ಭಾರತ- ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ಕಾಮೆಂಟರಿ
Ajinkya Rahane Set For Commentary: ಒಂದು ದಶಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ರಹಾನೆ, ತಮ್ಮ ಬ್ಯಾಟಿಂಗ್ ತಂತ್ರ, ಮೈದಾನದಲ್ಲಿ ಸಂಯಮ ಮತ್ತು ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಭಾರತದ ಪರ 85 ಟೆಸ್ಟ್, 90 ಏಕದಿನ ಮತ್ತು 20 ಟಿ–20 ಪಂದ್ಯಗಳನ್ನು ಆಡಿರುವ ಅವರು, ಎಲ್ಲಾ ಮಾದರಿಗಳಿಂದ ಒಟ್ಟು 8,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ.
Ajinkya Rahane Set For Commentary -
ಮುಂಬಯಿ, ಆ.13: ಇತ್ತೀಚೆಗಷ್ಟೇ ಎಲ್ಲ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿರುವ 37 ವರ್ಷದ ಅಜಿಂಕ್ಯ ರಹಾನೆ ತಮ್ಮ ಕ್ರಿಕೆಟ್ ಜತೆಗಿನ ನಂಟನ್ನು ಮುಂದುವರಿಸಲಿದ್ದಾರೆ. ಇದೀಗ ಹೊಸ ಪಾತ್ರದೊಂದಿಗೆ ಟೆಸ್ಟ್ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಗಾಲೆಯಲ್ಲಿ ನಡೆಯಲಿರುವ ಭಾರತ-ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಅವರು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ (Sony Sports Network) ವೀಕ್ಷಕ ವಿವರಣೆಕಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ರಹಾನೆ ಈಗಾಗಲೆ ಇಂಗ್ಲೆಂಡ್ನ ದಿ ಹಂಡ್ರೆಡ್ ಲೀಗ್ ಮೂಲಕ ವೀಕ್ಷಕ ವಿವರಣೆಕಾರರಾಗಿ ಪದಾರ್ಪಣೆ ಮಾಡಿದ್ದಾರೆ.
"ಟೆಸ್ಟ್ ಕ್ರಿಕೆಟ್ ನಮ್ಮ ಆಟದ ಉತ್ತುಂಗದ ಪ್ರಕಾರವಾಗಿದೆ. ಇದರಲ್ಲಿ ಭಾರತವನ್ನು ಹಲವು ವರ್ಷಗಳ ಕಾಲ ಪ್ರತಿನಿಧಿಸುವ ಸೌಭಾಗ್ಯ ನನ್ನದಾಗಿತ್ತು. ಈಗ ಇದೇ ಆಟವನ್ನು ಭಿನ್ನವಾದ ದೃಷ್ಟಿಕೋನದಿಂದ ನೋಡಲಿದ್ದೇನೆ' ಎಂದು ರಹಾನೆ ತಿಳಿಸಿದ್ದಾರೆ.
ಭಾರತೀಯ ಪುರುಷರ ಕ್ರಿಕೆಟ್ ತಂಡವು ಆಗಸ್ಟ್ 15 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಸರಣಿಯ ಆರಂಭಿಕ ಪಂದ್ಯವು ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಆಗಸ್ಟ್ 23 ರಿಂದ 27 ರವರೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಲಂಕಾ ಸರಣಿ ಭಾರತದ ಪಾಲಿಗೆ ಸ್ಮರಣೀಯವಾಗಿದೆ.
ಒಂದು ದಶಕ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ರಹಾನೆ, ತಮ್ಮ ಬ್ಯಾಟಿಂಗ್ ತಂತ್ರ, ಮೈದಾನದಲ್ಲಿ ಸಂಯಮ ಮತ್ತು ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಭಾರತದ ಪರ 85 ಟೆಸ್ಟ್, 90 ಏಕದಿನ ಮತ್ತು 20 ಟಿ–20 ಪಂದ್ಯಗಳನ್ನು ಆಡಿರುವ ಅವರು, ಎಲ್ಲಾ ಮಾದರಿಗಳಿಂದ ಒಟ್ಟು 8,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ.
600ನೇ ಟೆಸ್ಟ್ ಆಡಲಿರುವ ಭಾರತ ತಂಡ; ವಿಶ್ವ ದಾಖಲೆ ಯಾರ ಹೆಸರಿನಲ್ಲಿದೆ?
ರಹಾನೆ ಅವರ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯಂತ ಸ್ಮರಣೀಯ ಕ್ಷಣವೆಂದರೆ 2020-21ರ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿ. ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದ ಕಂಗೆಟ್ಟಿದ್ದ ಯುವ ಭಾರತೀಯ ತಂಡವನ್ನು ಮುನ್ನಡೆಸಿದ ರಹಾನೆ, ಅಲ್ಲಿ ಶತಕ ಸಿಡಿಸುವುದರೊಂದಿಗೆ ತಂಡವನ್ನು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆಸಿದ್ದರು.
ಬ್ಯಾಟಿಂಗ್ ಮಾತ್ರವಲ್ಲದೆ, ಸ್ಲಿಪ್‌ನಲ್ಲಿ ಅವರು ತೋರುತ್ತಿದ್ದ ಕ್ಯಾಚಿಂಗ್ ಕೌಶಲ ತಂಡದ ಗೆಲುವಿನ ಬಲವನ್ನು ಹೆಚ್ಚಿಸಿತ್ತು. ತಾಳ್ಮೆ, ಒತ್ತಡದ ಸಂದರ್ಭದಲ್ಲಿ ಸಂಯಮ, ತಮ್ಮ ನಾಯಕತ್ವ ಗುಣ ಮತ್ತು ನಿಸ್ವಾರ್ಥ ಆಟದ ಮೂಲಕ ರಹಾನೆ ಭಾರತೀಯ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.