ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್ ಹರಾಜು ಪಟ್ಟಿಯಿಂದ 1000ಕ್ಕೂ ಹೆಚ್ಚು ಆಟಗಾರರನ್ನು ಕೈಬಿಟ್ಟ ಬಿಸಿಸಿಐ

IPL 2026 Mini Auction: ಹರಾಜಿನಲ್ಲಿ ಖರ್ಚು ಮಾಡಲು ತಂಡಗಳು ಒಟ್ಟು 237.55 ಕೋಟಿ ರೂ. ಮೊತ್ತವನ್ನು ಹೊಂದಿರುತ್ತವೆ. ಉಳಿಸಿಕೊಂಡ ನಂತರ, ಹರಾಜಿನಲ್ಲಿ ಗರಿಷ್ಠ 77 ಸ್ಥಾನಗಳನ್ನು ಭರ್ತಿ ಮಾಡಬಹುದು, ಅದರಲ್ಲಿ 31 ಸ್ಥಾನಗಳು ವಿದೇಶಿ ಆಟಗಾರರು ಸೇರಿದ್ದಾರೆ. ಒಂದೇ ದಿನದಲ್ಲಿ ಮಿನಿ ಹರಾಜು ನಡೆಯಲಿದೆ.

ಐಪಿಎಲ್ ಮಿನಿ ಹರಾಜಿಗೆ 350 ಆಟಗಾರರನ್ನು ಅಂತಿಮಗೊಳಿಸಿದ ಬಿಸಿಸಿಐ

IPL Auction -

Abhilash BC
Abhilash BC Dec 9, 2025 10:17 AM

ಮುಂಬಯಿ, ಡಿ.09: ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಸೀಸನ್-19ರ ಮಿನಿ ಹರಾಜು(IPL 2026 Mini Auction) ಪ್ರಕ್ರಿಯೆ ಡಿಸೆಂಬರ್‌ 16ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿವೆ. ಈಗಾಗಲೇ ಆಟಗಾರರ ನೋಂದಣಿ ಪ್ರಕ್ರಿಯೆ ಮುಗಿದಿದ್ದು, ಒಟ್ಟು 1355 ಆಟಗಾರರು ಹರಾಜಿಗಾಗಿ ಹೆಸರು ನೊಂದಣಿ ಮಾಡಿಕೊಂಡಿದ್ದರು. ಆದರೆ, ಬಿಸಿಸಿಐ(BCCI) ಈ ಪಟ್ಟಿಯಲ್ಲಿದ್ದ 1000ಕ್ಕೂ ಹೆಚ್ಚು ಆಟಗಾರರನ್ನು ಕೈ ಬಿಟ್ಟಿದೆ.

ಹರಾಜಿನಲ್ಲಿ ಖರ್ಚು ಮಾಡಲು ತಂಡಗಳು ಒಟ್ಟು 237.55 ಕೋಟಿ ರೂ. ಮೊತ್ತವನ್ನು ಹೊಂದಿರುತ್ತವೆ. ಉಳಿಸಿಕೊಂಡ ನಂತರ, ಹರಾಜಿನಲ್ಲಿ ಗರಿಷ್ಠ 77 ಸ್ಥಾನಗಳನ್ನು ಭರ್ತಿ ಮಾಡಬಹುದು, ಅದರಲ್ಲಿ 31 ಸ್ಥಾನಗಳು ವಿದೇಶಿ ಆಟಗಾರರು ಸೇರಿದ್ದಾರೆ. ಒಂದೇ ದಿನದಲ್ಲಿ ಮಿನಿ ಹರಾಜು ನಡೆಯಲಿದೆ.

ವರದಿಯ ಪ್ರಕಾರ 2026ರ ಆಟಗಾರರ ಅಂತಿಮ ಹರಾಜಿನ ಪಟ್ಟಿಯನ್ನು 350ಕ್ಕೆ ಇಳಿಸಿದೆ ಎನ್ನಲಾಗಿದೆ. ಮತ್ತು ಆರಂಭಿಕ ಪಟ್ಟಿಯಲಿಲ್ಲದ 35 ಹೊಸ ಆಟಗಾರರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಕ್ವಿಂಟನ್‌ ಡಿಕಾಕ್‌ ಮತ್ತು ಕ್ಯಾಮರೂನ್‌ ಗ್ರೀನ್‌ ಅವರ ಹೆಸರು ಅತ್ಯಂತ ಮಹತ್ವದ್ದಾಗಿದೆ. ಡಿಕಾಕ್‌ರನ್ನು ಕಳೆದ ಸೀಸನ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ 2 ಕೋಟಿಗೆ ಖರೀದಿಸಿತ್ತು. ಆದರೆ, ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಅವರನ್ನು ಕೈ ಬಿಡಲಾಗಿತ್ತು.

ಬಿಸಿಸಿಐ ಪ್ರಕಾರ, ಹರಾಜು ಪ್ರಕ್ರಿಯೆ ಆರಂಭವಾಗುವ ಮೊದಲು ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಪಟ್ಟಿ ಸಿದ್ಧಪಡಿಸುವ ನಿಯಮದಂತೆ ಕ್ರಮವಾಗಿ ಬ್ಯಾಟ್ಸ್‌ಮನ್‌ಗಳು, ಆಲ್‌ರೌಂಡರ್‌ಗಳು, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳು, ವೇಗದ ಬೌಲರ್‌ಗಳು ಮತ್ತು ಸ್ಪಿನ್ ಬೌಲರ್‌ಗಳನ್ನ ಪಟ್ಟಿ ಮಾಡಲಾಗುತ್ತದೆ. ಬಳಿಕ ಅನ್‌ಕ್ಯಾಪ್ಡ್‌ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹರಾಜಿನಲ್ಲಿ 350 ಆಟಗಾರರು ಭಾಗವಹಿಸಲಿದ್ದು, ಡಿಸೆಂಬರ್ 16 ಮಂಗಳವಾರ ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿದೆ.

ಇದನ್ನೂ ಓದಿ IPL 2026: ಡೆಲ್ಲಿ ಕ್ಯಾಪಿಟಲ್ಸ್‌ ನಾಯಕತ್ವವನ್ನು ನಿರಾಕರಿಸಿದ್ದೇಕೆಂದು ತಿಳಿಸಿದ ಕೆಎಲ್‌ ರಾಹುಲ್‌!

ಕೋಲ್ಕತ್ತಾ ನೈಟ್ ರೈಡರ್ಸ್, ಅತಿ ಹೆಚ್ಚು ಹಣದೊಂದಿಗೆ (INR 64.30) ಹರಾಜಿಗೆ ಪ್ರವೇಶಿಸಲಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ (INR 43.40 ಕೋಟಿ) ಎರಡನೇ ಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಈಗ 20 ಆಟಗಾರರನ್ನು ಹೊಂದಿದ್ದು, ಕಡಿಮೆ ಹಣದೊಂದಿಗೆ (INR 2.75 ಕೋಟಿ) ಹರಾಜಿಗೆ ಪ್ರವೇಶಿಸಲಿದೆ.

ಎಲ್ಲಾ 10 ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಹಣ

ಕೋಲ್ಕತ್ತಾ ನೈಟ್ ರೈಡರ್ಸ್: 64.3 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್: 43.4 ಕೋಟಿ

ಸನ್‌ರೈಸರ್ಸ್ ಹೈದರಾಬಾದ್: 25.5 ಕೋಟಿ

ಲಖನೌ ಸೂಪರ್ ಜಯಂಟ್ಸ್: 22.95 ಕೋಟಿ

ಡಲ್ಲಿ ಕ್ಯಾಪಿಟಲ್ಸ್: 21.8 ಕೋಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.4 ಕೋಟಿ

ರಾಜಸ್ಥಾನ್ ರಾಯಲ್ಸ್: 16.05 ಕೋಟಿ

ಗುಜರಾತ್ ಟೈಟನ್ಸ್: 12.9 ಕೋಟಿ

ಪಂಜಾಬ್ ಕಿಂಗ್ಸ್: 11.5 ಕೋಟಿ

ಮುಂಬೈ ಇಂಡಿಯನ್ಸ್: 2.75 ಕೋಟಿ