ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊರಿಯಾ ಮಾಸ್ಟರ್ಸ್; ಫೈನಲ್‌ ಪ್ರವೇಶಿಸಿದ ಅಶ್ಮಿತಾ ಚಲಿಹಾ

Korea Masters 2026: ರಕ್ಷಿತಾ ವಿರುದ್ಧ ಮೊದಲ ಗೇಲ್‌ನಲ್ಲಿ ಹಿಡಿತ ಸಾಧಿಸಿದ ಅಶ್ಮಿತಾ 21-13 ರಿಂದ ಪಂದ್ಯವನ್ನು ಮುಗಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗಿ ಬಿದ್ದ ರಕ್ಷಿತಾ 21-16 ಅಂತರದಿಂದ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯ ಮೂರನೇ ಸುತ್ತಿನ ಗೇಮ್‌ನಲ್ಲಿ ಮತ್ತೆ ಪುಡಿದೆದ್ದ ಅಶ್ಮಿತಾ, ಮೊದಲ ಗೇಮ್‌ನಂತೆ 21-13 ರಿಂದ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಮುನ್ನಡೆದರು.

ಕೊರಿಯಾ ಮಾಸ್ಟರ್ಸ್; ಫೈನಲ್‌ ಪ್ರವೇಶಿಸಿದ ಅಶ್ಮಿತಾ ಚಲಿಹಾ

Ashmita Chaliha -

Abhilash BC
Abhilash BC Aug 8, 2026 2:51 PM

ಅಸಾನ್‌ (ದಕ್ಷಿಣ ಕೊರಿಯಾ), ಆ.8: ಇಕ್ಸಾನ್‌ನಲ್ಲಿ ನಡೆದ ಕೊರಿಯಾ ಮಾಸ್ಟರ್ಸ್ ಸೂಪರ್ 300 ಟೂರ್ನಿಯ 48 ನಿಮಿಷಗಳ ಸೆಮಿಫೈನಲ್ ಕಾದಾಟದಲ್ಲಿ ತನ್ನದೇ ದೇಶದ ರಕ್ಷಿತಾ ಶ್ರೀ ಸಂತೋಷ್ ರಾಮರಾಜ್ ಅವರನ್ನು ಮಣಿಸುವ ಮೂಲಕ ಅಶ್ಮಿತಾ ಚಲಿಹಾ ಫೈನಲ್‌ ಪ್ರವೇಶಿಸಿದರು.

ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದಲ್ಲಿ ಅಶ್ಮಿತಾ 21-13, 16-21, 21-13 ಗೆಲುವು ಸಾಧಿಸಿದರು. ಸುಮಾರು ₹2.38 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿರುವ ಟೂರ್ನಿಯಲ್ಲಿ ಭಾನುವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ಚೀನಾದ ಹಾನ್ ಕಿಯಾನ್ ಕ್ಸಿ ಅವರನ್ನು ಎದುರಿಸಲಿದ್ದಾರೆ.

ಹಾನ್ ಕಿಯಾನ್ ಕ್ಸಿ ಅವರು ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಕಿಮ್ ಗಾ ರಾಮ್ ಅವರನ್ನು 22-20, 18-21, 21-14 ಅಂತರದಿಂದ ಸೋಲಿಸಿದರು. ವಿಶ್ವದ 50ನೇ ಕ್ರಮಾಂಕದ ಅಶ್ಮಿತಾ, ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ 20-22, 21-15, 21-19ರಿಂದ ಅಗ್ರ ಶ್ರೇಯಾಂಕದ ಹಿನಾ ಅಕೆಚಿ ಅವರಿಗೆ ಆಘಾತ ನೀಡಿದ್ದರು. 26 ವರ್ಷದ ಅಸ್ಮಿತಾಗೆ ಇದು ವೃತ್ತಿಜೀವನದ ದೊಡ್ಡ ಗೆಲುವಾಗಿತ್ತು.



ರಕ್ಷಿತಾ ವಿರುದ್ಧ ಮೊದಲ ಗೇಲ್‌ನಲ್ಲಿ ಹಿಡಿತ ಸಾಧಿಸಿದ ಅಶ್ಮಿತಾ 21-13 ರಿಂದ ಪಂದ್ಯವನ್ನು ಮುಗಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗಿ ಬಿದ್ದ ರಕ್ಷಿತಾ 21-16 ಅಂತರದಿಂದ ಗೆದ್ದು ಸಮಬಲ ಸಾಧಿಸಿದರು. ನಿರ್ಣಾಯ ಮೂರನೇ ಸುತ್ತಿನ ಗೇಮ್‌ನಲ್ಲಿ ಮತ್ತೆ ಪುಡಿದೆದ್ದ ಅಶ್ಮಿತಾ, ಮೊದಲ ಗೇಮ್‌ನಂತೆ 21-13 ರಿಂದ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಮುನ್ನಡೆದರು.

'ನಾನು ಫಿಟ್‌ ಆಗದಿರಬಹುದು'; ಸರ್ಫರಾಜ್ ಖಾನ್ ನಿಗೂಢ ಪೋಸ್ಟ್ ವೈರಲ್

ಶುಕ್ರವಾರ ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ರಕ್ಷಿತಾ ಮೂರನೇ ಶ್ರೇಯಾಂಕಿತ ತನ್ವಿ ಶರ್ಮಾ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ್ದರು. ವಿಶ್ವದ 30 ನೇ ಶ್ರೇಯಾಂಕಿತ ತನ್ವಿ ಅವರನ್ನು 61 ನಿಮಿಷಗಳಲ್ಲಿ 18-21, 21-19, 21-18 ಸೆಟ್‌ಗಳಿಂದ ಸೋಲಿದ್ದರು. ಆದರೆ ಅಶ್ಮಿತಾ ಮುಂದೆ ಅವರ ಆಟ ನಡೆಯಲಿಲ್ಲ.