ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Points Table: ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

SRH vs LSG: ಇಶಾನ್‌ ಕಿಶನ್‌ ಅವರನ್ನು ಹಿಂದಿಕ್ಕುವ ಮೂಲಕ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಿಕೋಲಸ್‌ ಪೂರಣ್‌(145 ರನ್‌) ಆರೆಂಜ್‌ ಕ್ಯಾಪ್‌ ತನ್ನದಾಗಿಸಿಕೊಂಡಿದ್ದಾರೆ. ಇಶಾನ್‌ ನಿನ್ನೆ(ಗುರುವಾರ)ಯ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದ್ದರು.

ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ

Profile Abhilash BC Mar 28, 2025 9:14 AM

ಹೈದರಾಬಾದ್‌: ಗುರುವಾರ ನಡೆದಿದ್ದ ಐಪಿಎಲ್‌(IPL 2025) ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಬಲಿಷ್ಠ ಸನ್‌ರೈಸರ್ಸ್‌ ಹೈದರಾಬಾದ್‌(SRH vs LSG) ವಿರುದ್ಧ 5 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದ ಪರಿಣಾಮ ಅಂಕಪಟ್ಟಿಯಲ್ಲಿ(IPL 2025 Points Table) ಮಹತ್ವದ ಬದಲಾವಣೆ ಸಂಭವಿಸಿದೆ. ಅಗ್ರಸ್ಥಾನಿಯಾಗಿದ್ದ ಹೈದರಾಬಾದ್‌ ಸೋಲಿನಿಂದ ಏಕಾಏಕಿ 6ನೇ ಸ್ಥಾನಕ್ಕೆ ಕುಸಿದರೆ, ಲಕ್ನೋ ಸೂಪರ್‌ ಜೈಂಟ್ಸ್‌ 7ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಆರ್‌ಸಿಬಿ ಅಗ್ರಸ್ಥಾನ ಪಡೆದಿದೆ.

ಈ ಹಿಂದೆ 6ನೇ ಸ್ಥಾನದಲ್ಲಿದ್ದ ಕೆಕೆಆರ್‌ ಒಂದು ಸ್ಥಾನದ ನಷ್ಟದೊಂದಿಗೆ 7ಕ್ಕೆ ಕುಸಿದಿದೆ. ರಾಜಸ್ಥಾನ್‌ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ. ಇಂದು ನಡೆಯುವ ಚೆನ್ನೈ ಮತ್ತು ಆರ್‌ಸಿಬಿ ನಡುವಣ ಪಂದ್ಯದಲ್ಲಿ ಚೆನ್ನೈ ಗೆದ್ದರೆ ಅಗ್ರಸ್ಥಾನ ಪಡೆಯಲಿದೆ. ಸದ್ಯ ಚೆನ್ನೈ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ಈಗಾಗಲೇ ಅಗ್ರಸ್ಥಾನದಲ್ಲಿರುವ ಕಾರಣ ಗೆದ್ದರೆ ತನ್ನ ಸ್ಥಾನ ಮತ್ತಷ್ಟು ಗಟ್ಟಿಯಾಗಲಿದೆ.

ಆರೆಂಜ್‌ ಕ್ಯಾಪ್‌

ಇಶಾನ್‌ ಕಿಶನ್‌ ಅವರನ್ನು ಹಿಂದಿಕ್ಕುವ ಮೂಲಕ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಿಕೋಲಸ್‌ ಪೂರಣ್‌(145 ರನ್‌) ಆರೆಂಜ್‌ ಕ್ಯಾಪ್‌ ತನ್ನದಾಗಿಸಿಕೊಂಡಿದ್ದಾರೆ. ಇಶಾನ್‌ ನಿನ್ನೆ(ಗುರುವಾರ)ಯ ಪಂದ್ಯದಲ್ಲಿ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದ್ದರು.

ಇದನ್ನೂ ಓದಿ RCB vs CSK: ವಿರಾಟ್‌ ಕೊಹ್ಲಿ ಜತೆಗಿನ ತರಬೇತಿಯ ಅನುಭವ ತೆರೆದಿಟ್ಟ ಜಾಶ್‌ ಹೇಝಲ್‌ವುಡ್‌!

ಪರ್ಪಲ್‌ ಕ್ಯಾಪ್‌

ಹೈದರಾಬಾದ್‌ ವಿರುದ್ಧ ಅಮೋಘ ಬೌಲಿಂಗ್‌ ಪ್ರದರ್ಶನ ತೋರುವ ಮೂಲಕ 4 ವಿಕೆಟ್‌ ಕಿತ್ತ ಶಾರ್ದೂಲ್‌ ಠಾಕೂರ್‌(6) ಅತ್ಯಧಿಕ ವಿಕೆಟ್‌ ಕೀಳುವ ಮೂಲಕ ಪರ್ಪಲ್‌ ಕ್ಯಾಪ್‌ ತನ್ನದಾಗಿಸಿಕೊಂಡಿದ್ದಾರೆ. ಇಂದು ಆರ್‌ಸಿಬಿ ವಿರುದ್ಧ ನೂರ್‌ ಅಹ್ಮದ್‌ ಮೂರು ವಿಕೆಟ್‌ ಕಿತ್ತರೆ ಈ ಕ್ಯಾಚ್‌ ಅವರ ಪಾಲಾಗಲಿದೆ. ನೂರ್‌ ಸದ್ಯ 4 ವಿಕೆಟ್‌ ಕಿತ್ತಿದ್ದಾರೆ.