ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಿಳಾ ವಿಶ್ವಕಪ್‌ ಉದ್ಘಾಟನ ಪಂದ್ಯ ವೀಕ್ಷಿಸಿದ ನಿರಾಶ್ರಿತ ಆಘ್ಘಾನ್‌ ಮಹಿಳಾ ಕ್ರಿಕೆಟ್ ತಂಡ

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 8 ಅಗ್ಗಕ್ಕೆ ಔಟಾದರು. ಇವರ ಜತೆಗಾರ್ತಿ ಪ್ರತೀಕಾ ರಾವಲ್(37), ಹರ್ಲೀನ್ ಡಿಯೋಲ್(48) ರನ್‌ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಸ್ನೇಹಾ ರಾಣ ತಲಾ 2 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ ಅಜೇಯ 28 ರನ್‌ ಚಚ್ಚಿದರು.

ಭಾರತ-ಲಂಕಾ ವಿಶ್ವಕಪ್‌ ಪಂದ್ಯ ವೀಕ್ಷಿಸಿದ ಆಘ್ಘಾನ್‌ ಮಹಿಳಾ ಕ್ರಿಕೆಟ್ ತಂಡ

-

Abhilash BC Abhilash BC Sep 30, 2025 10:24 PM

ಗುವಾಹಟಿ: ಇಲ್ಲಿನ ಬರ್ಸಾಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ಮಹಿಳಾ ಏಕದಿನ ವಿಶ್ವಕಪ್‌ನ(ICC Women's World Cup 2025) ಭಾರತ ಮತ್ತು ಶ್ರೀಲಂಕಾ(INDW vs SLW) ನಡುವಿನ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಅಫ್ಘಾನಿಸ್ತಾನದ ನಿರಾಶ್ರಿತ ಮಹಿಳಾ ಕ್ರಿಕೆಟ್ ತಂಡ ಹಾಜರಿದ್ದರು. ತಾಲಿಬಾನ್‌ ಆಡಳಿತದಿಂದ ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಆಪ್ಘಾನ್‌ ಮಹಿಳಾ ತಂಡ(Afghanistan women's cricket team) ಕಲಿಕಾ ಪ್ರವಾಸಕ್ಕಾಗಿ ಗುವಾಹಟಿಗೆ ಭೇಟಿ ನೀಡಿದೆ.

ಅಫ್ಘಾನಿಸ್ತಾನ ಸರ್ಕಾರದಿಂದ ಯಾವುದೇ ಪ್ರತೀಕಾರವನ್ನು ತಪ್ಪಿಸಲು ಐಸಿಸಿ ಯಾವುದೇ ಅಧಿಕೃತ ಘೋಷಣೆ ಮಾಡದ ಕಾರಣ, ಅಫ್ಘಾನಿಸ್ತಾನದ ಆಟಗಾರರ ವಿಶ್ವಕಪ್ ಪ್ರವಾಸದ ವಿವರಗಳನ್ನು ರಹಸ್ಯವಾಗಿಡಲಾಗಿತ್ತು. ವಿಶ್ವಕಪ್ ಉದ್ಘಾಟನಾ ಪಂದ್ಯ ವೀಕ್ಷಿಸಿದ ಅಫ್ಘಾನ್ ತಂಡವು ಅವರನ್ನು ಜಾಗತಿಕ ಆಟಕ್ಕೆ ಸಂಯೋಜಿಸುವ ಮೊದಲ ಪ್ರಯತ್ನಗಳಲ್ಲಿ ಒಂದಾಗಿದೆ.



ಗರ್ಗ್‌ಗೆ ಶ್ರದ್ಧಾಂಜಲಿ

ಪಂದ್ಯ ಆರಂಭಕ್ಕೂ ಮುನ್ನ ನಡೆದ 40 ನಿಮಿಷಗಳ ಉದ್ಘಾಟನ ಸಮಾರಂಭದಲ್ಲಿ ಇತ್ತೀಚೆಗೆ ಮಡಿದ ಅಸ್ಸಾಂನ ಗಾಯ ಜಿಬೀನ್‌ ಗರ್ಗ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಳೆಯಿಂದ ಅಡಚಣೆಯಾಗಿ 47 ಓವರ್‌ಗೆ ಸೀಮಿತವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 8 ವಿಕೆಟ್‌ಗೆ 269 ರನ್‌ ಬಾರಿಸಿತು. ಡಕ್‌ವರ್ಕ್‌ ಲೂಯಿಸ್‌ ನಿಮದ ಅನ್ವಯ ಲಂಕಾಗೆ 271 ರನ್‌ ಗುರಿ ನಿಗದಿ ಮಾಡಲಾಯಿತು. ಭಾರತ ಪರ ಆಲ್‌ರೌಂಡರ್‌ಗಳಾದ ದೀಪ್ತಿ ಶರ್ಮಾ ಮತ್ತು ಅಮನ್‌ಜೋತ್ ಕೌರ್ ಅರ್ಧಶತಕ ಬಾರಿಸಿ ಮಿಂಚಿದರು. ದೀಪ್ತಿ 53 ರನ್‌ ಬಾರಿಸಿದರೆ, ಅಮನ್‌ಜೋತ್ 57 ರನ್‌ ಗಳಿಸಿದರು.

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 8 ಅಗ್ಗಕ್ಕೆ ಔಟಾದರು. ಇವರ ಜತೆಗಾರ್ತಿ ಪ್ರತೀಕಾ ರಾವಲ್(37), ಹರ್ಲೀನ್ ಡಿಯೋಲ್(48) ರನ್‌ ಬಾರಿಸಿದರು. ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಸ್ನೇಹಾ ರಾಣ ತಲಾ 2 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ ಅಜೇಯ 28 ರನ್‌ ಚಚ್ಚಿದರು.