ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪಂತ್ ಕಳಪೆ ಪ್ರದರ್ಶನ ಕಂಡು ಲೈವ್​ನಲ್ಲೇ ಟಿವಿ ಒಡೆದು ಹಾಕಿದ ನಿರೂಪಕ

viral video: ಪಂತ್‌ ಪ್ರದರ್ಶನದ ಬಗ್ಗೆಯೂ ಕಿಡಿಕಾರಿದ ನಿರೂಪಕ ಪಂಕಜ್, ರಿಷಭ್ ಪಂತ್‌ ಆಟ ಹೇಗಿರುತ್ತದೆ ಎಂಬುದನ್ನು ಮೊದಲೇ ಊಹಿಸಬಹುದಾಗಿದೆ. ನೀವು ಅವರನ್ನು ನಂಬಲು ಸಾಧ್ಯವಿಲ್ಲ. ಅವರು ನಾಯಕತ್ವಕ್ಕೆ ಅನ್‌ಫಿಟ್‌! ನಮಗೆ ಅವರಂತಹ ನಾಯಕ ಅಗತ್ಯವಿಲ್ಲ ಎಂದರು.

ಪಂತ್ ಕಳಪೆ ಪ್ರದರ್ಶನ ಕಂಡು ಲೈವ್​ನಲ್ಲೇ ಟಿವಿ ಒಡೆದು ಹಾಕಿದ ನಿರೂಪಕ

Profile Abhilash BC Mar 28, 2025 4:41 PM

ಮುಂಬಯಿ: ಕಳೆದ ವರ್ಷ ನಡೆದಿದ್ದ ಐಪಿಎಲ್‌(IPL 2025) ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗಳ ಬೃಹತ್‌ ಮೊತ್ತಕ್ಕೆ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಮಾರಾಟವಾಗಿದ್ದ ರಿಷಭ್‌ ಪಂತ್‌ ಆಡಿದ ಎರಡೂ ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ತೋರಿದ್ದಾರೆ. ಅವರ ಈ ಪ್ರದರ್ಶನ ಕಂಡು ನಿರಾಶೆಗೊಂಡ ನಿರೂಪಕನೋರ್ವ ಸಿಟ್ಟಿನಿಂದ ಟೆಲಿವಿಷನ್ ಸೆಟ್ ಅನ್ನು ಒಡೆದು ಹಾಕಿದ ಘಟನೆಯೊಂದು ನಡೆದಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(viral video) ಆಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಪಂತ್‌ ವಿಕೆಟ್‌ ಕೀಪಿಂಗ್‌ನಲ್ಲಿಯೂ ಎಡವಿ ಪಂದ್ಯ ಸೋಲಿಗೆ ಕಾರಣರಾಗಿದ್ದರು. ಗುರುವಾರ ನಡೆದ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಲಕ್ನೋ ಗೆಲುವು ಸಾಧಿಸಿದರೂ ಪಂತ್‌ ನಿರೀಕ್ಷಿತ ಬ್ಯಾಟಿಂಗ್‌ ನಡೆಸಿರಲಿಲ್ಲ. 15 ಎಸೆತದಿಂದ 15 ರನ್‌ ಮಾತ್ರ ಗಳಿಸಿದ್ದರು.

ಇದನ್ನೂ ಓದಿ IPL 2025 Points Table: ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

ಪಂದ್ಯದ ಬಳಿಕ ಹಿರಿಯ ಕ್ರೀಡಾ ಪತ್ರಕರ್ತ ವಿಕ್ರಾಂತ್ ಗುಪ್ತಾ ಮತ್ತು ಕೆಲ ಕ್ರಿಕೆಟ್‌ ತಜ್ಞರು ಚರ್ಚೆ ನಡೆಸುತ್ತಿದ್ದರು. ಪಂತ್‌ ವಿಚಾರ ಕೂಡ ಚರ್ಚೆಗೆ ಬಂತು. ಈ ವೇಳೆ ಕ್ರೀಡಾ ನಿರೂಪಕ ಪಂಕಜ್, ತಾಳ್ಮೆ ಕಳೆದುಕೊಂಡು ಟಿವಿ ಪರದೆ ಒಡೆದು ಹಾಕಿ ತಮ್ಮ ಮುಂದಿದ್ದ ಗಾಜಿನ ಮೇಜನ್ನು ಕೂಡ ತಳ್ಳಿ ತಮ್ಮ ಸಿಟ್ಟನನ್ನು ಹೊರಹಾಕಿದ್ದಾರೆ. ಈ ವಿಡಿಯೊ ವೈರಲ್‌ ಆಗಿದ್ದು ನೆಟ್ಟಿಗರು ಹಲವು ರೀತಿಯ ಕಮೆಂಟ್‌ ಮಾಡಲಾರಂಭಿಸಿದ್ದಾರೆ. ನೀವು ಲಕ್ನೋ ತಂಡದ ಮಾಲಕ ಸಂಜೀವ್ ಗೋಯೆಂಕಾ ಅವರನ್ನು ಕೂಡ ಮೀರಿಸಿದ್ದೀರಿ ಎಂದು ತಮಾಷೆ ಮಾಡಿದ್ದಾರೆ.



ಪಂತ್‌ ಪ್ರದರ್ಶನದ ಬಗ್ಗೆಯೂ ಕಿಡಿಕಾರಿದ ನಿರೂಪಕ ಪಂಕಜ್, ರಿಷಭ್ ಪಂತ್‌ ಆಟ ಹೇಗಿರುತ್ತದೆ ಎಂಬುದನ್ನು ಮೊದಲೇ ಊಹಿಸಬಹುದಾಗಿದೆ. ನೀವು ಅವರನ್ನು ನಂಬಲು ಸಾಧ್ಯವಿಲ್ಲ. ಅವರು ನಾಯಕತ್ವಕ್ಕೆ ಅನ್‌ಫಿಟ್‌! ನಮಗೆ ಅವರಂತಹ ನಾಯಕ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ IPL 2025: ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ ತಮ್ಮ ನೆಚ್ಚಿನ 4 ತಂಡಗಳನ್ನು ಆರಿಸಿದ ಇರ್ಫಾನ್‌ ಪಠಾಣ್‌!

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಪಂತ್‌ಗೆ ಮೋಹಿತ್‌ ಶರ್ಮ ಅವರನ್ನು ಸುಲಭವಾಗಿ ಸ್ಟಂಪ್‌ ಔಟ್‌ ಮಾಡುವ ಅವಕಾಶವಿತ್ತು. ಆದರೆ ಅವರು ಎರಡವಟ್ಟು ಮಾಡಿದ ಪರಿಣಾಮ ಪಂದ್ಯ ಸೋಲಿಗೆ ತುತ್ತಾಯಿತು. ಅದಲ್ಲದೆ ಎರಡು ವಿಕೆಟ್‌ ಕೆಡವಿದ್ದ ಶಾರ್ದೂಲ್‌ ಠಾಕೂರ್‌ ಅವರನ್ನು ಕೇವಲ 2 ಓವರ್‌ಗೆ ಸೀಮಿತಗೊಳಿಸಿದ್ದು ಕೂಡ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿತ್ತು. ಒಂದೊಮ್ಮೆ ಪಂತ್‌ ಶಾರ್ದೂಲ್‌ಗೆ ನಾಲ್ಕು ಓವರ್‌ ಕೋಟ ನೀಡುತ್ತಿದ್ದರೆ ಪಂದ್ಯ ಗೆಲ್ಲುವ ಸಾಧ್ಯತೆಯೂ ಇತ್ತು.