ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಯಕನಾಗಿ, ಆಟಗಾರನಾಗಿ ಅಜಿಂಕ್ಯ ರಹಾನೆ ದಾಖಲೆ ಪಟ್ಟಿ ಹೀಗಿವೆ

Ajinkya Rahane Retires: ಮುಂಬೈ ಬ್ಯಾಟ್ಸ್‌ಮನ್ ರಹಾನೆ, 15 ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 12 ಮತ್ತು ಏಕದಿನಗಳಲ್ಲಿ ಮೂರು. ಹಂಗಾಮಿ ನಾಯಕನಾಗಿ 11 ಪಂದ್ಯಗಳಲ್ಲಿ, ಆರು ಟೆಸ್ಟ್, ಮೂರು ಏಕದಿನ ಮತ್ತು ಎರಡು ಟಿ20ಐ ಭಾರತವನ್ನು ಮುನ್ನಡೆಸಿದರು. ಅವುಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಸೋಲು ಕಂಡಿದ್ದರು.

ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ ದಾಖಲೆಗಳು ಹೀಗಿವೆ

Ajinkya Rahane -

Abhilash BC
Abhilash BC Jul 30, 2026 1:05 PM

ಮುಂಬಯಿ, ಜು.30: ಒಂದು ದಶಕಕ್ಕೂ ಹೆಚ್ಚು ಕಾಲ ಭಾರತವನ್ನು ಎಲ್ಲಾ ಸ್ವರೂಪಗಳಲ್ಲಿ ಪ್ರತಿನಿಧಿಸಿದ ನಂತರ ಅಜಿಂಕ್ಯ ರಹಾನೆ ಗುರುವಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. 2011 ರಲ್ಲಿ ಇಂಗ್ಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಹಾನೆ, ಭಾರತ ಪರ 85 ಟೆಸ್ಟ್, 90 ಏಕದಿನ ಮತ್ತು 20 ಟಿ20ಐ ಪಂದ್ಯಗಳಲ್ಲಿ 8414 ರನ್ ಗಳಿಸಿದ್ದಾರೆ.

ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀನದದಲ್ಲಿ ಮುಂಬೈ ಬ್ಯಾಟ್ಸ್‌ಮನ್, 15 ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 12 ಮತ್ತು ಏಕದಿನಗಳಲ್ಲಿ ಮೂರು. ಹಂಗಾಮಿ ನಾಯಕನಾಗಿ 11 ಪಂದ್ಯಗಳಲ್ಲಿ, ಆರು ಟೆಸ್ಟ್, ಮೂರು ಏಕದಿನ ಮತ್ತು ಎರಡು ಟಿ20ಐ ಭಾರತವನ್ನು ಮುನ್ನಡೆಸಿದರು. ಅವುಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಸೋಲು ಕಂಡಿದ್ದರು. ರಹಾನೆ ಕೊನೆಯ ಬಾರಿಗೆ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ರಹಾನೆ ಆಟಗಾರನಾಗಿ ಮತ್ತು ನಾಯಕನಾಗಿ ಸಾಧಿಸಿದ ಸಾಧನೆಗಳ ಪಟ್ಟಿಯ ಕಿರು ವರದಿ ಇಲ್ಲಿದೆ.

ಅಜಿಂಕ್ಯ ರಹಾನೆ ಬ್ಯಾಟಿಂಗ್ ದಾಖಲೆಗಳು

ಸ್ವರೂಪ ಪಂದ್ಯ ಇನಿಂಗ್ಸ್ ರನ್‌ ಅತ್ಯಧಿಕ ರನ್‌
ಟೆಸ್ಟ್‌ 85 144 5077 188
ಏಕದಿನ 90 87 2962 111
ಟಿ20 20 20 375 61

ರಹಾನೆ ನಾಯಕತ್ವದಲ್ಲಿ ಭಾರತ ಆಡಿದ ಪಂದ್ಯಗಳ ಪೂರ್ಣ ಪಟ್ಟಿ

ಜಿಂಬಾಬ್ವೆ - ODI - ಜುಲೈ 10, 2015 - ಗೆಲುವು (4 ರನ್‌ಗಳು)

ಜಿಂಬಾಬ್ವೆ - ODI - ಜುಲೈ 12, 2015 - ಗೆಲುವು (62 ರನ್‌ಗಳು)

ಜಿಂಬಾಬ್ವೆ - ODI - ಜುಲೈ 14, 2015 - ಗೆಲುವು (83 ರನ್‌ಗಳು)

ಜಿಂಬಾಬ್ವೆ - T20I - ಜುಲೈ 17, 2015 - ಗೆಲುವು (54 ರನ್‌ಗಳು)

ಜಿಂಬಾಬ್ವೆ - T20I - ಜುಲೈ 19, 2015 - ಸೋಲು (10 ರನ್‌ಗಳು)

ಆಸ್ಟ್ರೇಲಿಯಾ - ಟೆಸ್ಟ್ - ಮಾರ್ಚ್ 25, 2017 - ಗೆಲುವು (8 ವಿಕೆಟ್‌ಗಳು)

ಅಫ್ಘಾನಿಸ್ತಾನ - ಟೆಸ್ಟ್ - 14 ಜೂನ್ 2018 - ಗೆಲುವು (ಇನ್‌ಗಳು ಮತ್ತು 262 ರನ್)

ಆಸ್ಟ್ರೇಲಿಯಾ - ಟೆಸ್ಟ್ - 26 ಡಿಸೆಂಬರ್ 2020 - ಗೆಲುವು (8 ವಿಕೆಟ್)

ಆಸ್ಟ್ರೇಲಿಯಾ - ಟೆಸ್ಟ್ - 07 ಜನವರಿ 2021 - ಡ್ರಾ

ಆಸ್ಟ್ರೇಲಿಯಾ - ಟೆಸ್ಟ್ - 15 ಜನವರಿ 2021 - ಗೆಲುವು (3 ವಿಕೆಟ್)

ನ್ಯೂಜಿಲೆಂಡ್ - ಟೆಸ್ಟ್ - 25 ನವೆಂಬರ್ 2021 - ಡ್ರಾ

ಮರೆಯಲಾಗದ ಮೆಲ್ಬೋರ್ನ್ ಟೆಸ್ಟ್‌

ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ 2020ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಡಿಲೇಡ್ ಓವಲ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್ನಿಗೆ ಆಲೌಟಾಗಿದ್ದ ಟೀಮ್ ಇಂಡಿಯಾ, ಮುಖಭಂಗಕ್ಕೆ ಒಳಗಾಗಿತ್ತು. ಇದು ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನ್ನಿಂಗ್ಸ್‌ವೊಂದರಲ್ಲಿ ದಾಖಲಾದ ಅತಿ ಕನಿಷ್ಠ ಮೊತ್ತವಾಗಿತ್ತು.

ಕಾಮನ್‌ವೆಲ್ತ್ ಲಾಂಗ್ ಜಂಪ್; ಮುರಳಿ ಶ್ರೀಶಂಕರ್ ಬೆಳ್ಳಿಯ ಜಿಗಿತ

ಪಿತೃತ್ವ ರಜೆಯ ಮೆರೆಗೆ ತವರಿಗೆ ಮರಳಿರುವ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಅಗ್ನಿ ಪರೀಕ್ಷೆಯನ್ನು ಅಜಿಂಕ್ಯ ರಹಾನೆ ಎದುರಿಸಿದ್ದರು. ಆದರೆ ತಮಗೆ ದೊರಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ರಹಾನೆ, ತಾವು ಏಕೆ ಶ್ರೇಷ್ಠ ಎಂಬುದನ್ನು ನಿರೂಪಿಸಿದ್ದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ತಂಡಕ್ಕೆ 8 ವಿಕೆಟ್‌ ಅಂತರದ ಗೆಲುವು ತಂದುಕೊಟ್ಟರು. ಮಾತ್ರವಲ್ಲದೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2–1 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು.