IND vs AUS 2nd ODI: ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ
29 ವರ್ಷದ ಕೃಷ್ಣ ಇದುವರೆಗೆ ಭಾರತ ಪರ 17 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 29 ವಿಕೆಟ್ ಕಿತ್ತಿದ್ದಾರೆ. ಐಪಿಎಲ್ 2025 ರಲ್ಲಿ, ಕರ್ನಾಟಕ ಮೂಲದ ಕ್ರಿಕೆಟಿಗ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಇದೇ ವರ್ಷದ ಓವಲ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆರು ರನ್‌ಗಳ ಗೆಲುವಿನಲ್ಲಿ ಅವರು ದೊಡ್ಡ ಪಾತ್ರ ವಹಿಸಿದರು.

-

ಅಡಿಲೇಡ್: ಭಾನುವಾರ (ಅಕ್ಟೋಬರ್ 19) ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಸೋಲಿನ ನಂತರ, ಗುರುವಾರ (ಅಕ್ಟೋಬರ್ 23) ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ(IND vs AUS 2nd ODI) ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಮೊದಲ ಪಂದ್ಯಕ್ಕೆ ಕುಲ್‌ದೀಪ್ ಯಾದವ್ ಅವರನ್ನು ಕೈಬಿಡಲಾಗಿತ್ತು. ಈ ಬಗ್ಗೆ ಹಲವು ಮಾಜಿ ಆಟಗಾರರು ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ದ್ವಿತೀಯ ಪಂದ್ಯದಲ್ಲಿ ಕುಲ್‌ದೀಪ್ ಆಡುವ ಸಾಧ್ಯತೆ ಇದೆ. ಆದರೆ ಅವರಿಗಾಗಿ ಜಾಗ ಬೀಡುವವರು ಯಾರು ಎಂಬುದು ಸದ್ಯದ ಕುತೂಹಲ. ಸದ್ಯದ ಮಟ್ಟಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಡುವ ಸಾಧ್ಯತೆ ಎದ್ದು ಕಾಣುತ್ತಿದೆ. ಆದ್ಯಾಗೂ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಕೈಬಿಟ್ಟರೂ ಅಚ್ಚರಿಯಿಲ್ಲ.
ವೇಗಿ ಹರ್ಷಿತ್ ರಾಣಾ ಅವರನ್ನು ಈ ಪಂದ್ಯಕ್ಕೆ ಬೆಂಚ್ ಕಾಯಿಸುವ ಸಾಧ್ಯತೆ ಇದೆ. ದೆಹಲಿ ಮೂಲದ ವೇಗಿ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಸಂಪೂರ್ಣ ವಿಫಲರಾದ ನಂತರ ಅಭಿಮಾನಿಗಳು ಮತ್ತು ತಜ್ಞರಿಂದ ತೀವ್ರ ಟೀಕೆಗೆ ಗುರಿಯಾದರು. ಅಲ್ಲದೆ ಕೋಚ್ ಗಂಭೀರ್ ಮತ್ತು ನಾಯಕ ಗಿಲ್ ಕೂಡ ರಾಣ ಬೌಲಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಹೀಗಾಗಿ ಅವರ ಬದಲು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ತಂಡಕ್ಕೆ ಸೇರಿಸುವ ಸಾಧ್ಯತೆಯೂ ಇದೆ.
ಇದನ್ನೂ ಓದಿ AUS vs IND 2nd ODI: ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ಯಾವಾಗ?; ಮಳೆ ಭೀತಿ ಇದೆಯೇ?
29 ವರ್ಷದ ಕೃಷ್ಣ ಇದುವರೆಗೆ ಭಾರತ ಪರ 17 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 29 ವಿಕೆಟ್ ಕಿತ್ತಿದ್ದಾರೆ. ಐಪಿಎಲ್ 2025 ರಲ್ಲಿ, ಕರ್ನಾಟಕ ಮೂಲದ ಕ್ರಿಕೆಟಿಗ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. ಇದೇ ವರ್ಷದ ಓವಲ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆರು ರನ್‌ಗಳ ಗೆಲುವಿನಲ್ಲಿ ಅವರು ದೊಡ್ಡ ಪಾತ್ರ ವಹಿಸಿದರು. ಒಟ್ಟಾರೆ ಭಾರತ ಎರಡು ಬದಲಾವಣೆ ಮಾಡಲು ಮುಂದಾಗಿರುವುದಂತು ನಿಜ.
ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಕೂಡ ಭಾರತದ ಏಕದಿನ ತಂಡದ ಭಾಗವಾಗಿದ್ದಾರೆ, ಆದರೆ ಬ್ಯಾಟಿಂಗ್ ಘಟಕದಲ್ಲಿ ಯಾವುದೇ ಗಾಯದ ಸಮಸ್ಯೆ ಇಲ್ಲದಿರುವುದರಿಂದ ಅವರಿಗೆ ಅಡಿಲೇಡ್‌ನಲ್ಲಿ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ.