಲ. ಪಂಡಿತ್ ನೆಹರುರಂಥ ಮಹಾನ್ ನಾಯಕ ದೇಶದ ಪ್ರಧಾನಿ ಆಗಿದ್ದ ಕಾರಣಕ್ಕೋ ಏನೋ, ಈ ಸುದ್ದಿಯು ಪ್ರಾಮುಖ್ಯವನ್ನು ಪಡೆಯಲಿಲ್ಲ. ಮೃತಪಟ್ಟ ವರ, ಘಟನೆಯಲ್ಲಿ ಕಾಣೆಯಾದವರ ಕುಟುಂಬಗಳಿಗೆ ಕೊನೆಗೂ ತಮ್ಮವರ ಮುಖ ನೋಡುವ ಸೌಭಾಗ್ಯ ದೊರಕಲಿಲ್ಲ.

ಯಾವ ಸ್ಥಳದಲ್ಲಿ ಶಿವ ಸ್ಮರಣೆ ನಡೆಯಬೇಕಿತ್ತೋ, ಅದೇ ಸ್ಥಳದಲ್ಲಿ ಜನ ಯಾರz ತಪ್ಪಿ ನಿಂದ ಪ್ರಾಣ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಅಂದಿನ ಯುಪಿ ಸರಕಾರ ಮಾಡಿದ್ದ ಯಡವಟ್ಟಿನಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾದ ನೋವು ದೇಶದ ಜನರನ್ನು ಈಗಲೂ ಕಾಡುತ್ತಿದೆ.

1954ರ ಮಹಾ ಕುಂಭಮೇಳದ ಪ್ರತ್ಯಕ್ಷ ವರದಿ ಮಾಡಿದ್ದ ಪತ್ರಕರ್ತ ಎನ್.ಎನ್. ಮುಖರ್ಜಿ ಕಾಲ್ತುಳಿತದ ದುರ್ಘಟನೆ ಕುರಿತು ಅನೇಕ ಸಂದರ್ಭಗಳಲ್ಲಿ ಹೊರ ಜಗತ್ತಿಗೆ ಮಾಹಿತಿ ನೀಡಿzರೆ. ಕಾಲ್ತುಳಿತದ ಘಟನೆ ನಡೆದಾಗ ಇವರು ‘ಅಮೃತ್ ಬಜಾರ್’ ಎಂಬ ದಿನಪತ್ರಿಕೆ ಯಲ್ಲಿ ಛಾಯಾಗ್ರಾಹಕ ವೃತ್ತಿ ಮಾಡುತ್ತಿದ್ದರು.

ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಈ ಪತ್ರಿಕೆಯನ್ನು ವ್ಯಾಪಾರಿ ಹರಿನಾರಾಯಣ ಘೋಷ್ ಅವರ ಇಬ್ಬರು ಸುಪುತ್ರರು 1868ರಲ್ಲಿ ಪ್ರಾರಂಭಿಸಿದ್ದರು. ಅಲಹಾಬಾದ್ ಕುಂಭಮೇಳದಲ್ಲಿ ಉಂಟಾದ ದುರ್ಘಟನೆ ಕುರಿತು ‘ಅಮೃತ್ ಘೋಷ್’ ಪತ್ರಿಕೆಯಲ್ಲಿ ಪೋಟೋ ಸಮೇತ ವರದಿ ಪ್ರಕಟಿಸಿದ್ದು ಅಂದಿನ ಯುಪಿ ಸರಕಾರಕ್ಕೆ

ನುಂಗಲಾರದ ತುತ್ತಾಯಿತು. ಆದರೂ ನೂರಾರು ಜನ ಸಾವಿಗೀಡಾದ ದುರ್ಘಟನೆಯನ್ನು ದೇಶದ ಜನರಿಗೆ ತಿಳಿಯದಂತೆ ವ್ಯವಸ್ಥಿತವಾಗಿ ಮುಚ್ಚಿಹಾಕುವ ಪ್ರಯತ್ನಗಳು ನಡೆದಿದ್ದವು ಎಂದು ಹೇಳಲಾಗುತ್ತದೆ.

1989ರಲ್ಲಿ ನಿಯತಕಾಲಿಕ ಒಂದಕ್ಕೆ ಪತ್ರಕರ್ತ ಎನ್.ಎನ್. ಮುಖರ್ಜಿ ಬರೆದ ಬರಹದಲ್ಲಿ ಅಂದಿನ ಕಾಲ್ತುಳಿತದ ಘಟನೆ ಕುರಿತು ದಾಖಲಿಸಿzರೆ. ಪ್ರಧಾನಿ ನೆಹರು ಹಾಗೂ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಪವಿತ್ರ ಸ್ನಾನಕ್ಕೆಂದು ತ್ರಿವೇಣಿ ಸಂಗಮಕ್ಕೆ ಆಗಮಿಸಬೇಕಿತ್ತು. ಆ ಸಂದರ್ಭದಲ್ಲಿ ಪೊಲೀಸರು ಹಾಗೂ ಅಧಿಕಾರಿ ವರ್ಗದವರು ಅವರ ಸ್ವಾಗತಕ್ಕೆ ನಿಂತು ಕೊಂಡಿದ್ದರು.

ಮುಖಂಡರ ಕಾರು ಹೋಗಲು ತಡೆಗೋಡೆ ನಿರ್ಮಿಸಲಾಗಿತ್ತು. ಈ ಸಂದರ್ಭದಲ್ಲಿ ನೆಹರು ಹಾಗೂ ರಾಜೇಂದ್ರ ಪ್ರಸಾದ್ ಅವರ ಕಾರು ಹೋಗುತ್ತಿದ್ದಂತೆ ಜನಜಂಗುಳಿ ತಡೆಗೊಡೆ ಪಕ್ಕದಿಂದ ಓಡಿದ್ದರ ಪರಿಣಾಮ ಕಾಲ್ತುಳಿತ ಸಂಭವಿಸಿತ್ತು. ಮಹಿಳೆಯರು, ಮಕ್ಕಳು ನೆಲಕ್ಕೆ ಬಿದ್ದು ನರಳಾಡುವ ಸಂದರ್ಭದಲ್ಲಿ ಪೋಟೋ ಕ್ಲಿಕಿಸುತ್ತಿರುವಾಗ ತುಂಬಾ ನೋವಾಗು ತ್ತಿತ್ತು ಎಂದು ಮುಖರ್ಜಿ ತಮ್ಮ ಬರವಣಿಗೆಯಲ್ಲಿ ದಾಖಲಿಸಿದ್ದಾರೆ.

1954ರ ಅಲಹಾಬಾದ್ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದ ಘಟನೆಯಲ್ಲಿ ಸುಮಾರು 800ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದರು. ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಕೈಗೊಳ್ಳದ ಅಂದಿನ ಸರಕಾರ ಎಲ್ಲವನ್ನೂ ಒಟ್ಟುಗೂಡಿಸಿ ದಹನ ಮಾಡಿತ್ತು.

ಈ ಸಂದರ್ಭದಲ್ಲಿ ಯಾರೊಬ್ಬರಿಗೂ ಘಟನಾ ಸ್ಥಳಕ್ಕೆ ಪ್ರವೇಶ ನೀಡಿರಲಿಲ್ಲ. ಆದರೆ ಎನ್.ಎನ್. ಮುಖರ್ಜಿ, ತಮ್ಮ ಅಜ್ಜಿ ತೀರಿ ಹೋಗಿದ್ದು ಕೊನೆಯ ಬಾರಿ ಅವರ ಮುಖ ನೋಡುವುದಾಗಿ ಹೇಳಿ ಕಣ್ಣೀರು ಹಾಕಿದರು. ಇದಕ್ಕೆ ಅಧಿಕಾರಿಗಳು ಅವಕಾಶ ಕೊಟ್ಟಾಗ ಮೃತದೇಹಗಳ ರಾಶಿಯ ಕುರಿತು ಇವರು ನೆನಪಿಸಿಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರು 1954ರ ಕಾಲ್ತುಳಿತದ ಘಟನೆ ಉಖಿಸಿ 2019ರಲ್ಲಿ ಉತ್ತರ ಪ್ರದೇಶದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ್ದರು. ಪಂಡಿತ್ ನೆಹರು ಪ್ರಧಾನಿ ಆಗಿದ್ದ ಆ ಸಂದರ್ಭದಲ್ಲಿ ಪಂಚಾಯತಿಯಿಂದ ಹಿಡಿದು ದೆಹಲಿವರೆಗೆ

ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು. ಕುಂಭಮೇಳದಂಥ ಐತಿಹಾಸಿಕ ಕಾರ್ಯಕ್ರಮದಲ್ಲಿ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಸಾವಿರಾರು ಜನ ಪ್ರಾಣ ಕಳೆದುಕೊಂಡರೂ ನೆಹರು ಮೇಲೆ ಕಳಂಕ ಬರದಂತೆ ಸುದ್ದಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಯಿತು ಎಂದು ಮೋದಿ ಆರೋಪಿಸಿದ್ದರು.

2019ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆದಿದ್ದ ಕುಂಭಮೇಳಕ್ಕೆ ಯೋಗಿ ಸರಕಾರ ಕೈ ಗೊಂಡಿದ್ದ ತಯಾರಿ ಹಾಗೂ ಅಚ್ಚುಕಟ್ಟಾಗಿದ್ದ ಕಾರ್ಯಕ್ರಮ ಆಯೋಜನೆಯನ್ನು

ಶ್ಲಾಘಿಸಿ, ಅಂದಿನ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಉಂಟಾಗಿದ್ದ ದುರ್ಘಟನೆಯನ್ನು ಮೋದಿ ಕಟುವಾಗಿ ಟೀಕಿಸಿದ್ದರು.

ಭಾರತದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉಂಟಾದ ಕಾಲ್ತುಳಿತ ಸೇರಿದಂತೆ ಅನೇಕ ಅವಘಡಗಳಲ್ಲಿ ಸಾಕಷ್ಟು ಮಂದಿ ಮೃತಪಟ್ಟ ಘಟನೆಗಳು ಸಂಭವಿಸಿವೆ. 1986ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಸಂಭವಿಸಿದ್ದ ನೂಕುನುಗ್ಗಲಲ್ಲಿ 47 ಜನ ಸಾವನ್ನಪ್ಪಿದ್ದರು. 2003ರ ನಾಸಿಕ್ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ 39 ಜನ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೆ ದೇಶದ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಆಗಾಗ್ಗೆ ಈ ರೀತಿಯ ಅವಘಡಗಳು ನಡೆಯುತ್ತಿದ್ದು, ಆಳುವ ಸರಕಾರಗಳು ಈ ಕುರಿತು ಗಂಭೀರವಾಗಿ ಆಲೋಚಿಸಬೇಕಾದ ಅವಶ್ಯಕತೆ ಇದೆ.

ಪ್ರಸ್ತುತ, ಜನವರಿ 13ರಿಂದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳವನ್ನು ಆಯೋಜಿಸ ಲಾಗಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಯೋಗಿ ಆದಿತ್ಯನಾಥ ಅವರ ಸರಕಾರವು ಐತಿಹಾಸಿಕ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಈ ವರ್ಷದ ಕುಂಭಮೇಳದಲ್ಲಿ ಸುಮಾರು 45 ಕೋಟಿ ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು 50 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೆ ಬರುವ ಭಕ್ತಾದಿಗಳ ಅನುಕೂಲಕ್ಕೆ ತಾತ್ಕಾಲಿಕ ಟೆಂಟ್ ನಿರ್ಮಾಣ ಸೇರಿದಂತೆ ಅನೇಕ ತಯಾರಿಯನ್ನು ಮಾಡಿಕೊಳ್ಳಲಾಗಿದೆ.

ಇಡೀ ಜಗತ್ತು ಈ ಬಾರಿಯ ಐತಿಹಾಸಿಕ ಕುಂಭಮೇಳದ ಆಕರ್ಷಣೆಗೆ ಳಗಾಗಿರುವುದಂತೂ ಸತ್ಯ. ಭಾರತದ ಸನಾತನ ಸಂಸ್ಕೃತಿಯ ಶ್ರೀಮಂತಿಕೆ ಹೀಗೇ ಹಿರಿದಾಗುತ್ತಿರಲಿ, ಹಿಂದಿನ ಕಹಿ ಘಟನೆ ಮತ್ತೊಮ್ಮೆ ಮರುಕಳಿಸದಿರಲಿ ಎಂಬುದು ಅಸಂಖ್ಯಾತ ಭಾರತೀಯರ ಹಾರೈಕೆ.

(ಲೇಖಕರು ಪತ್ರಕರ್ತರು)

ಇದನ್ನೂ ಓದಿ: ಕಾಯಿದೆಗೆ ಬಲ ನೀಡಿ ಅನುಷ್ಠಾನ ಹುಸಿಗೊಳಿಸಿದರೆಂತಯ್ಯ?!

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ