ಅಂತ್ಯ ಹಾಡಲಿದೆ ಪುಟ್ಟಕ್ಕನ ಮಕ್ಕಳು; ಕಲಾವಿದರು ಭಾವುಕ!
Zee Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿರಿಯ ನಟಿ ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೊನೆಯ ದಿನದ ಚಿತ್ರೀಕರಣ ಮುಕ್ತಾಯವಾಗಿದೆ. ಪುಟ್ಟಕ್ಕನ ಮಕ್ಕಳು ಧಾರವಾಹಿ 1200 ಸಂಚಿಕೆಗಳನ್ನು ಪೂರ್ತಿ ಮಾಡಿದ ಖ್ಯಾತಿ ಸೀರಿಯಲ್ ಇದೆ. ಈ ಧಾರವಾಹಿಯಲ್ಲಿ ಏಕಾಂಗಿಯಾಗಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಬೆಳೆಸಿ ಸ್ವಾವಲಂಬಿಯಾಗಿ ಬದುಕುವ ಪುಟ್ಟಕ್ಕ ಎಂಬ ಛಲಗಾತಿ ಮಹಿಳೆಯ ಕತೆಯಿದೆ.