ದ್ವಿತೀಯ ಟೆಸ್ಟ್; ಇನಿಂಗ್ಸ್ ಸೋಲಿನ ಭೀತಿಯಲ್ಲಿ ಭಾರತ
New Zealand vs India 2nd Test: ಎರಡನೇ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ಗೆ ಜಸ್ಪ್ರೀತ್ ಬುಮ್ರಾ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಬುಮ್ರಾ ಎರಡು ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಿತ್ತರು.
New Zealand vs India -
ಕ್ರೈಸ್ಟ್ಚರ್ಚ್, ನ.29: ಭಾರತವನ್ನು ಮೊದಲ ಇನ್ನಿಂಗ್ಸ್ನಲ್ಲಿ 246 ರನ್ಗಳಿಗೆ ಆಲೌಟ್ ಮಾಡಿದ ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ನ್ಯತೂಜಿಲೆಂಡ್ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಒಟ್ಟಾರೆ ಮುನ್ನಡೆಯನ್ನು 243 ರನ್ಗಳಿಗೆ ಹೆಚ್ಚಿಸಿಕೊಂಡಿದೆ. ಪಂದ್ಯ ಮುಗಿಯಲು ಇನ್ನೂ ಎರಡು ದಿನಗಳು ಬಾಕಿ ಇರುವಂತೆಯೇ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
6 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ಧ್ರುವ್ ಜುರೆಲ್ ನೆರವಾದರು. ಜುರೆಲ್ 88 ರನ್ಗಳನ್ನು ಗಳಿಸುವ ಮೂಲಕ, ದಿನದ ಎರಡನೇ ಅವಧಿಯಲ್ಲೇ ಭಾರತವು 246 ರನ್ಗಳನ್ನು ತಲುಪಲು ನೆರವಾದರು. ಅಂತಿಮವಾಗಿ ಭಾರತವು 110 ರನ್ಗಳ ಹಿನ್ನಡೆಯೊಂದಿಗೆ 246 ರನ್ಗೆ ಆಲೌಟ್ ಆಯಿತಾದರೂ, ಜುರೆಲ್ ಅವರ ದಿಟ್ಟ ಹೋರಾಟ ಹಾಗೂ ಕೆಳ ಕ್ರಮಾಂಕದ ಆಟಗಾರರ ಕೊಡುಗೆಯು, ಪ್ರವಾಸಿ ತಂಡವು ಮತ್ತೆ ಪಂದ್ಯಕ್ಕೆ ಮರಳಲು ಸಹಾಯ ಮಾಡಿತು.
ತಲೆಗೆ ಚೆಂಡೇಟು; ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಬದಲಿ ಆಟಗಾರ
ಜುರೇಲ್ ಅವರೊಂದಿಗೆ ಎಂಟನೇ ವಿಕೆಟ್ಗೆ ನಿರ್ಣಾಯಕ ಜೊತೆಯಾಟದಲ್ಲಿ ಪಾಲ್ಗೊಂಡ ಆಕಾಶ್, 52 ಎಸೆತಗಳಲ್ಲಿ 29 ರನ್ ಗಳಿಸುವ ಮೂಲಕ ಬ್ಯಾಟಿಂಗ್ನಲ್ಲಿ ಅಮೂಲ್ಯ ಕೊಡುಗೆ ನೀಡಿದ್ದರು. ಆದರೆ ಕೈಲ್ ಜೇಮಿಸನ್ ಎಸೆದ ಬೌನ್ಸರ್ಗಳು ಆಕಾಶ್ ಅವರ ಹೆಲ್ಮೆಟ್ಗೆ ಒಂದೇ ಓವರ್ನಲ್ಲಿ ಎರಡು ಬಾರಿ ಬಡಿದ ಕಾರಣ 'ಕನ್ಕಷನ್' (ತಲೆಗೆ ಪೆಟ್ಟು ಬಿದ್ದ ಪರಿಣಾಮ ಉಂಟಾಗುವ ಸ್ಥಿತಿ) ಉಂಟಾಗಿ ಪಂದ್ಯದ ಉಳಿದ ಭಾಗದಿಂದ ಆಕಾಶ್ ದೀಪ್ ಹೊರಗುಳಿದಿದರು. ಅವರ ಬದಲಿಗೆ ಭಾನುವಾರದಂದು ಪ್ರಸಿದ್ಧ ಕೃಷ್ಣ ತಂಡವನ್ನು ಸೇರಿಕೊಂಡರು. ಆಕಾಶ್ದೀಪ್ ಮೊದಲ ಇನಿಂಗ್ಸ್ನಲ್ಲಿ ಬೌಲಿಂಗ್ನಲ್ಲಿಯೂ ನೆರವಾಗಿದ್ದ ಅವರು 5 ವಿಕೆಟ್ ಕಿತ್ತು ಮಿಂಚಿದ್ದರು.
Stumps on Day 3! Jasprit Bumrah and Washington Sundar with the wickets in the last session ☝️ Back tomorrow for the penultimate day of the series. Scorecard ▶️ https://t.co/6iCwvH4Zap #TeamIndia | #NZvIND https://t.co/YFd3nwaJeB
— BCCI (@BCCI) November 29, 2026
ನ್ಯೂಜಿಲೆಂಡ್ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ, 7ನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಭಾರತೀಯ ಆಟಗಾರರ ಪೈಕಿ, ಜುರೆಲ್ ಗಳಿಸಿದ 88 ರನ್ಗಳು ಎರಡನೇ ಅತಿ ಹೆಚ್ಚು ವೈಯಕ್ತಿಕ ಮೊತ್ತವಾಗಿದೆ. 2014ರಲ್ಲಿ ವೆಲ್ಲಿಂಗ್ಟನ್ನಲ್ಲಿ 118 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ಈ ದಾಖಲೆಯನ್ನು ಹೊಂದಿದ್ದಾರೆ. ಜುರೆಲ್ ಮತ್ತು ಬ್ರಾರ್ ನಡುವಿನ 64 ರನ್ಗಳ ಜೊತೆಯಾಟವು ಭಾರತದ ಪರ ಒಂಬತ್ತನೇ ವಿಕೆಟ್ಗೆ ದಾಖಲಾದ ಮೂರನೇ ಅತಿ ದೊಡ್ಡ ಜೊತೆಯಾಟವಾಗಿದೆ.
ಎರಡನೇ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ಗೆ ಜಸ್ಪ್ರೀತ್ ಬುಮ್ರಾ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಬುಮ್ರಾ ಎರಡು ವಿಕೆಟ್ ಪಡೆದರು. ವಾಷಿಂಗ್ಟನ್ ಸುಂದರ್ ಒಂದು ವಿಕೆಟ್ ಕಿತ್ತರು. ಡೆವೋನ್ ಕಾನ್ವೆ(51) ಅರ್ಧಶತಕ ಸಿಡಿಸಿದರು. ಸದ್ಯ ರಚಿನ್ ರವೀಂದ್ರ(46) ಮತ್ತು ಡೇರಿಯಲ್ ಮಿಚೆಲ್(5) ರನ್ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.