ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ ನೀರಜ್ ಚೋಪ್ರಾ
Commonwealth Games: ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿ 76.28 ಮೀ. ಎಸೆದರು. ಇದಾದ ಬಳಿಕ ಎರಡನೇ ಎಸೆತದಲ್ಲಿ 79.61 ಮೀ. ಎಸೆದು 5ನೇ ಸ್ಥಾನಕ್ಕೇರಿದರು. ಒಲಿಂಪಿನ್ ಚಾಂಪಿಯನ್, ಪಾಕಿಸ್ತಾನದ ಅರ್ಷದ್ ನದೀಮ್ 78.63ಮೀ ಏಳನೇ ಸ್ಥಾನಿಯಾದರು. ಫೈನಲ್ ಸ್ಪರ್ಧೆ ಶನಿವಾರ (ಆಗಸ್ಟ್ 1) ಭಾರತೀಯ ಕಾಲಮಾನ ಮಧ್ಯರಾತ್ರಿ 12.45 ಕ್ಕೆ ನಡೆಯಲಿದೆ.
Neeraj Chopra -
ಗ್ಲಾಸ್ಗೊ, ಜು.30: ಬಲವಾದ ಗಾಳಿಯ ಸವಾಲಿನ ಪರಿಸ್ಥಿತಿಯಲ್ಲಿ ಗುರುವಾರ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ 2026 ರ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನ ಪಂದ್ಯದಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಸೇರಿ ಮೂವರು ಭಾರತೀಯರು ಫೈನಲ್‌ಗೆ ಮುನ್ನಡೆದಿದ್ದಾರೆ.
ವಿಪರೀತ ಗಾಳಿ ಇದ್ದ ಕಾರಣ ಯಾವುದೇ ಕ್ರೀಡಾಪಟುವು ಸ್ವಯಂಚಾಲಿತ ಅರ್ಹತಾ ಅಂಕವಾದ 84 ಮೀಟರ್ ಅನ್ನು ಮೀರಲು ಸಾಧ್ಯವಾಗದ ಕಾರಣ 12 ಅತ್ಯುತ್ತಮ ಪ್ರದರ್ಶನ ನೀಡಿದವರು ಪದಕ ಸುತ್ತಿಗೆ ಅರ್ಹತೆ ಪಡೆದರು.
ನೀರಜ್ ಅರ್ಹತಾ ಸುತ್ತಿನಲ್ಲಿ 79.61 ಮೀಟರ್ ದೂರ ಎಸೆದು ಐದನೇ ಸ್ಥಾನ ಪಡೆದರು. ಶ್ರೀಲಂಕಾದ ರುಮೇಶ್ ತರಂಗ (82.84 ಮೀ) ಅಗ್ರಸ್ಥಾನ ಪಡೆದರು. ನೀರಜ್ ಹೊರತುಪಡಿಸಿ ಉಳಿದಿಬ್ಬರು ಭಾರತೀಯರಾದ ರೋಹಿತ್ ಯಾದವ್ (78.37 ಮೀ) ಮತ್ತು ಯಶ್ ವೀರ್ ಸಿಂಗ್ (78.36 ಮೀ) ಕೂಡ ಫೈನಲ್‌ಗೆ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡರು. ಅವರು ಕ್ರಮವಾಗಿ ಒಂಬತ್ತನೇ ಮತ್ತು 10 ನೇ ಸ್ಥಾನ ಪಡೆದರು.
ಕಾಮನ್‌ವೆಲ್ತ್ ಲಾಂಗ್ ಜಂಪ್; ಮುರಳಿ ಶ್ರೀಶಂಕರ್ ಬೆಳ್ಳಿಯ ಜಿಗಿತ
ನೀರಜ್ ತಮ್ಮ ಮೊದಲ ಪ್ರಯತ್ನದಲ್ಲಿ 76.28 ಮೀ. ಎಸೆದರು. ಇದಾದ ಬಳಿಕ ಎರಡನೇ ಎಸೆತದಲ್ಲಿ 79.61 ಮೀ. ಎಸೆದು 5ನೇ ಸ್ಥಾನಕ್ಕೇರಿದರು. ಒಲಿಂಪಿನ್ ಚಾಂಪಿಯನ್, ಪಾಕಿಸ್ತಾನದ ಅರ್ಷದ್ ನದೀಮ್ 78.63ಮೀ ಏಳನೇ ಸ್ಥಾನಿಯಾದರು.
ಅರ್ಹತಾ ಸುತ್ತಿನ ಅತಿದೊಡ್ಡ ಅಚ್ಚರಿಯೆಂದರೆ 2015 ರ ವಿಶ್ವ ಚಾಂಪಿಯನ್ ಮತ್ತು ರಿಯೊ 2016 ರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ 74.50 ಮೀಟರ್ ಎಸೆಯುವ ಮೂಲಕ 13 ನೇ ಸ್ಥಾನ ಗಳಿಸಿ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಶನಿವಾರ ಫೈನಲ್
ಫೈನಲ್ ಸ್ಪರ್ಧೆ ಶನಿವಾರ (ಆಗಸ್ಟ್ 1) ಭಾರತೀಯ ಕಾಲಮಾನ ಮಧ್ಯರಾತ್ರಿ 12.45 ಕ್ಕೆ ನಡೆಯಲಿದೆ.
ಫೈನಲ್‌ಗೆ ಅರ್ಹತೆ ಪಡೆದವರ ಪಟ್ಟಿ
ರುಮೇಶ್ ಪತಿರಗೆ (ಶ್ರೀಲಂಕಾ) - 82.84 ಮೀ.
ಆಂಡರ್ಸನ್ ಪೀಟರ್ಸ್ (ಜರ್ಮಿ) - 81.29 ಮೀ.
ಡೌ ಸ್ಮಿಟ್ (ದಕ್ಷಿಣ ಆಫ್ರಿಕಾ) - 80.64 ಮೀ.
ಬೆನ್ ಈಸ್ಟ್ (ಇಂಗ್ಲೆಂಡ್) - 80.38 ಮೀ.
ನೀರಜ್ ಚೋಪ್ರಾ (ಭಾರತ) - 79.61 ಮೀ.
ಕ್ಯಾಮೆರಾನ್ ಮೆಕ್‌ಎಂಟೈರ್ (ಆಸ್ಟ್ರೇಲಿಯಾ) - 78.91ಮೀ.
ಅರ್ಷದ್ ನದೀಮ್ (ಪಾಕಿಸ್ತಾನ) - 78.63ಮೀ.
ಕೀಶಾನ್ ಸ್ಟ್ರಾಚನ್ (ಬಹಮಿಯನ್) - 78.60ಮೀ.
ರೋಹಿತ್ ಯಾದವ್ (ಭಾರತ) - 78.37ಮೀ.
ಯಶ್ ವೀರ್ ಸಿಂಗ್ (ಭಾರತ)- 78.36 ಮೀ
ಕೆಶಾರ್ನ್ ವಾಲ್ಕಾಟ್ (TTO) - 78.26 ಮೀ
ಚಿನೆಚೆರೆಮ್ ನಾಮ್ಡಿ (ನೈಜೀರಿಯಾ) - 75.27 ಮೀ